ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾವಲಿ ಶಿವಪ್ಪ ನಾಯಕ, ಉಪಾಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಪ್ರಭಾಕರ್ – ಆಯ್ಕೆ.
ಕೂಡ್ಲಿಗಿ ಆ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣ ಪಂಚಾಯತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಚುನಾವಣೆ ನಡೆದಿದ್ದು ಸೋಮವಾರ ರಂದು ಮಾನ್ಯ ತಾಲೂಕು ದಂಡಧಿಕಾರಿಗಳು ಹಾಗೂ ಚುನಾವಣೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಈ ಹಿಂದೆ ಮೊದಲನೇ ಅವಧಿಯಲ್ಲಿ ಪಟ್ಟಣ ಪಂಚಾಯತಿಯನ್ನು ಬಿ.ಜೆ.ಪಿ ಪಕ್ಷದ ಸದಸ್ಯರಾದ ಶ್ರೀ ಮತಿ ಶಾರದಾ ಬಾಯಿ ಯವರು ಎರಡು ವರ್ಷ ಐದು ತಿಂಗಳು ಅಧಿಕಾರ ನಡೆಸಿದ್ದು ನಂತರ ಎರಡನೇ ಅವಧಿಯ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಕೋರ್ಟ್ ಮೊರೆಗೆ ಒ.ಬಿ.ಸಿ ಮೀಸಲಾತಿಯ ಬಗ್ಗೆ ಟಿ.ಪಿ. ಹಾಗೂ ಝೆಡ್.ಪಿ ಯ ಸಲುವಾಗಿ ಕೋರ್ಟ್ಗೆ ತೆರಳಿದ್ದು. ನಂತರ ಕೋರ್ಟ್ ತೀರ್ಪು ಆಗಸ್ಟ್ ತಿಂಗಳಲ್ಲಿ ತೆರೆ ಹೇಳೆದಿದ್ದು ಆಗಸ್ಟ್ 19 ರಂದು ಪಟ್ಟಣ ಪಂಚಾಯತಿ ಚುನಾವಣೆ ನಡೆದಿದ್ದು. ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯತಿಯಲ್ಲಿ ಸಾಮಾನ್ಯ ಸ್ಥಾನ ಇದ್ದು. ಈ ಅಧ್ಯಕ್ಷರ ಸ್ಥಾನಕ್ಕೆ ಕೋರ್ಟ್ ತೀರ್ಪು ಪ್ರಕಾರ ಎರಡನೇ ಅವಧಿಯ ಚುನಾವಣೆ ನಡೆದ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಗೆ ಸೋಮವಾರ ರಂದು ಅವಿರೋಧ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಕಾವಲಿ ಶಿವಪ್ಪ ನಾಯಕ ರವರನ್ನು (ಕಾಂಗ್ರೇಸ್) ತೆಕ್ಕೆಗೆ ಒಲಿದು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನ ಇದ್ದು ಈ ಸ್ಥಾನಕ್ಕೆ ಕಾಂಗ್ರೆಸ್ಸಿನ ಇಬ್ಬರು ಸದಸ್ಯರುಗಳಾದ ಶ್ರೀಮತಿ ಲೀಲಾವತಿ ಪ್ರಭಾಕರ್ ಹಾಗೂ ದಾಣಿ ಚೌಡಮ್ಮ ರವರುಗಳು ನಾಮ ಪತ್ರವನ್ನು ಸಲ್ಲಿಸಿ ಪೈಪೋಟಿಯಲ್ಲಿದ್ದು ತೆರೆವಾದ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷದ ಮುಖಂಡರುಗಳು ದಾಣಿ ಚೌಡಮ್ಮ ರವರನ್ನು ತಮ್ಮ ನಾಮ ಪತ್ರ ಹಿಂತೆಗೆದು ಕೊಳ್ಳುವoತೆ ಮನವೊಲಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಲೀಲಾವತಿ ಪ್ರಭಾಕರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೂ ಮಾನ್ಯ ಶಾಸಕರು ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ಶುಖುರು ಆಯ್ಕೆಯಾದರು. ಎಸ್ಸಿ/ಎಸ್ಟಿ ಹಾಗೂ ಒ.ಬಿ.ಸಿ ಒಳಗೊಂಡು ಅಧಿಕಾರದ ಸ್ಥಾನ ಮಾನಗಳನ್ನು ಸಂವಿಧಾನಾತ್ಮಕವಾಗಿ ಸಮಾನತೆಯ ದೃಷ್ಟಿಯನ್ನು ಇಟ್ಟು ಕೊಂಡು ತೆರವಾದ ಸ್ಥಾನಗಳನ್ನು ತುಂಬಲು ಪ್ರಮುಖವಾಗಿ ಶಾಸಕರು ಜವಾಬ್ದಾರಿಯನ್ನು ವಹಿಸಿ ಕೊಂಡು ಎಲ್ಲಾ ಸಮುದಾಯದ ಜನರಿಗೆ ಅಧಿಕಾರ ಸಿಗುವಂತೆ ಮಾಡಿ ಎಲ್ಲಾ ಜನ ಸಾಮಾನ್ಯರು ಎನ್.ಟಿ.ಶ್ರೀನಿವಾಸ್ ರವನ್ನು ಸದಸ್ಯರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಮಾನಗಳನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳಾದ ಎಂ.ರೇಣುಕಾ ರವರು ಸುದ್ದಿ ಮಾಧ್ಯಮದ ಮೂಲಕ ಚುನಾವಣೆಯ ಪ್ರಕಟಣೆಯನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಡಿ.ವೈ.ಎ.ಸ್ಪಿ ಮಲ್ಲೇಶಪ್ಪ ಮಲ್ಲಾಪುರ್, ಹಾಗೂ ಸಿ.ಪಿ.ಐ ತಳವಾರ್ ಸುರೇಶ್ ಮತ್ತು ಪಿ.ಎಸ್.ಐ.ಪ್ರಕಾಶ್ ರವರ ಬಿಗಿ ಬಂದೋಬಸ್ತ್ ನೊಂದಿಗೆ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಈ ತುಕಾರಾಂ ರವರು ಹಾಜರಿದ್ದು. ಹಾಗೂ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಮುಗುಳಿ, ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಗುರು ಸಿದ್ದನಗೌಡ್ರು, ಕಾಂಗ್ರೆಸ್ ಮುಖಂಡರಾದ ಅಶ್ವಮೇಧ ಮಲ್ಲಿಕಾರ್ಜುನ್, ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸುನಿಲ್ ಗೌಡ್ರು, ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ, ಎಸ್.ಸುರೇಶ್ ಕಾಂಗ್ರೆಸ್ ಮುಖಂಡ ಹಾಗೂ ವಾಲ್ಮೀಕಿ ಸಂಘದ ಅಧ್ಯಕ್ಷರು ಕಾಂಗ್ರೆಸ್ ಎಸಿ ಮೋರ್ಚದ ಜಿಲ್ಲಾ ಉಪಾಧ್ಯಕ್ಷರಾದ ಡಿ ಎಚ್ ದುರ್ಗೇಶ್ ಭಾಗವಹಿಸಿದ್ದು. ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಾನ್ಯ ಸಂಸದರು ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರುಗಳು ಸಿಹಿ ತಿನಿಸುವುದರೊಂದಿಗೆ ಪಟಾಕಿ ಹಚ್ಚಿ ಸಂಭ್ರಮಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ