ನರೇಗಲ್ ಪಟ್ಟಣ ಪಂಚಾಯಿತಿ ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಫಕೀರಪ್ಪ ಮಳ್ಳಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಕೊರದಾನ ಮಠ ಆಯ್ಕೆ.
ನರೇಗಲ್ ಸ.02

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯತಿ ಇಂದು ನಡೆದ ಎರಡನೇ ಅವಧಿಗೆ ಅಧ್ಯಕ್ಷರು ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡು ಸಾಮಾನ್ಯ ಅಭ್ಯರ್ಥಿ ಮೀಸಲಾಗಿತ್ತು ಅದರಲ್ಲಿನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು ಅದರಲ್ಲಿ 15 ನೇ. ವಾರ್ಡಿನ ಫಕೀರಪ್ಪ ಮಳಿ ಅವರು 17 ನೇ. ವಾರ್ಡಿನ ಕುಮಾರಸ್ವಾಮಿ ಕೊರದಾನ್ಮಠ ಮೂರನೇ ವಾರ್ಡಿನ ಮಲ್ಲನಗೌಡ ಬೊಮ್ಮನಗೌಡ 8 ನೇ. ವಾರ್ಡಿನ ಶ್ರೀಮತಿ ಹೊಸಮನಿ ಅವರು ನಾಮಪತ್ರ ಸಲ್ಲಿಸಿದರು ಅದರಲ್ಲಿ ಬಿಜೆಪಿ ಇಬ್ಬರು ಸದಸ್ಯರು ಸಂಖ್ಯಾ ಬಲದ ಕೊರತೆಯಿಂದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದರು ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು 17 ಜನ ಸದಸ್ಯರನ್ನು ಒಳ ಗೊಂಡಿದ್ದು ಅದರಲ್ಲಿ ಬಿಜೆಪಿ ಹದಿಮೂರು ಜನ ಕಾಂಗ್ರೆಸ್ಸಿನ ಮೂರು ಜನ ಇಬ್ಬರು ಪಕ್ಷೇತರ ಸದಸ್ಯರಿದ್ದು ಆರು ಜನ ಬಿಜೆಪಿ ಸದಸ್ಯರು ಒಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್ಸಿಗೆ ಬೆಂಬಲ ತೆಗೆದು ಕೊಂಡು ಬಿಜೆಪಿ ಬಂಡಾಯ ಅಭ್ಯರ್ಥಿಗಳ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮತ ಕ್ಷೇತ್ರದ ಶಾಸಕರಾದ ಜಿ.ಎಸ್ ಪಾಟೀಲ್ ಅವರು ಆಗಮಿಸಿ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಎಲ್ಲರೂ ಸಮಾನ ದೃಷ್ಟಿಯಿಂದ ಕೆಲಸ ಮಾಡಿ ಎಂದು ಮಾರ್ಗದರ್ಶನ ನೀಡಿದರು ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿ ಒಳ್ಳೆಯ ಕೆಲಸವನ್ನು ಜನರಿಗೆ ನೀಡಿ ಎಂದು ಮಾರ್ಗದರ್ಶನ ಮಾಡಿದರು ಚುನಾವಣೆ ಅಧಿಕಾರಿಯಾಗಿ ಗಜೇಂದ್ರಗಡ ತಾಲೂಕ ತಹಶೀಲ್ದಾರ ಕಿರಣ್ ಕುಮಾರ್ ಕುಲಕರ್ಣಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿ ವರ್ಗದವರು ಶಾಂತಿ ರೀತಿಯಿಂದ ಚುನಾವಣೆ ಕಾರ್ಯವನ್ನು ನಡೆಸಿ ಕೊಟ್ಟರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ.