ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
ಇಲಕಲ್ಲ ಆ.16

ಆಗಷ್ಟ 15 ರಂದು 78 ನೇ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್.ಐ.ಓ (SIO) ಮತ್ತು ಸಾಲಿಡಾರಿಟಿ ಇಳಕಲ್ಲ ವತಿಯಿಂದ ನಗರದ ಅಶ್ಫಾಖ್ ಉಲ್ಲಾ ಖಾನ್ ಚೌಕ್ ನಲ್ಲಿ “47 ರ ಸ್ವಾತಂತ್ರ್ಯ ಮತ್ತದರ ಕನಸು – ಸ್ವಾತಂತ್ರ್ಯ ಹೋರಾಟಗಾರರು ಬಯಸಿದ ಭಾರತ” ಎಂಬ ಶೀರ್ಷಿಕೆಯಡಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮಹಮ್ಮಿಕೊಂಡಿದ್ದರು.

ಅಜರುದ್ದೀನ್ ಹಲ್ಯಾಲ್-UPSC CAPF – Assistant Commandant ಹುದ್ದೆಗೆ ಆಯ್ಕೆಯಾದವರು, ಗಂಗಮ್ಮ ಆರೇರ (ರಂಗಭೂಮಿ ಕಲಾವಿದೆ) ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪಡೆದವರು, ಸಿತಿಮಾ ವಜ್ಜಲ್ ಯುವ ಪತ್ರಕರ್ತರು ಹಂಪಿಯ ಕನ್ನಡ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪದವಿಗಳಿಸಿದ ಮಹನೀಯರಿಗೆ ಗೌರವಿಸಿ ಸತ್ಕರಿಸಲಾಯಿತು.

ನಗರದ ಖಾಜಿ ಬಾವುದ್ದೀನ್ ಸರ್, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಎಸ್.ಐ.ಓ.ಮತ್ತು ಸಾಲಿಡಾರಿಟಿ ಮುಖಂಡರು, ಹೊಸಪೇಟಗಲ್ಲಿಯ ಯುವಕರು, ಹಿರಿಯರು ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.