ವೈಯಕ್ತಿಕ ಕಾಮಗಾರಿ ಸದ್ಭಳಕೆ ಮಾಡಿ ಕೊಳ್ಳಿ – ಸಹಾಯಕ ನಿರ್ದೇಶಕ ವಿಜಯ ಪಾಟೀಲ.
ಬೈಲಹೊಂಗಲ ಸ.01

ಆಯುಕ್ತಾಲಯ ಮತ್ತು ಜಿಲ್ಲಾಪಂಚಾಯತ ನಿರ್ದೇಶನದಂತೆ ಇಂದು ಮಲ್ಲಾಪುರ ಕೆ.ಎನ್ ಮತ್ತು ಹಣಬರಟ್ಟಿ ಗ್ರಾಮ ಪಂಚಾಯತಗಳಲ್ಲಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಡಿ (IEC) ವೈಯಕ್ತಿಕ ಕಾಮಗಾರಿಗಳ ಪಲಾನುಭವಿಗಳಿಗೆ ಕಾರ್ಯ ದೇಶವನ್ನು ಸಹಾಯಕ ನಿರ್ದೇಶಕ (ಗ್ರಾ ಉ) ಶ್ರೀ ವಿಜಯ ಪಾಟೀಲ ರವರು ವಿತರಿಸಿದರು. ನಂತರ ಮಾತನಾಡಿದ ಸಹಾಯಕ ನಿರ್ದೇಶಕರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೃಷಿ ಹೊಂಡ, ಕುರಿ ದೊಡ್ಡಿ, ಆಡಿನ / ಮೇಕೆ ಶೆಡ್, ಕೋಳಿ ಶೆಡ್ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ವೈಯಕ್ತಿಕ ಕಾಮಗಾರಿಗಳು ಇದ್ದು ಅರ್ಹ ಪಲಾನುಭವಿಗಳು ಗ್ರಾಮ ಪಂಚಾಯತಗಳಿಗೆ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದು ಕೊಳ್ಳಿ ಎಂದರು.

ಗ್ರಾ ಪಂ ಮಲ್ಲಾಪುರ ಕೆ.ಎನ್ ದಲ್ಲಿ ಆಯ್ಕೆಯಾದ ಅರ್ಹ ದನದ ಕೊಟ್ಟಿಗೆ ಪಲಾನುಭವಿಗಳು 14 ಮತ್ತು ವಸತಿ ಯೋಜನೆ ಪಲಾನುಭವಿಗಳು 07 ಮತ್ತು ಹಣಬರಟ್ಟಿ ಗ್ರಾಮ ಪಂಚಾಯತದಲ್ಲಿ ಆಯ್ಕೆಯಾದ ಅರ್ಹ ದನದ ಕೊಟ್ಟಿಗೆ ಪಲಾನುಭವಿ 07 ಜನರಿಗೆ ಕಾರ್ಯ ದೇಶವನ್ನು ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಸನಗೌಡ ಪಾಟೀಲ, ಶ್ರೀ ಶಿವಾನಂದ ಕಲ್ಲೂರ, ಕಾರ್ಯದರ್ಶಿ ಗಳು, ಬಿ.ಎಫ್.ಟಿ ಗಳಾದ ಸಿದ್ದಪ್ಪ ಕಂಬಾರ, ಈಶ್ವರ್ ನೆಲ್ಲಿಗಣಿ, GKM ಗಳಾದ ಅನಸೂಯಾ ಸಣ್ಣಮಲ್ಲಯ್ಯನವರ, ಲಕ್ಷ್ಮಿ ಮ್ಯಾಸಗೋಳ, DEO ಗಳು ಮತ್ತು ಫಲಾನುಭವಿಗಳು ಹಾಗೂ ಗ್ರಾ ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಎಂ.ಶರ್ಮಾ.ಬೆಳಗಾವಿ