ಭಾರತ ವಿದ್ಯಾರ್ಥಿ ಫೆಡರೇಷನ್ (SFI) ವತಿಯಿಂದ ತಾಲೂಕ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ.
ಹೊಸಪೇಟೆ ಆ.16

ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್.ಎಫ್.ಐ)ನ ತಾಲೂಕ ಸಮಿತಿ ನೂತನ ತಾಲೂಕ ಅಧ್ಯಕ್ಷರಾಗಿ ಲಕ್ಷ್ಮಿ ಬೂನಹಳ್ಳಿ, ಅವರು ಆಯ್ಕೆ ಯಾಗಿದ್ದಾರೆ. ಹಾಗೂ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್.ಎಚ್ ಅವರು ಆಯ್ಕೆ ಯಾಗಿದ್ದಾರೆ. ದಿನಾಂಕ 7/8/2024 ರಂದು ಸರಕಾರಿ ನೌಕರರ ಭವನ ಹೊಸಪೇಟೆಯಲ್ಲಿ ನಡೆದ ತಾಲೂಕ ಸಮಾವೇಶದಲ್ಲಿ 23 ಜನರ ನೂತನ ಸಮಿತಿಯನ್ನ ರಚಿಸಿ 10 ಜನರ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ದೊಡ್ಡ ಬಸವರಾಜ್ ಜಿಲ್ಲಾ ಅಧ್ಯಕ್ಷರು ಅವಿಭಜಿತ ಬಳ್ಳಾರಿ ಜಿಲ್ಲೆ ಇವರು ಸಮಾವೇಶಕ್ಕೆ ಮಾರ್ಗದರ್ಶನ ನೀಡಿದ್ದರು. ಹಾಗೂ ಎಸ್.ಎಫ್.ಐ ಜಿಲ್ಲಾ ಸಮ್ಮೇಳನವು ದಿನಾಂಕ, 17. 18. ರಂದು ಆಗಸ್ಟ್ 2024 ರಂದು ಹೊಸಪೇಟೆ ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ. ದಿನಾಂಕ, 17 ಬಹಿರಂಗ ಸಭೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರಾದ ನಿತೀಶ್ ನಾರಾಯಣ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ.