ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾ ಪುರುಷರ ಮತ್ತು ದಿಗ್ಗಜರನ್ನು ನೆನೆಯಿರಿ – ಜಿ.ಪಂ ಸಿ.ಇ.ಓ ರಾಹುಲ್ ಶಿಂಧೆ.
ಬೆಳಗಾವಿ ಆ.16

ಜಿಲ್ಲಾ ಪಂಚಾಯತ ಆವರಣದಲ್ಲಿ 78 ನೇ. ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಮಹನೀಯರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹನ ಮಾಡುವ ಮೂಲಕ ಅವರು ಮಾತನಾಡಿದರು.ಎಲ್ಲಾ ಸಿಬ್ಬಂದಿಗಳಿಗೆ 78 ನೇ. ಸ್ವಾತಂತ್ರ ದಿನಾಚರಣೆಯ ಶುಭಾಷಯಗಳು ತಿಳಿಸುತ್ತಾ ಅನೇಕ ದಿಗ್ಗಜರು, ಮಹಾ ಪುರುಷರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿರುತ್ತಾರೆ ಅಂತಹವರನ್ನು ನೆನೆಯುವ ದಿವಸ ಇದಾಗಿದೆ. ಅದರ ಜೊತೆಗೆ ಸ್ವಾತಂತ್ರ್ಯ ಸಿಕ್ಕು ನಮಗೆ 77 ವರ್ಷವಾಗಿದೆ ನಮ್ಮ ದೇಶವೂ ಪ್ರಗತಿ ಹೊಂದಿದೆ ನಾವೂ ಇನ್ನೂ ಬಹಳಷ್ಟು ಕ್ಷೇತ್ರಗಳಲ್ಲಿ ಪ್ರಗತಿ ಹೊಂದ ಬೇಕಾಗಿದೆ.

ಸ್ವಾತಂತ್ರ್ಯವನ್ನು ನಾವೂ Taken for granted ಎಂದು ಭಾವಿಸಿದಲ್ಲಿ ನಮಗೆ ಅದರ ಅರ್ಥ ಗೊತ್ತಾಗುವುದಿಲ್ಲ ಮುಂದಿನ ಪೀಳಿಗೆಗೆ ಕೂಡಾ ಸ್ವಾತಂತ್ರ ಅಂದರೆ ಏನು ಅದನ್ನು ಪಡೆಯಲು ದೇಶಕ್ಕಾಗಿ ಪ್ರಾಣತೆತ್ತ ಮಹಾ ಪುರುಷರ ಕಥೆಯನ್ನು ಅವರುಗಳಿಗೆ ತಿಳಿಸ ಬೇಕಾಗುತ್ತದೆ ಅಂದಾಗ ಮಾತ್ರ ನಾವೂ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ.ನಮ್ಮ ಸಂವಿಧಾನದ ಪ್ರಿಯಾಂಬಲ್(ಮುನ್ನುಡಿ)ಯಲ್ಲಿ ತಿಳಿಸಿದ ಅಂಶಗಳಾದ ನ್ಯಾಯ,ಸಮಾನತೆ ಹಾಗೂ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಇವುಗಳನ್ನು ಎಲ್ಲರೂ ಅರ್ಥ ಮಾಡಿಕೊಂಡು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಗ್ರಾಮೀಣ ಅಭಿವೃದ್ಧಿಯಲ್ಲಿ ಜಿಲ್ಲಾ ಪಂಚಾಯತಿಯ ಪಾತ್ರ ಬಹಳ ಪ್ರಮುಖವಾಗಿದೆ. ಬಡತನ ನಿರ್ಮೂಲನ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ವ್ಯವಸ್ಥೆಗಳನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು.

ಎಲ್ಲರೂ ತಮ್ಮ ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದಲ್ಲಿ ಮಾತ್ರ ನಮ್ಮ ಪೂರ್ವಜರು ಕಂಡ ಕನಸು ನನಸಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ರವರು ಜಿಲ್ಲಾ ಪಂಚಾಯತ ಸಿಬ್ಬಂದಿ ವರ್ಗದವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಶಿಕ್ಷಣಾಧಿಕಾರಿ ಬಿಸಿಊಟ ಯೋಜನೆ ಲಕ್ಷ್ಮಣ ಯಕ್ಕುಂಡಿ, ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಸಹಾಯಕ ನಿರ್ದೇಶಕ ಜಯಶ್ರೀ ನಂದೆಣ್ಣವರ, ಕಛೇರಿ ಅಧೀಕ್ಷಕ ಬಸವರಾಜ್ ಮುರಘಾಮಠ ಹಾಗೂ ಜಿಲ್ಲಾ ಪಂಚಾಯತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.#RDPR #RDWSD #HAPPY_78th_INDEPENDENCE_DAY#FLAG_HOISTING
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಎಂ. ಶರ್ಮಾ ಬೆಳಗಾವಿ.