ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು.
ಬಿಂಜಲಬಾವಿ ಆ.22

ತಾಳಿಕೋಟೆ ತಾಲೂಕಿನ ಬಿಂಜಲಬಾವಿ ಗ್ರಾಮದ ಸರ್ಕರಿಹಿರಿಯ ಪ್ರಾಥಮಿಕ ಶಾಲೆ ಯಲ್ಲ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು.ಪ್ರತಿಭಾ ಕಾರಂಜಿ 2024-25 ನೇ ಸಾಲಿನ ಕಲಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಂಜಲಬಾವಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲಾ ಮಕ್ಕಳು ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು ಕೂಡ ಹಾಜರಿದ್ದರು, ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಶ್ರೀ ಆರ್.ಡಿ.ಪಾಟೀಲ್ ಪಿ.ಕೆ.ಪಿ.ಎಸ್ ಇವರು ವಹಿಸಿ ಕೊಂಡಿದ್ದರು, ಮುಖ್ಯ ಅತಿಥಿ ಸ್ಥಾನಗಳನ್ನು, ಶಾಲೆಗೆ ಭೂದಾನವನ್ನು ನೀಡಿದ ಶ್ರೀ ವೆಂಕಟರಾವ್ ನಾಡಗೌಡ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಂಕರಗೌಡ ಜಿ ಪಾಟೀಲ್, ಶಿಕ್ಷಣ ಪ್ರೇಮಿಗಳಾದ ಶ್ರೀ ಸಿ ಜಿ.ಎಸ್ ಪಡೆಕ್ನೂರ್, ಊರಿನ ಗಣ್ಯ ವ್ಯಕ್ತಿಗಳಾದ ಶ್ರೀ ಎಸ್.ಬಿ.ಪಟ್ಟಣಶೆಟ್ಟಿ, ಕಲಕೇರಿ ವಲಯ ಶಿಕ್ಷಣ ಸಂಯೋಜಕರಾದ ಶ್ರೀ ಐ.ಎಫ್.ಭಾಲ್ಕಿ,

ಕಲಕೇರಿಯ ಸಿ.ಆರ್.ಪಿ ಯಾದ ಶ್ರೀ ಎಸ್.ಎಲ್. ನಾಯ್ಕೋಡಿ, ಕಲಕೇರಿಯ ಉರ್ದು ಸಿ.ಆರ್.ಪಿ ಯಾದ ಶ್ರೀ ಎ.ಐ.ಮಣೂರ್, ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್.ಐ.ದೋಣಿಕರ್, ಕಲಕೇರಿ ಎಂ.ಪಿ.ಎಸ್ ಶಾಲೆಯ ಮುಖ್ಯ ಗುರುಗಳಾದ ಶ್ರೀ ಜೆ.ಬಿ ಕುಲಕರ್ಣಿ, ಡಿ.ಎನ್ ಚಿಕ್ಕಮಠ, ಹಾಗೂ ಕಲಕೇರಿ ಕ್ಲಸ್ಟರ್ನ ಎಲ್ಲಾ ಮುಖ್ಯ ಗುರುಗಳು ಸಹ ಶಿಕ್ಷಕರು ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಿಕ್ಷಣ ಸಂಯೋಜಕರಾದ ಶ್ರೀ ಐ.ಎಫ್ ಭಾಲ್ಕಿ ಮಾತನಾಡಿದರು. ಕಾರ್ಯಕ್ರಮವನ್ನು ಕುರಿತು ಶ್ರೀ ಜಿ.ಎಸ್.ಪಡೆಕನೂರ ಅತ್ಯಂತ ಮಾರ್ಮಿಕವಾಗಿ ಹಾಗೂ ಇವತ್ತಿನ ಶಿಕ್ಷಣದ ಬಗ್ಗೆ ಕುರಿತು ಮಾತನಾಡಿದರು. ಶ್ರೀ ಎಸ್.ಬಿ.ಕಬ್ಬಿನ ನಿರೂಪಣೆ ಮಾಡಿದರು, ಶ್ರೀ ಎಚ್ ಎಲ್ ನಾಯ್ಕೋಡಿ ಸ್ವಾಗತಿಸಿ ವಂದಿಸಿದರು. ತದನಂತರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅನುಗುಣವಾಗಿ ಕೋಣೆಗಳಲ್ಲಿ ಮಕ್ಕಳು ನಿಗದಿ ಪಡಿಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ