“ನಮ್ಮ ಆಹಾರದಲ್ಲಿ ರುಚಿಯ ಮತ್ತು 6 ರಸಗಳ ಮಹತ್ವ”…..

ಡಾ, ನವೀನ್.ಬಿ.ಸಜ್ಜನ್ ಪ್ರೊಫೆಸರ್ ಮತ್ತು ಶಸ್ತ್ರ ಚಿಕಿತ್ಸಾ ತಜ್ಞರುಚಿತ್ರದುರ್ಗ.

ಆಯುರ್ವೇದದಲ್ಲಿ ಆಚಾರ್ಯರು ರುಚಿಗೆ ಬಹಳ ಪ್ರಾಶಸ್ತ್ಯವನ್ನು ನೀಡಿದ್ದಾರೆ. ನಾವು ತಿನ್ನುವ ಆಹಾರವು ಪ್ರತಿ ದಿನವು ಬೇರೆ ಬೇರೆಯಾಗಿ ರುಚಿಯಾಗಿರುತ್ತದೆ. ಹಾಗಾದರೆ ಈ ಆಹಾರ ಏನರಿಂದ ಮಾಡಲ್ಪಟ್ಟಿದೆ ಮತ್ತು ಅದರ ಲಾಭಗಳನ್ನು ತಿಳಿಯೋಣ ಮುಖ್ಯವಾಗಿ ಅವರ ಪ್ರಕಾರ 6 ರಸಗಳೆಂದು ಪರಿಗಣಿಸಿದ್ದಾರೆ ಮತ್ತು ಇವುಗಳನ್ನು ಆಹಾರದ ರೂಪದಲ್ಲು ಸೇವಿಸಬಹುದು. ಇದು ತುಂಬಾ ಮಹತ್ವವನ್ನು ಹೊಂದಿದ್ದು, ಎಲ್ಲಾ 6 ರಸಗಳು ಕೂಡ ಅದರದೇ ಆದ ಮಹತ್ವ ಮತ್ತು ಗುಣ ವೈಖರಿಗಳನ್ನು ಹೊಂದಿವೆ. ಈ ರಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಇದರ ಅರ್ಥ ಏನೆಂದರೆ, ಜಗತ್ತಿನಲ್ಲಿರುವ ಎಲಾ ದ್ರವ್ಯಗಳು ಪಾಂಚ ಭೌತಿಕ ತತ್ವಗಳಿಂದ ಮಾಡಲ್ಪಡಲಾಗಿದೆ ಏಂದು. ಹಾಗೆಯೆ ಎಲ್ಲಾ ರಸಗಳು ಕೂಡ ಪಾಂಚ ಭೌತಿಕ ತತ್ವಗಳಿಂದ ಮಾಡಲ್ಪಡಲಾಗಿದೆ ಮತ್ತು ಅದರಲ್ಲಿ ಎರಡು ಮಹಾ ಭೂತಗಳು ಪ್ರಧಾನವಾಗಿರುತ್ತವೆ ಮಧುರ ರಸ – ಪೃಥ್ವಿ ಮತ್ತು ಜಲ ಮಹಾಭೂತ ಆಮ್ಲ ರಸ – ಪೃಥ್ವಿ ಮತ್ತು ಅಗ್ನಿ ಮಹಾಭೂತ ಲವಣ ರಸ – ಜಲ ಮತ್ತು ಅಗ್ನಿ ಮಹಾಭೂತ ಕಟು ರಸ – ಅಗ್ನಿ ಮತ್ತು ವಾಯು ಮಹಾಭೂತ ತಿಕ್ತ ರಸ – ವಾಯು ಮತ್ತು ಆಕಾಶ ಮಹಾಭೂತ ಕಷಾಯ ರಸ – ವಾಯು ಮತ್ತು ಪೃಥ್ವಿ ಮಹಾಭೂತ ಇವುಗಳ ಗುಣಗಳು ಮಧುರ ರಸ – ತೇವ, ಶೀತ, ಗುರು ಆಮ್ಲ ರಸ – ತೇವ, ಶೀತ, ಗುರು ಲವಣ ರಸ – ತೇವ, ಉಷ್ಣ, ಹಗುರ ಕಟು ರಸ – ತೇವ, ಉಷ್ಣ, ಹಗುರ ತಿಕ್ತ ರಸ – ಒಣ, ಉಷ್ಣ, ಹಗುರ ಕಷಾಯ ರಸ – ಒಣ, ಉಷ್ಣ, ಹಗುರ ಈ 6 ರಸಗಳ ಸರಿಯಾದ ಪ್ರಮಾಣದಲ್ಲಿ ಆಯಾ ರುತಿವಿನ ಅನುಗುಣವಾಗಿ ಸೇವಿಸಿದರೆ, ದೇಹದಲ್ಲಿ ವ್ಯಾಧಿಕ್ಷಮತೆ ಹೆಚ್ಚುವುದು, ಅಂಗಾಂಗಳ ಆರೋಗ್ಯ ಕಾಪಡುವುದು, ಜೀವಕೋಶಗಳ ಧಾರಣೆಯನ್ನು ಮಾಡುವುದು ಮತ್ತು ನಮ್ಮ 5 ಇಂದ್ರಿಯಗಳನ್ನು ಆರೋಗ್ಯವಾಗಿಡುವುದು. ಆಹಾರಗಳು ದೇಹದ ಅಸಮತೋಲನವನ್ನು ಹೇಗೆ ಮಾಡಬಹುದು?

ಉದಾಹರಣೆ 1: ನಿಯಮಿತವಾಗಿ ಸಿಹಿ, ಉಪ್ಪು ಮತ್ತು ಹುಳಿ ಆಹಾರವನ್ನು ಸೇವಿಸಿದರೆ, ಕಫ ದೋಷವು ಹೆಚ್ಚಾಗುತ್ತದೆ ಮತ್ತು ಬೊಜ್ಜು (ಸ್ಥೌಲ್ಯ), ಮಧುಮೇಹ (ಮಧು ಮೇಹ) ಇತ್ಯಾದಿಗಳಿಗೆ ಕಾರಣವಾಗುತ್ತದೆ. ಸಿಹಿ, ಖಾರ, ಹುಳಿ ರುಚಿಗಳನ್ನು ಹೊಂದಿರುವ ಕಡಿಮೆ ಆಹಾರಗಳನ್ನು ಮತ್ತು ಕಹಿ, ಕಟುವಾದ ಮತ್ತು ಸಂಕೋಚಕ ಆಹಾರವನ್ನು ಸೇವಿಸಿದರೆ ನೀವು ದೇಹದ ತೂಕವನ್ನು ಕಡಿಮೆ ಮಾಡಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಉದಾಹರಣೆ 2: ನಿಯಮಿತವಾಗಿ ಹುಳಿ, ಉಪ್ಪು, ಕಟುವಾದ ಆಹಾರವನ್ನು ಸೇವಿಸಿದರೆ ಪಿಟ್ಟಾ ದೋಷವು ಹೆಚ್ಚಾಗುತ್ತದೆ ಮತ್ತು ಆಮ್ಲೀಯತೆ, ಬೆಲ್ಚಿಂಗ್ ಮತ್ತು ಸುಡುವ ಸಂವೇದನೆ ಇತ್ಯಾದಿಗಳಿಗೆ ಕಾರಣವಾಗುತ್ತದೆ (ಆಮ್ಲಪಿತ್ತ) ಹುಳಿ, ಉಪ್ಪು, ಕಟುವಾದ ರುಚಿಗಳನ್ನು ಹೊಂದಿರುವ ಕಡಿಮೆ ಆಹಾರವನ್ನು ಸೇವಿಸಿದರೆ ಮತ್ತು ಸಂಕೋಚಕ, ಕಹಿ ಮತ್ತು ಸಿಹಿಯಾದ ಹೆಚ್ಚಿನ ಆಹಾರವನ್ನು ಸೇವಿಸಿದರೆ ಮೇಲಿನ ರೋಗ ಲಕ್ಷಣಗಳನ್ನು ನೀವು ನಿಯಂತ್ರಿಸಬಹುದು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button