ಟಂಟಂ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ – ಸ್ಥಳದಲ್ಲಿ ಇಬ್ಬರ ದುರ್ಮರಣ.
ಹುನಗುಂದ ಮಾರ್ಚ್.16

ಟಂಟಂ ಮತ್ತು ಬೈಕ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ೨೦ ರ ಹುನಗುಂದ ಪಟ್ಟಣದ ಸಮೀಪದ ನಾಗೂರ ಕ್ರಾಸ್ ಬಳಿ ಗುರವಾರ ರಾತ್ರಿ ನಡೆದಿದೆ.ಮೃತರು ಹುನಗುಂದ ತಾಲೂಕಿನ ಹೊನ್ನರಹಳ್ಳಿ ಗ್ರಾಮದ ವೀರನಗೌಡ ಮುದ್ದಿನಗೌಡ ಪವಾಡಗೌಡ್ರ (೪೮) ಇನೋರ್ವ ಲಿಂಗಸೂರ ತಾಲೂಕಿನ ಬೋಗಾಪೂರದ ಹುಲ್ಲೇಶ ಅಮರಪ್ಪ (೧೯) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.ಘಟನೆ ವಿವರ: ಟಂಟಂ ವಾಹನ ಹುನಗುಂದ ಪಟ್ಟಣ ದಿಂದ ಹೊನ್ನರಳ್ಳಿ ಗ್ರಾಮದ ಕಡೆಗೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಮತ್ತು ಬಾಗಲಕೋಟ ದಿಂದ ಲಿಂಗಸೂರ ತಾಲೂಕಿನ ಬೋಗಾಪೂರ ಕಡೆಗೆ ಬೈಕ ಸವಾರ ಸಂಚಾರ ಮಾಡುತ್ತಿರುವ ಸಂದಭðದಲ್ಲಿ ಈ ಘಟನೆ ನಡೆದಿದೆ.ಟಂಟಂ ಬಲ ಬದಿಯಲ್ಲಿ ಕುಳಿತ ವೀರನಗೌಡ ಪವಾಡಿಗೌಡ್ರ ಸ್ಥಳದಲ್ಲಿ ಮೃತಪಟ್ಟರೇ ಬೈಕ್ ಸವಾರ ಹುಲ್ಲೇಶ ಕೂಡಾ ಸ್ಥಳದಲ್ಲಿ ಮೃತಪಟ್ಟಿದ್ದಾನೆ.ಟಂಟಂ ದಲ್ಲಿದ್ದ ಇನ್ನಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟ ಅಡಿಷನಲ್ ಎಸ್.ಪಿ ಪ್ರಸನ್ನ ದೇಸಾಯಿ, ಹುನಗುಂದ ಸಿಪಿಐ ಸುನೀಲ ಸವದಿ, ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ