“ಭಾರತಾಂಬೆಯ ಸ್ವಾತಂತ್ರ್ಯ ಜನ್ಮ ದಿನ ಸಾರ್ಥಕತೆಗೆ ಮೆರಗು ತಂದವರಿಗೊಂದು ಸಲಾಂ”…..

ಭಾರತ 15ಅಗಷ್ಠ1947 ರಂದು 200 ವರ್ಷಗಳ ಬ್ರಿಟಿಷರ ಸಂಕೋಲೆಯಿಂದ ಮುಕ್ತಿ ಪಡೆದುದ್ದು ರೋಮಾಂಚನ ಅನೇಕ ಮಹನೀಯರ ರಕ್ತ ಸಿಂಚನದ ಅರಿವು ನಮ್ಮ ದಿನನಿತ್ಯದ ಬದುಕಿನಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದೊಂದಿಗೆ, ಪ್ರಾತ: ಸ್ಮರಣೀಯ ಮಾಡಿದಾಗ ಋಣದ ಭಾರ ಸ್ವಲ್ಪ ತಗ್ಗಿಸಬಹುದು. ನಿಸ್ವಾರ್ಥ ರಣ ಕಣದ ವೀರಶೂರರ ಹೋರಾಟ ಸೌರ್ಯ ಸಾಹಸ ಗಾಥೆ ಇತಿಹಾಸ ಚರಿತ್ರೆ ನೆನೆಯುವುದು ಚಿರ ನೆನಪು ಬಿತ್ತಿ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಎಂದರೆ ನ್ಯಾಯಯುತವಾಗಿರುವುದು, ಅನಾನುಕೂಲ ವಾಗದಿರುವುದು, ಮಾನವನಿಗೆ ಸಹಜವಾಗಿಯೇ ಸಿಗಬೇಕಾದ ಸೌಲಭ್ಯಗಳು ದೊರಕುವದರಲ್ಲಿ ಅಡ್ಡಿ ಆಗಿರುವುದೇ ಸ್ವಾತಂತ್ರ್ಯ. ಪರಕೀಯರ ದಾಸ್ಯದಿಂದ ಅನೇಕರು ತಮ್ಮ ಪ್ರಾಣತ್ಯಾಗ ಮಾಡಿದರು. ಸ್ವಾತಂತ್ರ್ಯ ಯೋಧರ ದಿಟ್ಟ ಹೋರಾಟ ದಿಂದ ಸ್ವಾತಂತ್ರ್ಯ ಪಡೆದಿದ್ದು ಹೆಮ್ಮೆ ಎನಿಸುತ್ತದೆ. ಅಂಹಿಸಾತ್ಮಕ ಪ್ರತಿರೋಧ ಅಸಂಖ್ಯಾತ ವಿಮೋಚನಾ ಹೋರಾಟಗಾರರು, ಮಹಾತ್ಮ ಗಾಂಧಿಜೀ, ಡಾ, ಬಿ.ಆರ್ ಅಂಬೇಡ್ಕರ್, ಸುಭಾಷಚಂದ್ರ ಬೋಸ್,ಚಂದ್ರಶೇಖರ ಅಜಾದ್,ಲಾಲಾ ಡಾ.ರಾಜೇಂದ್ರ ಪ್ರಸಾದ್, ಭಗತ್ ಸಿಂಗ್, ಲಜಪತರಾಯ, ಸರ್ದಾರ್ ವಲ್ಲಭಭಾಯ್ ಪಟೇಲ್,ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಜವಾಹರಲಾಲ್ ನೆಹರು, ಬಾಲಗಂಗಾಧರ ತಿಲಕ್, ಜ್ಯೋತಿಬಾ ಫುಲೆ,ಅಸಂಖ್ಯಾತ ದೇಶ ಭಕ್ತರ ತ್ಯಾಗ ಬಲಿದಾನ ಫಲ ನಮಗಿದೆ.ಸ್ವಾತಂತ್ರ್ಯ ನಮಗೆ ಸಾಂವಿಧಾನ ಶಾಸಕಾಂಗ ಅಧಿಕಾರ ನೀಡಿತು.ಭಾರತ ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ ಆರೋಗ್ಯ, ಸಾಹಿತ್ಯ, ಕ್ರೀಡೆ ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಿದೆ.ಭಾರತೀಯ ವೈದ್ಯಕೀಯ ಪದ್ಧತಿ,ಯೋಗ ವಿಶ್ವಕ್ಕೆ ಮಾದರಿಯಾಗಿದೆ.ಐತಿಹಾಸಿಕ ಘಟನೆಗಳ “ಸಿಂಹಾನುಲೋಕನ ಕ್ರಮ” ಬಿಚ್ಚಿಡುವದು ಯುವ ಜನಾಂಗಕ್ಕೆ ದಾರಿ ದೀಪದಂತೆ ಬೆಳಕು ಮೂಡುವುದು. ಭಾರತೀಯರೆಲ್ಲರೂ ಸ್ವಾತಂತ್ರ್ಯ ಅನುಭವಿಸಲು ಕಾರಣೀಭೂತರಾದ ಸ್ವಾತಂತ್ರ್ಯ ಯೋಧರೆಲ್ಲರಿಗೂ ಮನಃ ಪೂರ್ವಕವಾಗಿ ಅವರ ನೆನಹು ಜೋತೆ ಗೌರವಿತ ಸಲಾಂ ಹೇಳೋದು ನಮ್ಮ ಆದ್ಯ ಕರ್ತವ್ಯವಾಗಿದೆ. ಪ್ರಸ್ತುತ 78 ನೇ. ಸ್ವಾತಂತ್ರೋತ್ಸವದ ಸಾರ್ಥಕತೆ ಮೆರಗು ನೀಡಿದ ಮಹನೀಯರಿಗೆ ಶುಭಾಷಯಗಳು ಹೇಳಲೇ ಬೇಕಾದ ಯೋಧರು, ಜೈಜವಾನ,(ಗಡಿ ಕಾಯುವ ಸೈನಿಕರಿಗೆ) ಜೈಕಿಸಾನ, (ಅನ್ನದಾತರಿಗೆ) ಜೈ ಪ್ರಜಾ ರಾಜರಿಗೆ (ಸಾಮಾನ್ಯ ಮನುಷ್ಯರಿಗೆ), ಜೈ ಜನ ಪ್ರತಿನಿಧಿಗಳಿಗೆ (ಗೌರವಿತವಾಗಿ ಮತದಾನ ದಿಂದ ಆಯ್ಕೆಯಾದ ಸದಸ್ಯರುಗಳಿಗೆ) ಜೈ ನ್ಯಾಯ ದೇವರು ವಕೀಲರು ಕಾನೂನು ಪಂಡಿತರು), ಜೈ ವೈದ್ಯೋ ನಾರಾಯಣ ಹರಿ, (ವೈದ್ಯರುಗಳಿಗೆ ವೈದ್ಯಕೀಯ ಸಿಬ್ಬಂದಿಗೆ) ಜೈಜ್ಞಾನಧಾತರು, (ಶಿಕ್ಷಕರಿಗೆ ಗುರುವೃಂದ, ಗುಣವಂತ ಸುಶಿಕ್ಷಿತರಿಗೆ) ಸತ್ಯಂ ವದ, ಧರ್ಮಂ ಚರ, (ಆರಕ್ಷಕರು, ಅಗ್ನಿಶಾಮಕ ದಳ ಹೋಮ್ ಗಾರ್ಡ್ಸ್) ಜೈ ಸ್ವಚಂ ಆರೋಗ್ಯಂ, (ಪೌರ ಕಾರ್ಮಿಕರು) ಜೈ ಸುಜ್ಞಾನಂ ವಿಜ್ಞಾನಂ, (ತಂತ್ರಜ್ಞಾನ, ವಿಜ್ಞಾನಿಗಳು) ಜೈ ಜಾಗೃತದಾತರು, ಪತ್ರಕರ್ತರು, ಕವಿಗಳು, ಮೌಢ್ಯತೆಯ ಅರಿವು ಮೂಡಿಸುವವರು, ಅನುಭವಸ್ಥರಿಗೆ, ಸುಶಿಕ್ಷಿತರಿಗೆ, ಹಿರಿಯ ನಾಗರಿಕರಿಗೆ ಈ ಶುಭ ಸಂದರ್ಭದ ಸ್ವಾತಂತ್ರೋತ್ಸವದ ಶುಭ ಸಂಭ್ರಮದ ಮೆರುಗು ತಂದವರಿಗೊಂದು ಗೌರವಿತ ಸಲಾಂ ಹೇಳೋಣ,ಜೈ ಭಾರತಾಂಬೆ ನಿನಗೆ ಕೋಟಿ ಕೋಟಿ ಪ್ರಣಾಮಗಳು. “ಜೈಹಿಂದ್” ವಂದೇಮಾತರಂ.
ಲೇಖಕರು,
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ.
ಆರೋಗ್ಯ ನಿರೀಕ್ಷಣಾಧಿಕಾರಿ,
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.