ವಿಶ್ವ ಕನ್ನಡ ರಾಜ್ಯ ಮಟ್ಟದ ಐದನೇ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನ ಜರುಗಿತು.
ಹುಲಿಕೆರೆ ಆ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರ ಸಜ್ಜನ್ ಹುಲಿಕೆರೆ ಇವರ ತೋಟದಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ವಿಶ್ವ ಕನ್ನಡ ರಾಜ್ಯಮಟ್ಟದ ಐದನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡುವುದರ ಜೊತೆಗೆ ವಿಶೇಷವಾಗಿ ಪರಿಸರ ಜಾಗೃತಿ ಅಭಿಯಾನ ಮತ್ತು ರೈತ ಚಿಂತನೆಗಳ ಒಂದು ಅಭೂತಪೂರ್ವ ಕಾರ್ಯಕ್ರಮ ಜರುಗಿದ್ದು. ಒಂದು ವಿಶೇಷವಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಅನೇಕ ಕವಿಗಳು ಕವನ ವಾಚಕರು ಸಾಹಿತಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾನ ಮಡಗಿನ ಶ್ರೀ ಐಮುಡಿ ಶರಣಾರ್ಯರು ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿವಿಧ ಜಿಲ್ಲೆಗಳಿಂದ ಬಂದಿರುವುದು ಅದು ಕೂಡ್ಲಿಗಿ ತಾಲೂಕಿನಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದ್ದು. ಅದರಲ್ಲಿ ಪರಿಸರ ಜಾಗೃತಿ ಮತ್ತು ರೈತರ ವಿಚಾರ ಸಂಕೀರ್ಣ ನಡೆಸಿದ್ದು ಇನ್ನೂ ಹೆಚ್ಚು ಅರ್ಥ ಗರ್ಭಿತವಾದ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ವಿಶ್ವೇಶ್ವರ ಸಜ್ಜನ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೀಣಿಸುತ್ತಾ ಬಂದಿದ್ದು ಅವೈಜ್ಞಾನಿಕ ಕೃಷಿ ಪದ್ಧತಿಯ ಇದಕ್ಕೆಲ್ಲ ಕಾರಣ ಎಂದು ಹೇಳಿದರು ಏಕ ಬೆಳೆಯನ್ನು ಬೆಳೆಯುವುದರ ಬದಲು ಮರ ಆಧಾರಿತ ಕೃಷಿಗಳನ್ನು ಮಾಡಿ ಅನೇಕ ಆದಾಯಗಳನ್ನು ಕೂಡ ಪಡೆಯಬಹುದು ಎಂದು ಹೇಳಿದರು ಸಂಸ್ಥಾಪಕ ಅಧ್ಯಕ್ಷರಾದ ರವೀಶ್ (ಅಕ್ಕರ) ವರು ಮಾತನಾಡಿ ಇಂತಹ ಒಂದು ಪ್ರಕೃತಿಯ ಮಡಿಲಿನಲ್ಲಿ ವೈವಿಧ್ಯಮಯ ತೋಟದಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಿರುವುದು ನಮಗೆಲ್ಲ ತುಂಬಾ ಖುಷಿಯಾದ ವಿಚಾರ ಎಂದು ಹೇಳಿದರು.

ಅದರಲ್ಲೂ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ರೀತಿಯ ಬರಹಗಾರರು ಚಿಂತಕರು ಸಾಹಿತಿಗಳನ್ನು ಹೊಂದಿರುವ ತಾಲೂಕು ಕೂಡ್ಲಿಗಿ ಎಂದು ಹೇಳಿದರು. ಬರದ ನಾಡಲ್ಲೂ ಕೂಡ ಅನೇಕ ರೀತಿಯ ಹೊಸ ಹೊಸ ಅವಿಷ್ಕಾರಗಳನ್ನು ಮಾಡಿ ಕೃಷಿಯಲ್ಲಿಯೂ ಕೂಡ ಸಮೃದ್ಧಿಯಿಂದ ಬೆಳೆಯುವ ಅನೇಕ ರೈತರನ್ನು ಇಲ್ಲಿ ಕಾಣಬಹುದು ಎಂದು ಹೇಳಿದರು. ಭೀಮಣ್ಣ ಗಜಪುರ ಇವರು ಮಾತನಾಡಿ ನಮ್ಮ ತಾಲೂಕು ಹಿಂದಿನಿಂದಲೂ ಕೂಡ ಅನೇಕ ಪರಂಪರೆಗಳನ್ನು ಉಳಿಸಿ ಕೊಂಡು ಬಂದಿದೆ ಪತ್ರಿಕಾ ರಂಗ ಎನ್ನುವುದು ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಆಗಿ ಮಾರ್ಪಟ್ಟಾಗಿದೆ ಹಾಗೂ ಶಿಕ್ಷಣವು ಕೂಡ ಶಿಕ್ಷಣ ಉದ್ಯಮವಾಗಿ ಕಾರ್ಯ ನಿರ್ವಹಿಸುತ್ತಿದೆ ಪತ್ರಕರ್ತರು ಯಾವುದೇ ರೀತಿಯ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ವಸ್ತು ನಿಷ್ಠೆಯ ವರದಿಯನ್ನು ಮಾಡುತ್ತ ಹಳ್ಳಿಗಳ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವುದರ ಮುಖಾಂತರ ಹಳ್ಳಿಗಳ ಸಮಸ್ಯೆಗಳನ್ನು ಬಗೆಹರಿಸಿ ವಂತಾಗಬೇಕು ಸಮಾಜವನ್ನು ತಿದ್ದುವ ಕೆಲಸ ನಮ್ಮದಾಗಬೇಕು ಎಂದರು ಸಮ್ಮೇಳನ ಅಧ್ಯಕ್ಷರು ಮಹೇಂದ್ರ ಕುರುಡಿ ಅವರು ಕಾರ್ಯಕ್ರಮವನ್ನು ವಿಶ್ವೇಶ್ವರ ಸಜ್ಜನ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಉದ್ಘಾಟಿಸಿದರು.

ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಭೀಮಣ್ಣ ಗಜಾಪುರ ವರದಿಗಾರರು ಸಾಹಿತಿಗಳು, ವ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಈ ರವೀಶ್ , ಉಪನ್ಯಾಸಕರಾದ ವಸಂತ್ ಸಜ್ಜನ್, ಆರ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಯು ನಾಗೇಶ್, ಕವಿಗೋಷ್ಠಿ ಅಧ್ಯಕ್ಷರಾಗಿ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎನ್.ಎಂ ರವಿಕುಮಾರ್, ಹೋಬಳಿ ಘಟಕದ ಅಧ್ಯಕ್ಷರಾದ ಎನ್ ಎಸ್ ತಿಪ್ಪೇಸ್ವಾಮಿ, ನಿರಂಜನ್ ಕುಮಾರ್, ನವೀನ್ ಬಿ ಸಜ್ಜನ್, ಕೆ ಸಿ ಹೊರಕೇರಪ್ಪ, ಶಂಕ್ರಣ್ಣ ಗುಬ್ಬಿ, ಡಾ. ಸಿದ್ದಲಿಂಗಯ್ಯ ಹೊರತಾಳು,ಎಚ್ ಎಚ್ ಶಫಿ,ವಿನಾಯಕ, ದಯಾನಂದ ಸಜ್ಜನ್, ಅರವಿಂದ್ ಸಜ್ಜನ್, ವಿವೇಕ್ ಸಜ್ಜನ್, ಡಾಕ್ಟರ್ ನವೀನ್ ಬಿ ಸಜ್ಜನ್ , ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್.ವೀರೇಶ್, ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಅಭಿನವ ಮಹಿಳಾ ತಂಡ ಶಿವಮೊಗ್ಗ, ಶ್ರೀ ಗುರು ಕೊಟ್ಟೂರೇಶ್ವರ ಭರತನಾಟ್ಯ ಕೊಟ್ಟೂರು, ಶಿವರಾತ್ರೇಶ್ವರ ಜನಪದ ಕಲಾ ನಿಕೇತನ ಕೊಟ್ಟೂರು, ವೀರಗಾಸೆ ನೃತ್ಯ, ಸವಿತಾ, ಪಾರ್ವತಮ್ಮ ಮಂಜಣ್ಣ, ಶ್ವೇತ, ಶೈಲಜಾ ಬಾಬು, ಕೆಎಂ ವೀರೇಶ್ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಚಿತ್ರದುರ್ಗ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ಕವಿಗಳು, ಸಾಹಿತಿಗಳು, ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ