ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಕೂಡ್ಲಿಗಿ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾದ – ಸೂರ್ಯ ಪಾಪಣ್ಣ.
ರಾಮದುರ್ಗ ಫೆ 21





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ರಾಮದುರ್ಗ ಗ್ರಾಮದ ಸ್ಥಳೀಯ ಬಿ.ಜೆ.ಪಿಯ ಹಿರಿಯ ಮುಖಂಡರಾದ ಸೂರ್ಯ ಪಾಪಣ್ಣ ಇವರು ಮುಂಬರುವ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ ಬಿ.ಜೆ.ಪಿಯ ಪ್ರಬಲ ಆಕಾಂಕ್ಷಿ ಯಾದ ಇವರು ಸಮಸ್ತ ಕೂಡ್ಲಿಗಿ ತಾಲೂಕಿನ ಹಾಗೂ ನಾಡಿನ ಒಳಿತಿಗಾಗಿ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಪ್ರಯುಕ್ತ ಈ ದಿನ ಶುಕ್ರವಾರ ರಂದು ಕೂಡ್ಲಿಗಿ ಪಟ್ಟಣದ ಶ್ರೀ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನ ದಿಂದ ಈ ದಿನ ರಾತ್ರಿ 8 ಗಂಟೆ ಸುಮಾರಿಗೆ ಸೂರ್ಯ ಪಾಪಣ್ಣ ಇವರು ಕೊಟ್ಟೂರೇಶ್ವರ ದೇವಸ್ಥಾನದ ವರೆಗೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಕಾರಣ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಆಶೀರ್ವಾದ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಬಹು ದೊಡ್ಡ ನಂಬಿಕೆಯ ಮಾರ್ಗದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ ದೇವರಲ್ಲಿ ಬೇಡುತೇನೆ ಎಂದು ಸೂರ್ಯ ಪಾಪಣ್ಣ ಇವರು ತಿಳಿಸಿರುತ್ತಾರೆ. ಹಾಗೆ ಕೂಡ್ಲಿಗಿ ತಾಲೂಕಿನ ಅನೇಕ ಹಳ್ಳಿಗಳಿಂದ ತಮ್ಮ ಅಭಿಮಾನಿಗಳು ಹಾಗೂ ಕೂಡ್ಲಿಗಿ ತಾಲೂಕಿನ ಬಿಜೆಪಿಯ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ವಿನಂತಿ ಮಾಡಿ ಕೊಂಡಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ