“ಓಂ ಶ್ರೀ ಗುರು ರಾಘವೇಂದ್ರ ರಾಯರು ಕಲಿಯುಗ ಕಾಮಧೇನು” ನೆನೆವ ಮನ ಪಾವನ…..

ಓಂಶ್ರೀಗುರು ರಾಘವೇಂದ್ರ ರಾಯರು
ಕಲಿಯುಗ ಕಾಮಧೇನು”
ಶ್ರೀ-ಶ್ರೀಕರ ನಿತ್ಯ ಶುಭಕರ ಶಂಕುಕರ್ಣ
ಅವತಾರಿ ಶ್ರೀ ಪ್ರಹ್ಲಾದರಾಜರು ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ಗು- ಗುರುವಾರ ಬೃಂದಾವನ ಭಾಗ್ಯ ಗುರುರಾಜ
ರಾಯರ ರಾಯ ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ರು–ರುಜುವಾತು ನಿತ್ಯ ಸತ್ಯ ರಾಘವೇಂದ್ರ
ಸ್ವಾಮಿ ದರ್ಶನ ಭಾಗ್ಯ ಅನುದಿನ ಓಂ ಶ್ರೀ
ಗುರು ರಾಘವೇಂದ್ರಾಯ ನಮಃ
ರಾ-ರಾಮೋವಿಜಯತೇ ಜಯದ ಹಾದಿಯಲಿ
ನಡೆಸುವ ಶ್ರೀಹರಿ ಅವತಾರಿ ಪ್ರಹ್ಲಾದರಾಜರು
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಘ-ಘನಶ್ರೀಸುಧೀಂದ್ರವರಪುತ್ರ ಓಂ ಶ್ರೀ ಗುರು
ರಾಜರಾಘವೇಂದ್ರಾಯ ನಮಃ
ವೇ-ವೇಷಭೂಷಣ ಸಂಗೀತ ವೀಣಾ ಪಾಣಿ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ರಾ-ರಾಘವ ಮಾಧವ ಗುರುರಾಜ ಓಂ ಶ್ರೀ
ರಾಘವೇಂದ್ರಾಯ ನಮಃ
ಯ-ಯತಿಕುಲತೀಲಕಾಯ ಯದ್ವೀಶ
ಯತಿರಾಜ್ ಗುರುಭ್ಯೋ ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ರು- ರುಚಿಕರ ಪರಿಮಳ ವರಪ್ರಸಾದ
ಯೋಗೇಂದ್ರ ಗುರುವೇದಯಾನಿಧಿ ಓಂ ಶ್ರೀ
ಗುರು ರಾಘವೇಂದ್ರಾಯ ನಮಃ
ಕ-ಕರಮುಗಿದ ಭಕ್ತರು ಪಾವನ
ಭಕ್ತವತ್ಸಲಾಯ ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ಕರಗದ ಕಲರವ ವೀಣಾ ನೀನಾದ ಸುನಾದ
ತನುಮನಕೆ ಓಂ ಶ್ರೀ ಗುರು ರಾಘವೇಂದ್ರಾಯ
ನಮಃ

ಲಿ-ಲಿಲಾಧರ ನಿತ್ಯ ನಿರಂತರ ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ಯು-ಯುಗ ಯುಗದಿ ಪವಾಡ ನಿಜ ಸಾಕ್ಷಿ
ಸಂತೃಪ್ತ ಭಕ್ತವೃಂದ ಓಂ ಶ್ರೀ ಭಕ್ತವತ್ಸಲಾಯ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಗ-ಗಗನ ದೀಪದ ಬೆಳಕು ಸದಾ ಜನಮನದಿ
ರಾಜರಾಯ ಓಂ ಶ್ರೀ ಗುರು ರಾಘವೇಂದ್ರಾಯ
ನಮಃ
ಕಾ-ಕಾಯುವ ನಿತ್ಯ ಕಾಲಾತೀತ ಭಯ
ನಿವಾರಕ ಓಂ ಶ್ರೀ ಗುರು ರಾಘವೇಂದ್ರಾಯ
ನಮ:
ಮ-ಮನೋಲ್ಲಾಸಮಧುರ ಸಂಗೀತ ರೂಪ
ವೀಣಾವಾದನ ವೈಭವ ಓಂ ಶ್ರೀ ಗುರು
ರಾಘವೇಂದ್ರಾಯ ನಮಃ
ಧೇ-ಧೇಯಾಂಶಿ ಪೂರ್ವಾರಾಧನೆ
ಮಧ್ಯರಾಧನೆ ಉತ್ತರಾಧನೆ ಸಂಭ್ರಮ
ಮಂತ್ರಾಕ್ಷತೆ ಓಂ ಶ್ರೀ ರಾಘವೇಂದ್ರಾಯ ನಮಃ
ಸದಾ ಸ್ಮರಿಸುವ ಮನಗಳ ಪಾವನ ಓಂ ಶ್ರೀ
ಗುರು ರಾಘವೇಂದ್ರಾಯ ನಮಃ
ನು-ನುಡಿ ನಿತ್ಯ ಸತ್ಯ ಮಂತ್ರ ಪೂಜ್ಯಾಯ
ರಾಘವೇಂದ್ರಾಯ ಸತ್ಯಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ
ಕಾಮಧೇನವೇ|
ಧ್ಯಾನ ಧರ್ಮ ಪ್ರಧಾನ ನುಡಿವ ಸರ್ವ
ತನುಮನ ಸದಾ ಹರಸಲಿ ಕೃಪೆ ಇರಲಿ
ಅನವರತ ಓಂ ಶ್ರೀ ಗುರು ರಾಘವೇಂದ್ರರಾಯ
ನಮಃ
ಕಲಿಯುಗ ಕಾಮಧೇನು ಶುಭನಾಮ ನೆನೆವ
ಸದಾ ಮನದಲಿ ಕೃಪೆ ತೋರುವ ಅನವರತ
ಹರಸಲಿ ಮನುಕುಲದ ಬಾಂಧವರ
ವರಪ್ರದಾಯ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀಗುರು ರಾಘವೇಂದ್ರರಾಯರು
ಕಲಿಯುಗ ಕಾಮಧೇನು.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ. 8618674872