“ತಣ್ಣೀರು” ಆಲ್ಬಂಸಾಂಗ್ ಬಿಡುಗಡೆ.
ಬೆಂಗಳೂರು ಆ.19

ಇದೀಗ ಉತ್ತರ ಕರ್ನಾಟಕದ ಯುವ ಪ್ರತಿಭೆ ನಿರ್ದೇಶಿಸಿರುವ ಮತ್ತು ಹೊಸ ಪ್ರತಿಭೆಗಳು ಅಭಿನಯಿಸಿರುವ “ತಣ್ಣೀರು” ಕಣ್ಣೀರಿನ ಹನಿ ಮಿಲನ ಎಂಬ ಟ್ಯಾಗ್ ಲೈನ್ ಹೊಂದಿದ ಆಲ್ಬಂಸಾಂಗ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿದೆ. ಹುಡುಗರು ತಾನು ಪ್ರೀತಿಸಿದ ಹುಡುಗಿಗೆ ಎಷ್ಟೇ ಕಾಳಜಿ ಮಾಡಿ, ಎಷ್ಟೇ ಪ್ರೀತಿ ತೋರಿಸಿದ್ದರು ಕೊನೆಗೆ ಬಿಟ್ಟು ಹೋಗುತಾರೆ. ಯಾವುದೇ ಕಾರಣಕ್ಕೂ ಪ್ರೀತಿ ಸ್ವಾರ್ಥ ಆಗಬಾರದು ಸ್ಫೂರ್ತಿ ಆಗಬೇಕು ಅನ್ನೋದೇ ಈ ಗೀತೆಯ ಸಾರ. ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಹಲವಷ್ಟು ನಾಟಕಗಳು ನಿರ್ದೇಶನ ಮಾಡಿ ಕಳೆದ ಎಂಟು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿ ಕೊಂಡು ಹಲವಾರು ಚಿತ್ರಗಳಿಗೆ ಧಾರಾವಾಹಿಗಳಿಗೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ವಿಜಯಪೂರ ಮೂಲದ ಉತ್ಸಾಹಿ ಯುವಕ ಪವನ್ ಕುಮಾರ್ ಬೂದಿಹಾಳ ನಿರ್ದೇಶನ ಮಾಡಿದ್ದಾರೆ.

ಮುಖ್ಯ ಕಲಾವಿದರಾಗಿ ಜೀ ಕನ್ನಡದಲ್ಲಿ ಸರಿಗಮಪ ಡಿಕೆಡಿ ಅಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಶ್ರೀಧರ ಈ ಹಾಡಿಗೆ ನಾಯಕ ನಟನಾಗಿದ್ದಾರೆ. ನಟಿ ನಿಧಿಗೌಡ, ದೀಕ್ಷಿತಾ, ಮಧು, ಪೀರು, ನವೀನ್, ರವಿ ಕರಿಚಿರತೆ, ಅಭಿನಯಿಸಿದ್ದು ಸಹಜ ಆಭಿನಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಯಾಗಿದ್ದಾರೆ. ಬೆಂಗಳೂರ ಸುತ್ತಮುತ್ತ ಚಿತ್ರೀಕರಣ ನಡೆಸಲಾದ ಈ ಹಾಡಿನ ತಾಂತ್ರಿಕ ವರ್ಗದಲ್ಲಿ ಛಾಯಾ ಗ್ರಹಣ ಚಂದ್ರಸೇನ , ಸಂಕಲನ ಜಸ್ವವಂತ, ಫಯಾಜ್ ಕುಷ್ಟಗಿ ಮ್ಯೂಜಿಕ್, ಗುಡ್ಡಪ್ಪ ಮಾಸ್ತರ, ಯಲಿವಾಲ ಉಪ್ಪಾರ, ಯಲ್ಲಪ್ಪ ಮಾಸ್ತರ ಸಾಹಿತ್ಯ ರಚಿಸಿದ್ದಾರೆ. ಜಿ.ಪಿ,ಕೋರಿಯೋಗ್ರಾಫರ್ ನವೀನ ಎಂಜೆ, ಚಂದುಳ್ಳಿ ಚೆಲುವೆ ಖ್ಯಾತಿಯ ಗುಡ್ಡಪ್ ಮಾಸ್ತರ ಹಳಿಯಾಳ ಹಾಡಿದ್ದು , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ, ಕಲ್ಪನೆ ಮತ್ತು ನಿರ್ದೇಶನವನ್ನು ಪವನಕುಮಾರ ಬೂದಿಹಾಳ ಮಾಡಿದ್ದಾರೆ. ಕಾವೇರಿ ನಾಗಪ್ಪ ಹನಗುಂದಿ ನಿರ್ಮಿಸಿದ್ದಾರೆ. ನಿಧಿಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು ಬಿಡುಗಡೆಯಾಗಿದ್ದು. ಎಲ್ಲರೂ ವೀಕ್ಷಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಯಿಸ ಬೇಕು ಎಂದು ನಿರ್ದೇಶಕ ಪವನಕುಮಾರ ತಿಳಿಸಿದ್ದಾರೆ.
*****
ವರದಿ:ಡಾ, ಪ್ರಭು ಗಂಜಿಹಾಳ
ಮೊ : ೯೪೪೮೭೭೫೩೪೬