ಸುಪ್ರೀಂ ಕೋರ್ಟ್ ಮೊರೆ ಸಾರ್ಥಕ, ಪೈ.ಪಂ ನೂತನ ಕಾಂಗ್ರೇಸ್ ಅಧ್ಯಕ್ಷೆ – ಬದ್ದಿ ರೇಖಾ ರಮೇಶ್.

ಕೊಟ್ಟೂರು ಸ .03

2018 ರಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿ ಸ್ಥಳೀಯ ಆಡಳಿತ ಅಧಿಕಾರದ ಹಂಚಿಕೆ ಮಾಡಲು ಸರ್ಕಾರ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗವಾಗಿ ವಿಂಗಡಿಸಿ ಆದೇಶವನ್ನು ಹೊರಡಿಸಲಾಯಿತು ಇದನ್ನು ಪ್ರಶ್ನಿಸಿದ 20 ನೇ.ವಾರ್ಡಿನ ಪಕ್ಷೇತರ ಸದಸ್ಯೆ ಬಿ.ರೇಖಾ ರಮೇಶ್ ರವರು ಸ್ಥಳೀಯ ಆಡಳಿತ ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ ವಾಗಿರುವುದನ್ನು ಮನಃ ಗೊಂಡು ನಿರಂತರ 20 ವರ್ಷಗಳ ಕಾಲ ಪರಿಶಿಷ್ಟ ಮಹಿಳೆಗೆ ಅವಕಾಶವನ್ನು ನೀಡದೆ ಇರುವುದನ್ನು ವಿರೋಧಿಸಿ ಹೈ ಕೋರ್ಟ್ ಮೆಟ್ಟಿಲು ಏರಲಾಯಿತು. ಇದರ ಸಂಬಂಧ ಕೆಲವು ದಿನಗಳ ಕಾಲ ಹೈಕೋರ್ಟ್ ತಡೆಯಾಜ್ಞೆಯನ್ನು ನೀಡಲಾಯಿತು ನಂತರ ಪ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮುಂದುವರೆದ ಹಿನ್ನಲೆಯಲ್ಲಿ ಇತಿಹಾಸದ ಇದೆ ಮೊದಲ ಬಾರಿಗೆ ಈ ವಿಷಯವಾಗಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿ ಅಫಿಡೆವಿಟ್ ಸಲ್ಲಿಸಲಾಯಿತು ಸರ್ಕಾರದ ಮೀಸಲಾತಿ ಸುತ್ತೋಲೆಯನ್ನು ಪರಿಶೀಲಿಸಿದ ತ್ರಿ ಸದಸ್ಯ ಪೀಠ ಅಧಿಕಾರದ ಹಂಚಿಕೆಯಲ್ಲಿ ರಾಜಕೀಯ ಪಕ್ಷಗಳ ಹಸ್ತ ಅಭಿಲಾಷೆ ಮಾಡದೇ ಸುತ್ತೋಲೆ ಪ್ರಕಾರ ಕಾನೂನು ಬದ್ಧವಾಗಿ ಮೀಸಲಾತಿಯ ಅಧಿಕಾರ ಹಂಚಿಕೆ ಮಾಡಬೇಕು ಹಾಗೂ ಎರಡನೇ ಅವಧಿಯಲ್ಲಿ ಮೀಸಲಾತಿಯನ್ನು ಕ್ರಮ ಬದ್ದವಾಗಿ ನೀಡಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಇದರ ಕಾನೂನು ಸಮರದ ಪ್ರತಿಫಲವಾಗಿ ಎರಡನೇ ಅವಧಿಗೆ ಪರಿಶಿಷ್ಟ ಮಹಿಳೆಗೆ ಅವಕಾಶ ನೀಡಿರುವುದು ಸಂತಸದ ತಂದಿದೆ. ಎಂದು ನೂತನ ಕಾಂಗ್ರೆಸ್ ಅಧ್ಯಕ್ಷೆ ಬದ್ದಿ ರೇಖಾ ರಮೇಶ್ ರವರು ಸುದ್ದಿಗಾರರೊಂದಿಗೆ ತಿಳಿಸಿದರು.ಪಟ್ಟಣದಲ್ಲಿ 20 ವಾರ್ಡ್ ಗಳ ಪೈಕಿ 09 ಕಾಂಗ್ರೆಸ್ 08 ಬಿಜೆಪಿ 3 ಪಕ್ಷೇತರ ಅಭ್ಯರ್ಥಿಗಳು ಇದ್ದು ಇದರಲ್ಲಿ ಕಾಂಗ್ರೆಸ್ ನಾ 02 ಅಭ್ಯರ್ಥಿಗಳು ಮತ್ತು ಪಕ್ಷೇತರ 01 ಅಭ್ಯರ್ಥಿ ಬೇರೆ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದು ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಲು ಸುಲಭವಾಗಿತ್ತು ಸತತವಾಗಿ 20 ವರ್ಷಗಳಿಂದ ಎಂ.ಎಂ.ಜೆ ಹರ್ಷವರ್ಧನ್ ರವರು ಪಟ್ಟಣ ಪಂಚಾಯಿತಿ ಅಧಿಕಾರವನ್ನು ತನ್ನ ಹಿಡಿತದಲ್ಲಿ ಹಿಡಿದಿಟ್ಟು ಕೊಂಡು ಬಂದಿರುವ ಗಮನಿಸಿದ ಸ್ಥಳೀಯ ನಾಯಕರು ಇದನ್ನು ಛಿದ್ರ ಗೊಳ್ಳಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖಪಾತ್ರ ವಹಿಸಿದರು ಎಂಬ ವದಂತಿಗಳು ಹರಿದಾಡುತ್ತಿವೆ.

ಅದು ಏನೇ ಇರಲಿ ಎಂ.ಎಂ.ಜೆ ಹರ್ಷವರ್ಧನ್ ರವರು ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿ ತೆಗೆದು ಕೊಳ್ಳುವಲ್ಲಿ ಹಿಂದೇಟು ಹಾಕಿರುವುದಕ್ಕೆ ಕೆಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಂತಾಗಿದೆ ಹಲವರು ಸಾರ್ವಜನಿಕರ ವಲಯಗಳಲ್ಲಿ ಇವರ ರಾಜಕೀಯ ಶಕ್ತಿ ಮತ್ತು ಆಸಕ್ತಿ ಕಡಿಮೆ ಆಗಿದೆ ಎಂಬ ಪಿಸು ಮಾತುಗಳು ಕೇಳಿ ಬರುತ್ತಿವೆ. ಕೋಟ್..(1)ನಮಗೆ ನ್ಯಾಯಾಲಯದಲ್ಲಿ ಸಂಪೂರ್ಣ ವಿಸ್ವಾಸ ಇರುವುದರಿಂದ 2018 ರ ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಅಧ್ಯಕ್ಷರ ಮೀಸಲಾತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಯಿತು ಆದ ಕಾರಣ ಕ್ರಮ ಬದ್ದವಾಗಿ ಸ್ಥಳೀಯ ಚುನಾವಣೆಯಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಲಾಗಿತ್ತು 2020 ರಲ್ಲಿ ಸರ್ಕಾರದ ಸುತ್ತೋಲೆಯನ್ನು ಸುಪ್ರೀಂ ಕೋರ್ಟ್ ಗೆ ಅಪಿಡೆವಿಟ್ ನ್ನು ಸಲ್ಲಿಸಿದ ಪ್ರತಿ ಫಲವೇ ಈ ಬಾರಿ ಪರಿಶಿಷ್ಟ ಜಾತಿ ಮಹಿಳೆ ಬರಲು ಅನುಕೂಲವಾಯಿತು.ಬದ್ದಿ ಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಮುಖಂಡ.ಕೋಟ್.. (2)ನನಗೆ ಪಪಂ ಅಧ್ಯಕ್ಷರಾಗಲು ಸಹಕರಿಸಿದ ನೀಡಿದ ಕೆ.ಎಂ.ಎಫ್ ಅಧ್ಯಕ್ಷ ಭೀಮ ನಾಯ್ಕ ರವರಿಗೆ ಮತ್ತು ಎಲ್ಲಾ ವಾರ್ಡಿನ ಸದಸ್ಯರಿಗೆ ಹಾಗೂ ಮುಖಂಡರಿಗೂ ಹೃತ್ಪೂರ್ವಕ ಅಭಿನಂದನೆಗಳು ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದು ಕೊಂಡು ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಬದ್ದಿ ರೇಖಾ ರಮೇಶ್ ಪ.ಪಂ ಕಾಂಗ್ರೆಸ್ ನೂತನ ಅಧ್ಯಕ್ಷರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button