ನೂಲಿ ಚಂದಯ್ಯನವರ 917 ನೇ. ಜಯಂತಿ ಆಚರಣೆ.
ಖಾನಾ ಹೊಸಹಳ್ಳಿ ಆ.19

ಪಟ್ಟಣದ ನಾಡ ಕಚೇರಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಶರಣ ಶ್ರೀ ನೂಲಿ ಚಂದಯ್ಯನವರ 917 ನೇ. ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ನೂಲಿ ಚಂದಯ್ಯ ನವರ ಭಾವ ಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಚಂದ್ರಮೋಹನ್ ಮಾತನಾಡಿ ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನೂಲಿ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು. ಪೂಜೆ, ಪುನಸ್ಕಾರಗಳಿಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದರು.ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ ಕೊಂಡಿ, ಗ್ರಾಮದ ಮುಖಂಡ ಕುಂಬಾರ್ ಹನುಮಂತಪ್ಪ, ಫೋಟೋ ನಾಗರಾಜ, ಸ್ವಾಮಿ, ನಾಗರಾಜ್ ತಾಯಕನಹಳ್ಳಿ, ನಾಡಕಚೇರಿ ಆಪರೇಟರ್ ಮಂಜುನಾಥ, ಸಿದ್ದೇಶ್,ರಮೇಶ, ಗ್ರಾಮ ಸಹಾಯಕ ಬೋರಪ್ಪ ಸೇರಿದಂತೆ ಇತರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ