“ರಕ್ಷಾಬಂಧನ ಸಹೋದರತೆ ಸಹೋದರತೆ ಪಾವಿತ್ರ್ಯತೆ ಸಾಕ್ಷಿ”…..

ರಕ್ಷಾಬಂಧನ ಸಹೋದರತೆ
ಭಾವಸುಂದರ ಬೆಸುಗೆ
ನಿಸ್ವಾರ್ಥತೆ ಭಾವ ರಕ್ಷಣೆ
ಮುದ್ದು ಅಕ್ಕ ತಂಗಿ ಅಣ್ಣ
ತಮ್ಮರ
ಪ್ರೀತಿ ಆದರೆತೆ ಸಂಬಂಧ ಸಂಭ್ರಮ
ವಿಜಯ ತಿಲಕ ಇರಿಸಿ ಹರಸುವ
ಶುಭದಿನ ಅಮೃತ ಘಳಿಗೆ
ಅರಷೀಣ ದಾರ ಪ್ರೀತಿ ವಿಶ್ವಾಸ
ಧೈರ್ಯ ಶೌರ್ಯದ ಸಂಕೇತ
ರಕ್ಷಣೆಗೆ ಬದ್ಧ ಸದಾ ಸಿದ್ಧ
ಸಿದ್ಧತೆಯ ಮನದ ಸಿರಿ ಶ್ರೇಷ್ಠ
ರಾಖಿ ಸಹೋದರತೆ ರಕ್ಷಣೆ ಶಕ್ತಿ
ಅನ್ಯೋನ್ಯತೆ ರಕ್ಷಾಬಂಧ ಪಾವಿತ್ರ್ಯತೆ ಸಾಕ್ಷಿ
ಆನಂದ ನೆಮ್ಮದಿ ನಂದನವನ
ಗೂಡಾಗಲಿ ಹಾರೈಕೆಗಳೇ
ರಕ್ಷಾಬಂಧನ ಶುಭದಿನದ
ಶ್ರೀರಕ್ಷೆ ಶುಭಕರ ಅನವರತ
ಸಹೋದರತೆ ಸುಮನ ಸುಭಾವ
ನಿತ್ಯ ನಿರಂತರ ಬಾಳ ಬೆಳಗು.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು