ಡಾ, ರವೀಂದ್ರನಾಥ್ ಐಪಿಎಸ್ ಇವರ ರಾಜೀನಾಮೆಯನ್ನು ಅಂಗೀಕರಿಸದಂತೆ ಒತ್ತಾಯಿಸಿ – ಡಿ.ಸಿಯವರ ಮುಖಾಂತರ ರಾಜ್ಯಪಾಲರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮನವಿ.
ಬಳ್ಳಾರಿ ಆ.31

ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಬಳ್ಳಾರಿಯ ಹಿರಿಯ ಐಪಿಎಸ್ ಅಧಿಕಾರಿ ಡಾ, ರವೀಂದ್ರನಾಥ್ ಇವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಇಲಾಖೆಯಲ್ಲಿ ಪ್ರಾಮಾಣಿಕ ದಕ್ಷ ಅಧಿಕಾರಿ ಯಾಗಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಡಿಜಿಪಿ ಆಗಿದ್ದ ವೇಳೆ ನಕಲಿ ಎಸ್ಪಿ ಎಸ್ಪಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು ಹಾಗೂ ಪಡೆದವರ ವಿರುದ್ಧ ಕ್ರಮ ಜರುಗಿಸಿದ್ದರು ಉದಾಹರಣೆ ಶಾಸಕ ಎಂ.ಪಿ ರೇಣುಕಾಚಾರ್ಯ ಮತ್ತು ಕುಟುಂಬದವರ ನಿವೃತ್ತಿ ಐಪಿಎಸ್ ಅಧಿಕಾರಿ ಕೆಂಪಯ್ಯ ಸೇರಿ ಅನೇಕ ಪ್ರಭಾವಿಗಳ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಂಬಂಧ ದಿಟ್ಟ ಕ್ರಮ ಕೈಗೊಂಡು ರಾಜ್ಯಾದ್ಯಂತ ಸಂಚಲನ ಉಂಟು ಮಾಡಿಸಿದ್ದರು ಇಂತಹ ನಿಷ್ಠಾವಂತ ಹಾಗೂ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಅವಧಿಗೆ ಮುನ್ನವೇ ಏಕಾಏಕಿ ವರ್ಗಾವಣೆ ಮಾಡಿರುವುದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈ ಗನ್ನಡಿಯಾಗಿದೆ.

ಇದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎನ್ನುವ ಸಂದೇಶ ರವಾನಿಯಾಗಿದೆ ಎಂದು ಕಳವಳ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವ್ಯಕ್ತಪಡಿಸಲಾಗುತ್ತದೆ ಪದೇ ಪದೇ ವರ್ಗಾವಣೆ ಮಾಡುತ್ತಿದ್ದರಿಂದ ಈ ವರ್ಗಾವಣೆ ಗಳಿಗೆ ಬೇಸತ್ತು ಕೊಂಡು ಈಗ ರಾಜೀನಾಮೆ ನೀಡಿದ್ದರಿಂದ ಇವರ ರಾಜೀನಾಮೆಯನ್ನು ಅಂಗೀಕರಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಇವರನ್ನು ಹಿಂದಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಹುದ್ದೆಯಲ್ಲೇ ಮುಂದುವರಿಸಲು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿಯ ಸಿ.ರಮೇಶ್ ಕಟ್ಟಿಮನಿ. ಜಿಲ್ಲಾ ಕಾರ್ಯಧ್ಯಕ್ಷರು ಕೆ. ಶಂಕರ್. ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಾದೇಶ್. ರಾಜಶೇಖರ್. ರಘು ಇವರೆಲ್ಲರೂ ಪತ್ರಿಕಾ ಮೂಲಕ ಆಗ್ರಹಿಸಿದ್ದಾರೆ.