ಅಮೀನಗಡದಲ್ಲಿ ಲೇಡಿ ಕಿರಣ್ ಬೇಡಿ – ಪಿ.ಎಸ್.ಐ ಜ್ಯೋತಿ ವಾಲಿಕಾರ್.

ಅಮೀನಗಡ ಆ.16

ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಪುಂಡರ ಅಟ್ಟಹಾಸಕ್ಕೆ ಬ್ರೆಕ್ ಹಾಕಿದ ಲೇಡಿ ಕಿರಣ ಬೇಡಿ ಎಂದೆ ಜನ ಮಣ್ಣನೆ ಪಡೆಯುತ್ತಿರುವ P.S.I ಜ್ಯೋತಿ ವಾಲಿಕಾರ ವಿಜಯಪುರ ನಗರದ ಆದರ್ಶ ಪೊಲೀಸ್ ಠಾಣೆಯಿಂದ ಹುನಗುಂದ ತಾಲೂಕಿನ ಕರದಂಟು ನಗರಿ ಅಮೀನಗಡ ಠಾಣೆಗೆ ಕಾನೂನು ಸುವ್ಯವಸ್ಥೆ ಠಾಣಾ ಅಧಿಕಾರಿಯಾಗಿ ಇತ್ತೀಚ್ಚಿಗೆ ಚಾರ್ಜ್ ಪಡೆದ ಶ್ರೀಮತಿ ಜ್ಯೋತಿ ಅವರು. ಅಮೀನಗಡ ನಗರದ ಸುತ್ತ ಸಾಯಂಕಾಲ ೭:೩೦ ರಿಂದ ರಾತ್ರಿ ೧೧ ಗಂಟೆ ಆದರೂ ರಸ್ತೆ ಪಕ್ಕದಲ್ಲಿ ಗುಂಪು ಗುಂಪಾಗಿ ಕುಳಿತು ಮಧ್ಯಪಾನ ಮಾಡಿ ಎಲ್ಲೆಂದರಲ್ಲಿ ಮಧ್ಯದ ಬಾಟಲಿ, ಹಾಗೂ ನೀರಿನ ಬಾಟಲ್, ಪೌಚ್, ಬಿಸಾಡಿ ಮನೆಯ ಕಬರಿಲ್ಲದೆ ರಸ್ತೆ ಮೇಲೆ ಕುಡಿದು ಗಲಾಟೆ ಮಾಡುವ ಪುಂಡರಿಗೆ ಸಿಂಹ ಸಪ್ನವಾಗಿ ಇಂದು ೧೦ ಕ್ಕೂ ಹೆಚ್ಚು ಬೈಕ್ ವಶ ಪಡಿಸಿಕೊಂಡು ಅವರಿಗೆ ಬುದ್ದಿ ಹೇಳಿ ವಾರ್ನ್ ಮಾಡಿದ ಪ್ರಸಂಗ ಇಂದು ನಡೆಯಿತು. ಅಮೀನಗಡ ಠಾಣೆಗೆ ಒಳಪಟ್ಟ ಗೂಡುರು, ಮುರಡಿ, ಗಾನದಾಳ, ಭೀಮನಗಡ, ಇಲಾಳ, ಗ್ರಾಮದಲ್ಲಿ ಓಸಿ, ಮಟಕ ದಂದೆಗಳು ಜೋರಾಗಿ ಕೇಳಿ ಬರುತ್ತಿದ್ದು. ಈ ಬಗ್ಗೆ ಜೂಜುಕೋರರ ಹೆಡೆ ಮುರಿ ಕಟ್ಟುವ ಭರವಸೆ ನೀಡಿದ್ದು. ಸಮಾಜದಲ್ಲಿ ಅತ್ಯುತ್ತಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ನಗರದಲ್ಲಿ ಅಕ್ರಮ ಮರಳು ಮಾಪಿಯಾ, ಅಕ್ರಮ, ಮೈನ್ಸ, ಹಾಗೂ ಪ್ರತಿ ವಾರ ಅಮೀನಗಡ ಪಟ್ಟಣದಲ್ಲಿ ನಡೆಯುವ ಕುರಿ, ಧನದ ಸಂತೆ ದಿನ ವಾಹನ ಸವಾರರಿಗೆ ಓಡಾಡಲು ತೊಂದರೆ ಆಗುತ್ತಿದ್ದು. ಈ ಬಗ್ಗೆ ಠಾಣಾ ಅಧಿಕಾರಿ ಜ್ಯೋತಿ ಅವರು ಗಮನ ಹರಿಸಿ ಸಂಚಾರಕ್ಕೆ ಅನುಕೂಲ ಮಾಡಲು ಎಷ್ಟರ ಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಒಟ್ಟಾರೆ ಲೇಡಿ ಕಿರಣ ಬೇಡಿ ಎಂದೆ ಸಾರ್ವಜನಿಕ ರಂಗದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಶ್ರೀಮತಿ ಜ್ಯೋತಿ ವಾಲಿಕಾರ ಅವರ. ಸೇವೆ ಹೀಗೆ ನಿರಂತರವಾಗಿ ಮುಂದುವರಿ ಲೆಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್ ಕೂಡ ಆಶಿಸುತ್ತದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button