ಪ್ರತಿಭಾ ಕಾರಂಜಿಯಲ್ಲಿ ಕೋಡಿಹಳ್ಳಿಯ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಛದ್ಮವೇಷದಲ್ಲಿ ಎಲ್ಲರ ಮನಗೆದ್ದ – ಆರ್ ಭಾವನಾ ಮತ್ತು ಲಾಸ್ಯ.
ಚಳ್ಳಕೆರೆ ಸ.02

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ 2024 – 25 ನೇ. ಸಾಲಿನ ತಾಲ್ಲೂಕು ಬಂಜಗೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಯಾಗಳ ಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನಮ್ಮ ಸ.ಹಿ.ಪ್ರಾ.ಶಾಲೆ ಕೋಡಿಹಳ್ಳಿಯ ಶಾಲಾ ಮಕ್ಕಳು ಭಾಗವಹಿಸಿದ 25 ಮಕ್ಕಳಲ್ಲಿ 11 ಸ್ಥಾನಗಳನ್ನು ಗೆದ್ದು ಕೊಂಡರು ಶಾಲೆಗೆ ಕೀರ್ತಿ ತಂದಿದ್ದಾರೆ.ಛದ್ಮವೇಷ ಸ್ಪರ್ಧೆಯಲ್ಲಿ ಶ್ರೀಮತಿ ರಾಧಮ್ಮ ರುದ್ರಮುನಿ.ಏಚ್ ರವರ ಪುತ್ರಿ ಭಾವನ.ಆರ್ ಭಾಗವಹಿಸಿ ಶಾರದಾ ಮಾತೆಯ ವೇಷ ಪ್ರತಿಯೊಬ್ಬರ ಗಮನ ಸೆಳೆಯಿತು,

ಲಾಸ್ಯ ವಿದ್ಯಾರ್ಥಿನಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಿತು.ಚಳ್ಳಕೆರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀಯುತ ಕೆ.ಎಸ್.ಸುರೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಭಾ ಕಾರಂಜಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರುವ ಸುಪ್ತ ಪ್ರತಿಭೆ ಮತ್ತು ಕಲೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು ಎಂದರು. ಈ ಸಂದರ್ಭದಲ್ಲಿ ಬಂಜಗೆರೆ ಕ್ಲಸ್ಟರ್ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಹಾಗೂ ತಳಕು ಕ್ಲಸ್ಟರ್ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು,

ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ನಾಯ್ಕ್, ನಂದಿನಿ ತಿಪ್ಪೇಶ, ಚನ್ನಕ್ಕ ತಿಪ್ಪೇಸ್ವಾಮಿ, ಕಣುಮಾಕ್ಷಿ ನಾಗೇಶ ಹಾಜರಿದ್ದರು, ಮಾಜಿ ಸಿ.ಆರ್.ಪಿ ವಿಷ್ಣು ವರ್ಧನ್ ಸರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಶಿಕ್ಷಕರಾದ ರತ್ನಮ್ಮ, ಜಿ.ಟಿ ಬಸವರಾಜ್, ಸುಪ್ರಿಯಾ, ಸುಶೀಲಮ್ಮ, ಉಪಸ್ಥಿತರಿದ್ದರು. ಎಲ್ ರಮೇಶ್ ನಾಯ್ಕ್ ಸಹ ಶಿಕ್ಷಕರು ನಿರೂಪಣೆ ಮಾಡಿದರು, ನೂತನ ಸಿ.ಆರ್.ಪಿ ಸುರೇಶ ರವರು ಸ್ವಾಗತಿಸಿದರು, ಕುಮಾರ್ ಮಾಸ್ಟರ್ ವಂದಿಸಿದರು, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಸರ್ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.