ಶ್ರೀ ವೀರಘಂಟಿ ಮಡಿವಾಳೇಶ್ವರ ಜಾತ್ರೆ.
ಯಲಗೋಡ ಆ.28

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ದೇವರು ಆದ ಶ್ರೀ ವೀರಘಂಟಿ ಮಡಿವಾಳೇಶ್ವರ ಜಾತ್ರೆಯನ್ನು ಸೆಪ್ಟೆಂಬರ್ ಒಂದು, ಎರಡನೇ ತಾರೀಖ ರಂದು ನಡೆಯುತ್ತದೆ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ನಿಮಿತ್ತ ವಾಗಿ ಪ್ರತಿದಿನ ವಿಶೇಷ ಕಾರ್ಯವನ್ನು ನಡೆಯುತ್ತವೆ, ಇದೆ ರವಿವಾರ ರಂದು ಬಜಿರೂಟಿ ಪ್ರಸಾದವನ್ನು ಎಲ್ಲಾ ಊರಿನ ಭಕ್ತರು ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಭಕ್ತರು ಪ್ರಸಾದ ಸೇವನೆ ಮಾಡುತ್ತಾರೆ, ಸೋಮವಾರ ಬೆಳಗ್ಗೆ ಅಗ್ನಿ ಪ್ರವೇಶ ಕಾರ್ಯಕ್ರಮ, ಹತ್ತು ಗಂಟೆಗೆ ದೇವಸ್ಥಾನ ದಿಂದ ಶ್ರೀ ವೀರಘಂಟಿ ಮಡಿವಾಳೇಶ್ವರನ್ನು ಗಂಗಾ ಪೂಜೆಗೆ ಪಲ್ಲಕ್ಕಿ ಹಾಗೂ ಬಾಜಾ ಭಜಂತ್ರಿ, ವಿವಿಧ ಸಾಂಸ್ಕೃತಿಕ ಕಲಾ ದೊಂದಿಗೆ ಮೆರವಣಿಗೆ ಮುಖಾಂತರ ಮಾಡಲಾಗುತ್ತದೆ, ಸಂಜೆ ಐದು ಗಂಟೆಗೆ ಭಕ್ತರಿಗೆ ಅನ್ನ ಪ್ರಸಾದ ಇರುತ್ತದೆ, ಈ ಜಾತ್ರೆ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಭಕ್ತರು ಆಗಮಿಸುಬೇಕು ಎಂದು ಮಡಿವಾಳೇಶ್ವರ ಪೀಠದ ಶ್ರೀಗಳಾದ ನಿಂಗಯ್ಯ ಮಹಾ ಸ್ವಾಮಿಗಳು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ.