ಅಧಿಕಾರಿಗಳ ನಿರ್ಲಕ್ಷ್ಯತನ ದಿಂದ ಭದ್ರಾ ನೀರು ವ್ಯರ್ಥ ಕಳಪೆ ಕಾಮಗಾರಿ ಯಿಂದ ಹಾಕಲು ಬಾರದ ವಿತರಣ ಗೆಟ್ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತು ಭದ್ರಾ ಒಡಲು.
ತರೀಕೆರೆ ಜು.06

ರೈತರ ಜೀವನ ನಾಡಿ ಕುಡಿಯುವ ನೀರಿನ ಅಕ್ಷೆಯಸಾಗರ ಭದ್ರ ಡ್ಯಾಮ್. ಇಲಾಖೆಯ ಡ್ರಿಪ್ ಯೋಜನೆ ಅಡಿ ಕೈಗೊಂಡಿರುವ ಕಳಪೆ ಕಾಮಗಾರಿಯಿಂದ. ಹಾಗೂ ಅಧಿಕಾರಿಗಳ ನಿರ್ಲಕ್ಷತನ ದಿಂದ ಅಸಲೀತನ ಕಳೆದು ಕೊಂಡು ನಿರ್ವಹಣೆಗೆ ಬಾರದೆ ನದಿ ನೀರಿನ ವಿತರಣಾ ಗೇಟ್ ಹಾಕಲು ಬಾರದೆ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದು. ಇದರಿಂದ ಮುಂದಿನ ದಿನಗಳಲ್ಲಿ. ರೈತರಿಗೆ ಹಾಗೂ ಕುಡಿಯುವ ನೀರಿಗೆ ಆತಂಕ ಎದುರಾಗುವಂತೆ ಮಾಡಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಲಹೆಗಾರ ಸದಸ್ಯರನ್ನು ಅಮಾನತ್ತು. ಮಾಡಿ ವಿಚಾರಣೆ ನಡೆಸುವಂತೆ ತರೀಕೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಾಗೂ ಭದ್ರ ಹಿತರಕ್ಷಣ ಸಮಿತಿಯ ಸದಸ್ಯ ಎಂ ನರೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅವರು ಜೆಡಿಎಸ್ ಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹಿಂದೆ ಡ್ಯಾಮ್ ರಿಹಾಬಿಟೇಷನ್ ಇಂಪ್ರೂವ್ಮೆಂಟ್ ಪ್ರಾಜೆಕ್ಟ್. ಸುಮಾರು 40 ಕೋಟಿ ವೆಚ್ಚದಲ್ಲಿ ಭದ್ರಾ ಡ್ಯಾಮಿನ ಮುಖ್ಯ ಭಾಗವನ್ನು ದುರಸ್ತಿಯ ನೆಪದಲ್ಲಿ ಭ್ರಷ್ಟ ಅಧಿಕಾರಿಗಳು ಇನ್ನು ನೂರು ವರ್ಷ ಬಾಳಿಕೆ ಬರುತ್ತಿದ್ದ ಸ್ಟೀಲಿಂಗ್ ಬೇಸನ್ ಹಾಗೂ ಪ್ಲೇಟ್ಸ್ ಹಾಗೂ ಬಾಂಡ್ಸ್ ಗಳನ್ನು. ಸುಸಜ್ಜಿತವಾಗಿದ್ದರೂ ಸಹ ಹಣದ ಆಸೆಗಾಗಿ. ಗ್ರೋಟಿಂಗ್ ಕಾಮಗಾರಿಯ ನೆಪದಲ್ಲಿ ಕಾರ್ಯ ನಿರ್ವಹಿಸಿ ಭದ್ರಾ ಡ್ಯಾಮಿನ ಅಸಲಿತನಕ್ಕೆ ಮಾರಕವಾಗುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಳಪೆ ಕಾಮಗಾರಿಗಳನ್ನು ಮಾಡಿದ್ದರಿಂದ ಮೂಲ ಸ್ವರೂಪ ಕಳೆದು ಕೊಂಡು ಭದ್ರಾ ಇಂದು ಆತಂಕ ಸ್ಥಿತಿಯನ್ನು ತಲುಪಿದೆ. ಎಂದು ದೂರಿದರುಈ ಸಂಬಂಧ ಸಂಬಂಧಪಟ್ಟ ಇಲಾಖೆಗೆ ಹಾಗೂ ಸರ್ಕಾರಕ್ಕೆ ಕಳಪೆ ಆಗಿರುವ ಕಾಮಗಾರಿಯನ್ನು ಪುನರ್ ದುರಸ್ತಿ ಗೊಳಿಸಲು ಮದುವೆ ಮಾಡಿದರೆ. ಹಿನ್ನೆಲೆಯಲ್ಲಿ ಕೈಗೊಂಡ ಕಾಮಗಾರಿಯು ನೀರು ವಿತರಣೆಗೆ ಗೇಟ್ ಎತ್ತಿದ ತಕ್ಷಣವೇ ಸ್ಟಿಲ್ಲಿಂಗ್ ಹಾಗೂ ಸೈಡ್ ಗೋಡೆ ಕೊಚ್ಚಿ ಹೋಗಿದ್ದು. ಅದರಂತೆ ಈ ಗೇಟಿನ ಕಾಮಗಾರಿಯು ಈ ಯೋಜನೆಯಲ್ಲಿ ಒಳಗೊಂಡಿತ್ತು ಅಂದು ಪರೀಕ್ಷಿಸಿ ಕೊಳ್ಳದ ಇವರು ಕಾಮಗಾರಿಯ ನೆಪದಲ್ಲಿ ಪರೀಕ್ಷಿಸಲು ಹೋಗಿ ಇಂದು ತೆಗೆದ ಗೇಟ್ ಹಾಕಲು ಬಾರದ ಪರಿಸ್ಥಿತಿಗೆ ತಲುಪಿದೆ. ಇದಕ್ಕೆ ಡ್ರಿಪ್ ಯೋಜನೆ ಅಡಿ ಕೈಗೊಂಡ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಬೇಸಿಗೆ ಕಾಲದಲ್ಲಿ ಇವುಗಳೆಲ್ಲವನ್ನು ಪರೀಕ್ಷಿಸಿ ಸರಿ ಮಾಡಿ ಕೊಳ್ಳಬೇಕಾದ ಅಧಿಕಾರಿಗಳು. ಮಳೆಗಾಲದಲ್ಲಿ ಹಾಗೂ ನದಿಗೆ ಒಳಹರಿವು ಬರುವ ಸಂದರ್ಭದಲ್ಲಿ ಪರೀಕ್ಷಿಸಲು ಹೋಗಿ. ತೆಗೆದ ಗೇಟ್ ಹಾಕಲು ಬರದಂತ ಪರಿಸ್ಥಿತಿಗೆ ತಲುಪಿದೆ. ಇದರಿಂದ ಪ್ರತಿದಿನ ನಾಲ್ಕು ಸಾವಿರ ಕ್ಯೂಸೆಕ್ಸ್ ನೀರು ನದಿಯಿಂದ ಹೊರ ಹರಿಯುತ್ತಿದ್ದು ನೀರು ಪೋಲಾಗುತ್ತಿದ್ದು. ಇದರಿಂದ ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಕುಡಿಯುವ ನೀರಿಗೆ ಮಳೆ ಸರಾಸರಿ ಇಲ್ಲದ ಕಾರಣ ತೊಂದರೆ ಎದುರಾಗಲಿದೆ ಎಂದು ದೂರಿದರುಭದ್ರಾ ಹಿತರಕ್ಷಣ ಸಮಿತಿಯಿಂದ ಸೆಂಟ್ರಲ್ ವಾಟರ್ ಬೋರ್ಡ್ ಕಮಿಷನ್ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಸಂರಕ್ಷಣಾ ಸಮಿತಿ. ಮುಖ್ಯಮಂತ್ರಿಗಳು ಹಾಗೂ. ನೀರಾವರಿ ಮಂತ್ರಿಗಳಿಗೂ ಸಹ. ದೂರು ನೀಡಿ. ಸಂಬಂಧಪಟ್ಟಂತ ಕಾಮಗಾರಿಗಳಿಗೆ ಬಿಲ್ಲು ಪಾವತಿಸಿದಂತೆ ಮನವಿ ಮಾಡಿದರು ಸಹ.ಭದ್ರಾ ಡ್ಯಾಮಿನ ಸಲಹೆಗಾರರಾಗಿ ನಿಯೋಜಿಸಿರುವ ನಿವೃತ್ತ ಚೀಫ್ ಇಂಜಿನಿಯರ್ ಮಾಧವ ಅವರ ಸಲಹೆ ಮೇರೆಗೆ ಗುತ್ತಿಗೆದಾರರಿಗೆ ಬಿಲ್ ಆಗು ಮೊತ್ತವನ್ನು ಪಾವತಿಸಿದ್ದಾರೆ ಹಿನ್ನೆಲೆಯಲ್ಲಿ ಇಂತಹ ಅವಾಂತರಗಳು ಸೃಷ್ಟಿಯಾಗಿದ್ದು ತಕ್ಷಣ ಈ ಸಲಹೆ ನೀಡಿದ ಮಾದವವರನ್ನು ಬಂಧಿಸಬೇಕು ಹಾಗೂ ಬಿಲ್ ನೀಡಿದ ಸಿ ಇ ಓ ಎಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಂಜುನಾಥ್ ಕಾಶಯ್ಯ ಬಿಜೆಪಿ ಮುಖಂಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ನಾಯಕ್ ಮಾಜಿ ಎಪಿಎಂಸಿ ಅಧ್ಯಕ್ಷ ಪಾಂಡುರಂಗ ಜಾದವ್ ಡಿಎಸ್ಎಸ್ ಸಂಚಾಲಕ ರಾಮಚಂದ್ರ ಉಪಸ್ಥಿತರಿದ್ದರು.