ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಆಕಳನ್ನು ರಕ್ಷಿಸಿದ – ಅಗ್ನಿಶಾಮಕ ದಳದ ಸಿಬ್ಬಂದಿಯವರು.
ಕೌಲಗುಡ್ಡ ಆ.29

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ವಿನಾಯಕ ಬಾಳಪ್ಪನವರ ಎಂಬುವವರ ಬಾವಿಯೊಂದರಲ್ಲಿ ಅದೆ ಗ್ರಾಮದ ಸಿದ್ದಪ್ಪ ತೇಲಿ ಎಂಬುವವರ ಆಕಳು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ ತಕ್ಷಣ ಕೌಲಗುಡ್ಡ ಗ್ರಾಮದ ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲ ವಾಹನ ಮತ್ತು ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿ ಗಳೊಂದಿಗೆ ಆಗಮಿಸಿ 50 ಅಡಿ ಅಳತೆಯ 30×30 ವಿಸ್ತೀರ್ಣದ ನೀರಿರುವ ಬಾವಿಯಲ್ಲಿ ಆಕಳನ್ನು ಪ್ರಾಣ ಪಣಕ್ಕೆ ಇಟ್ಟು ಕಷ್ಟ ಪಟ್ಟು ಸುಮಾರು 01:40 ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ಕಾರ್ಯಚರಣೆಯನ್ನು ಮಾಡಿ ಆಕಳನ್ನು ಜೀವಂತವಾಗಿ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.

ಆಕಳ ಪ್ರಾಣ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿ ಯವರುಗಳಿಗೆ ಸೇರಿದ ಜನ ಚಪ್ಪಾಳೆ ಮೂಲಕ ಧನ್ಯವಾದಗಳು ತಿಳಿಸಿದರು. ತಮ್ಮ ಪ್ರಾಣ ಪಣಕ್ಕೆ ಇಟ್ಟು ಜೀವ ಉಳಿಸುವ ಕೆಲಸ ಅಗ್ನಿಶಾಮಕ ದಳದವರು ಮಾಡುತ್ತಾರೆ. ಅವರ ಸೇವೆ ಅಮೋಘ ಎಂದು ಬಣ್ಣಿಸಿದರು. ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾದ ಪಸಾದೇವ.ಶಿಂಧೆ, ಪ್ರಶಾಂತ ಚವ್ಹಾಣ, ಆನಂದ.ಟಿ.ಆರ್, ಸಚಿನ ಹಲ್ಯಾಳ, ಅಕ್ಷಯ ಕೋಲಾಪುರೆ, ಸ್ಥಳೀಯರು ಕಾರ್ಯಾಚರಣೆಯಲ್ಲಿ ಹಾಜರಿದ್ದರು.