25.ನೇ ವರ್ಷದ ಕಾರ್ಗಿಲ್ – ವಿಜಯೋತ್ಸವದ ಸಂಭ್ರಮ.

ಕೊಟ್ಟೂರು ಜು.27

ದಿನಾಂಕ 26 ಜುಲೈ 2024 ರಂದು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನ ದಿಂದ ಬಸ್ಟ್ಯಾಂಡ್ ಹೊರಗೆ ಪಂಜಿನ ಮೆರವಣಿಗೆ ಮೂಲಕ ಹಸಿರು ಹೊನಲು ಮತ್ತು ಜೆ ಸಿ ಐ ತಂಡಗಳು 25.ನೇ ಕಾರ್ಗಿಲ್ ವಿಜಯೋತ್ಸವದ ಸಂಭ್ರಮವನ್ನು ವಂದೇ ಮಾತರಂ, ಬೋಲೋ ಭಾರತ್ ಮಾತಾ ಕಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಣೆ ಮಾಡಿದರು. ಕಾಶ್ಮೀರದ ಉತ್ತರ ಲಡಕ್ ಕಾರ್ಗಿಲ್ ಜಿಲ್ಲೆಯಲ್ಲಿ ಮೇ. 14 ರಂದು ಪ್ರಾರಂಭವಾದ ಕಾರ್ಗಿಲ್ ಯುದ್ದವು ಸತತವಾಗಿ ಮೂರು ತಿಂಗಳ ಕಾಲ ಜುಲೈ 26. ರ ವರೆಗೆ ನಡೆಯಿತು. ಹಾಗೂ ಕೊಟ್ಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರಾದ ಸಿಪಿಐ ವೆಂಕಟಸ್ವಾಮಿಯವರು 16 ವರ್ಷ ಸೈನಿಕ ಸೇವೆಯಲ್ಲಿ ಸಲ್ಲಿಸಿದ್ದಾರೆ ಎಂದು ಅಜ್ಜಪ್ಪ ಮಾಜಿ ಸೈನಿಕರು ಹೇಳಿದರು. ನಂತರ ನಮ್ಮ ಭಾರತ ದೇಶಕ್ಕಾಗಿ 439 ವೀರ ಸೈನಿಕರು ಹುತಾತ್ಮರಾದರು ಸಾವಿರಾರು ಸೈನಿಕರಿಗೆ ಗಾಯಗಳಾಗಿದ್ದವು. ಇಂತಹ ಸಂದರ್ಭದಲ್ಲಿ ಎದೆ ಗುಂದದೆ ಹೋರಾಡಿ ಜಯ ಶಾಲಿಗಳಾದರು ನಮ್ಮ ದೇಶವನ್ನು ವೀರ ಯೋಧರಿಗೆ ಕಾರ್ಗಿಲ್ ವಿಜಯೋತ್ಸವ ನಮನವನ್ನು ಸಲ್ಲಿಸಿದರು.

ನಂತರ ಮಾತನಾಡಿದ ಮಾಜಿ ಸೈನಿಕ ರಾಜಣ್ಣನವರು ಕಾರ್ಗಿಲ್ ವಿಜಯೋತ್ಸದ ಸಂಭ್ರಮವನ್ನು ಸರಿ ಸುಮಾರು 4795 ಅಡಿ ಎತ್ತರದಲ್ಲಿರುವ ಟೈಗರ್ ಹಿಲ್ಸ್ ನಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವುದರ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮಿಸಿದರು ಎಂದು ಹೇಳಿದರು. ಇದೇ ವೇಳೆಯಲ್ಲಿ ಕೊಟ್ಟೂರಿನ ಮಾಜಿ ಸೈನಿಕರದ ಅಜ್ಜಪ್ಪ ಮತ್ತು ರಾಜಣ್ಣನವರಿಗೆ ಗೌರವ ಪೂರಕವಾಗಿ ಹಸಿರು ಹೊನಲು ಮತ್ತು ಜೆ ಸಿ ಐ ತಂಡಗಳು ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಹಸಿರು ಹೊನಲು ತಂಡದ ಅಧ್ಯಕ್ಷರು ಗುರುರಾಜ್ ಸಂಸ್ಥಾಪಕರಾದ ಬಂಜಾರ್ ನಾಗರಾಜ್ ಸದಸ್ಯರಾದ ವಿಕ್ರಂ ನಂದಿ ಹಾಗೂ ಜೆಸಿಐ ಕಾಟನ್ ಅಧ್ಯಕ್ಷರಾದ ನಂದೀಶ್ ಕುರಕರ್ಣಿ ಮತ್ತು ಸರ್ವ ಸದಸ್ಯರು ಮತ್ತು ಡಾಕ್ಟರ್ ಜಗದೀಶ್ ಚಂದ್ರ ಬೋಸ್ ಈಶ್ವರಪ್ಪ ರೈತ ಮುಖಂಡರು ಜಯಪ್ರಕಾಶ್ ಸಾರ್ವಜನಿಕರು ಮತ್ತು ಗೀತಾಂಜಲಿ ಶಿಂಧೆ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button