‘ರಕ್ಷಣೆ ಕೊಡುವ ಬಂಧನ’ – “ರಕ್ಷಾ ಬಂಧನ”…..

ಜನುಮ ಜನುಮ ಸಂಬಂಧ ಬೆಸೆಯುವ
ರಕ್ಷಾಬಂಧನ
ಸಹೋದರ ಸಹೋದರಿಯ ಬಾಂಧವ್ಯ
ಸಂಕೇತ ರಕ್ಷಾಬಂಧನ
ಪ್ರೀತಿ ರಕ್ಷಣೆ ಬದ್ಧತೆಯನ್ನು ಪ್ರತಿ ಬಿಂಬಿಸುವ
ರಕ್ಷಾಬಂಧನ
ಸೋದರತೆಯ ಸಂಭ್ರಮದ ಹಬ್ಬವೇ
ರಕ್ಷಾಬಂಧನ.
ರಕ್ಷೆಯು ನಮ್ಮೆಲ್ಲರ ಮನಸ್ಸಲ್ಲೂ ಸೋದರತ್ವದ
ಭಾವನೆ ಮೂಡಿಸಲಿ
ಕನಸುಗಳು ನೂರಿರಲಿ ಸಂರಕ್ಷಣೆ ಹೊಣೆ
ನನಗಿರಲಿ
ಸಹೋದರ ಮತ್ತು ಸಹೋದರಿಯ ನಡುವಿನ
ಬಂಧವನ್ನು ಬಿಗಿಯಾಗಿಸಲಿ
ಪ್ರತಿ ದಿನವೂ ನಮ್ಮ ನಡುವಿನ ಪ್ರೀತಿಯ ಬಂಧವು ಗಟ್ಟಿಯಾಗಲಿ.
ಸಾಮರಸ್ಯ ಸಹೋದರತ್ವ ಪ್ರತೀಕ
ರಕ್ಷಾಬಂಧನ
ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ
ರಕ್ಷಾಬಂಧನ
ಸಹನೆ ಸಹಕಾರ ತೋರಿಸಿ ಪ್ರೇಮ ಶಿಖರೇರಿದ
ರಕ್ಷಾಬಂಧನ
ರಕ್ಷಣೆ ಕೊಡುವ ಬಂಧನ ರಕ್ಷಾಬಂಧನ.
ಸಹೋದರಿಯು ಸಮಾಜದ ದುಷ್ಟ ಶಕ್ತಿಗಳಿಂದ
ರಕ್ಷಿಸಲೆಂದು
ಸಹೋದರನ ಮುಂಗೈಗೆ ರಾಖಿ ಕಟ್ಟುವಳು
ಇಂದು
ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ
ತಂಗಿಯಿಂದ ಎಂದು
ಪರಸ್ಪರ ಭ್ರಾತೃತ್ವದ ಭಾವನೆಯನ್ನು
ದಟ್ಟಗೊಳಿಸುವ ಹಬ್ಬವಿಂದು.
ನಮ್ಮ ಪ್ರೀತಿ ಮತ್ತು ಕಾಳಜಿ ಬಂಧವು
ಎಂದಿಗೂ ಮುರಿಯದಿರಲಿ
ನಮ್ಮ ಪ್ರೀತಿ ಮತ್ತು ಬಾಂಧವ್ಯ ಜೀವ
ಮಾನವಿಡೀ ಉಳಿಯಲಿ
ನಮ್ಮ ಸಹೋದರ ಸಂಬಂಧವು ಕಬ್ಬಿಣದಂತೆ
ಗಟ್ಟಿಯಾಗಿರಲಿ
ಪ್ರತಿ ವರ್ಷವೂ ನಮ್ಮ ಪ್ರೀತಿಯ ಬಂಧವು ಗಟ್ಟಿಯಾಗುತ್ತಿರಲಿ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ