ಹಾಡು ಹಗಲೇ ಗ್ರಾಮ ಪಂಚಾಯಿತಿಯಲ್ಲೇ – ಮಲಗಿದ ಸಿಬ್ಬಂದಿ ಬುಡ್ಡಾ ಸಾಬ್.

ಮಸ್ಕಿ ಆ.22

ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ಸಿಬ್ಬಂದಿ ಬುಡ್ಡಾ ಸಾಬ್ ಕರ್ತವ್ಯದಲ್ಲಿ ಇದ್ದಾಗ ಗ್ರಾಮ ಪಂಚಾಯತಿ ಒಳ ಕೋಣೆಯಲ್ಲಿ ಮಲಗಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.ಕೆಲಸದ ಸಮಯದಲ್ಲಿ ಮೆದಿಕಿನಾಳ ಗ್ರಾಮ ಪಂಚಾಯತಿಗೆ ಸಾಕಷ್ಟು ಜನ ತಮ್ಮ ಸಮಸ್ಯೆಗಳನ್ನು ತಿಳಿಸಲು ಬರುತ್ತಾರೆ ಇವರಿಗೆ ಸಿಬ್ಬಂದಿಗಳು ಭೇಟಿ ಮಾಡಿ ಅಧಿಕಾರಿಗಳ ಬಗ್ಗೆ ವಿಚಾರಣೆ ಮಾಡುತ್ತಾರೆ ಆದರೆ ಇಲ್ಲಿ ತನ್ನ ಕೆಲಸವನ್ನು ಬಿಟ್ಟು ಯಾವುದೇ ಅಧಿಕಾರಿಗಳ ಭಯವಿಲ್ಲದೆ ಮಂಗಳವಾರ ಪಂಚಾಯತಿ ಆವರಣದಲ್ಲಿ ಮಲಗಿ ಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇವರು ಕೆಲಸದ ಸಮಯದಲ್ಲಿ ಏಕೆ ಮಲಗಿದ್ದಾರೆ ಹಾಗೂ ಮಲಗುವ ಸಮಯದಲ್ಲಿ ಇಲ್ಲಿ ಇರುವ ಅಧಿಕಾರಿಗಳ ಏಕೆ ಮೌನವಹಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆ ಯಾಕೆ ಸಾರ್ವಜನಿಕರನ್ನು ಕಾಡುತ್ತಿದೆ.ಅದು ಏನೇ ಇರಲಿ ಕಾಯಕವೇ ಕೈಲಾಸ ಎನ್ನುವ ಪದಕ್ಕೆ ಇವರು ಅಪಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಏನೇ ಇರಲಿ ಇಂತಹ ಸಿಬ್ಬಂದಿಯ ಮೇಲೆ ಸಂಭಂದಪಟ್ಟ ಮೇಲಾಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ….!

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button