ಶ್ರೀ ಬಸವೇಶ್ವರ ಮಠದ ಉದ್ಘಾಟನಾ ಸಮಾರಂಭ ನೆರವೇರಿತು.
ಬಿಂಜಲಬಾವಿ ಆ.31

ತಾಳಿಕೋಟೆ ತಾಲೂಕಿನ ಬಿಂಜಲಬಾವಿ ಗ್ರಾಮದಲ್ಲಿಶ್ರೀ ಬಸವೇಶ್ವರ ಮಠದ ಉದ್ಘಾಟನಾ ಸಮಾರಂಭ ನೆರವೇರಿತು. ಬಿಂಜಲಬಾವಿ ಗ್ರಾಮದಲ್ಲಿ ಬಸವಣ್ಣನವರ ಮಾರ್ಗದಲ್ಲಿ ತಿಂಗಳ ಪರಿ ಅಂತ ರಥವನ್ನು ಮಾಡಿ ಗ್ರಾಮದ ಗುರು ಹಿರಿಯರ ಕೃಪಾ ಆಶೀರ್ವಾದದಿಂದ ಧರ್ಮ ಸಭೆ ನಡೆಯಿತು. ಶ್ರೀ ಸಿದ್ದರಾಮ ದೇವರು ಶಿವಾಚಾರ್ಯ ಹಿರೇಮಠ ಇವರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿ ಭಕ್ತರಿಗೆ ಆಶೀರ್ವಚನ ನೀಡಿದರು. ಡಾ, ಪ್ರಭುಗೌಡ ಪಾಟೀಲ್ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಕಾಂಗ್ರೆಸ್ ಮುಖಂಡರು ಇವರು ಈ ಮಠಕ್ಕೆ ಒಂದು ಲಕ್ಷ ರೂಪಾಯಿಗಳ ಕಾಣಿಕೆ ನೀಡಿದ್ದಾರೆ. ಬಸವ ದಳದ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳು ಪರ್ಯಂತ ದೇವರ ಧ್ಯಾನ ಮಾಡುತ್ತ ತಮ್ಮ ತಮ್ಮ ಸೇವೆಯನ್ನು ಸಲ್ಲಿಸಿ ಆ ದೇವರಿಗೆ ಪಾತ್ರರಾಗಿ ನಮ್ಮ ಮನಸ್ಸುಗಳನ್ನು ಸ್ವಚ್ಛ ಇಟ್ಟುಕೊಂಡು ಅದೇ ರೀತಿ ಊರಿನ ಎಲ್ಲಾ ಗ್ರಾಮಸ್ಥರು ಕೂಡ ಇದೇ ರೀತಿ ಭಜನೆ ದೇವರ ಧ್ಯಾನ ಮಾಡುತ್ತಾ ಇದ್ದರೆ ಮನಸ್ಸಿಗೆ ಎಷ್ಟು ನೆಮ್ಮದಿ ಶಾಂತಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಬಿ.ಜೆ.ಪಿ. ದೇವರಹಿಪ್ಪರಗಿ ಮಂಡಲದ ಯುವ ಮೋರ್ಚ ಅಧ್ಯಕ್ಷ ಅಪ್ಪು ದೇಸಾಯಿ.ಬಿ.ಜೆ.ಪಿ. ಮುಖಂಡರಾದ ಸಿದ್ದು ಬುಳ್ಳ.ಎ. ಎಸ್. ನಾಡಗೌಡ. ಬೂದಾನಿಗಳಾದಂತ ಮಲ್ಕಪ್ಪಗೌಡ ಬಿರಾದಾರ .ಎಸ್. ಬಿ. ಪಟ್ಟಣಶೆಟ್ಟಿ .ಬಿ.ಎಸ್. ಪಾಟೀಲ್. ಎಸ್. ಜಿ .ಪಾಟೀಲ್. ಎಂ.ಎಸ್. ಪಟ್ಟಣಶೆಟ್ಟಿ. ಎನ್.ಬಿ. ಬಿರಾದಾರ. ಗ್ರಾಮದ ಗುರು ಹಿರಿಯರು ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ