ಫುಟ್ ಪಾತ್ ಒತ್ತುವರಿ – ದಿಲೀಪ್ ಟೈಲರ್ ಆಕ್ರೋಶ.
ಮಾನ್ವಿ ಮೇ.20





ಮಾನ್ವಿ ತಾಲೂಕಲ್ಲಿ ಕಳೆದ 25 ವರ್ಷ ದಿಂದ ಅಭಿವೃದ್ಧಿ ಯಾಗಿಲ್ಲ. ಆದರೆ ಮಾನ್ವಿ ತಾಲೂಕಲ್ಲಿ ಯಾವುದೇ ಫ್ಯಾಕ್ಟರಿ ಇಲ್ಲದ ಕಾರಣ ಈ ಭಾಗದ ಜನರು ಬೇರೆ ಭಾಗಕ್ಕೆ ತೆರಳಿ ದುಡಿಯುವ ಸ್ಥಿತಿ ಇದ್ದು, ಮಾನ್ವಿ ದಿವಾಳಿ ಯಾಗಿದೆ ಎಂದು ದಿಲೀಪ್ ಟೈಲರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಮಾನ್ವಿ ಪಟ್ಟಣದಲ್ಲಿ ಫುಟ್ ಪಾತ್ ಒತ್ತುವರಿ ಮಾಡಿ ಕೊಂಡ ಪರಿಣಾಮ ಜನರ ಸಂಚಾರಕ್ಕೆ ತೊಂದರೆ ಯಾಗಿದೆ. ರಾಯಚೂರು ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಸರಕಾರವೇ ಫುಟ್ ಪಾತ್ ಗಳನ್ನು ತೆರವು ಮಾಡಲಾಗಿದೆ. ಮಾನ್ವಿಯಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಶಾಸಕ ಹಂಪಯ್ಯ ನಾಯಕ ಸಚಿವ ಬೋಸರಾಜು ಅವರು ಅಧಿಕಾರ ಮಾಡಿದರು ಸಹ ಮಾನ್ವಿಯನ್ನು ಅಭಿವೃದ್ಧಿ ಮಾಡಿಲ್ಲ. ಆದರೆ ಮಾನ್ವಿ ಅನ್ನೋದು ಜನರ ಪಾಲಿಗೆ ದಿವಾಳಿಯಾಗಿದೆ. 25 ವರ್ಷದಿಂದ ಅಭಿವೃದ್ಧಿಯಾಗಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ