ಒಳ ಮೀಸಲಾತಿ ಕುರಿತು ಸೆ, 12 ರಂದು ತಮಟೆ ಚಳುವಳಿಗೆ ಜಿಲ್ಲೆಯ ದಲಿತ ಮುಖಂಡರುಗಳು ಭಾಗವಹಿಸುವಂತೆ – ಎಸ್ ದುರ್ಗೇಶ್ ಕರೆ.
ಕೂಡ್ಲಿಗಿ ಸ.07

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಸ್ ದುರ್ಗೇಶ್ ಹಾಗೂ ತಾಲೂಕಾ ಸಂಚಾಲಕರಾದ ಎಳ್ನೀರ್ ಗಂಗಣ್ಣ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಕಾರಣ ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅವಕಾಶವಿದೆ, ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಿ. ಸೆಪ್ಟಂಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಏಕಕಾಲದಲ್ಲಿ ಕರ್ನಾಟಕ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ತಮಟೆ ಚಳುವಳಿ ಮೂಲಕ ಒಳ ಮೀಸಲಾತಿಯನ್ನು ಜಾತಿಗೆ ಅನುಸಾರವಾಗಿ ಆಯೋಗ ರಚನೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿ ಗೊಳಿಸುವಂತೆ ಒತ್ತಾಯಿಸಿ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾ ಸಮಿತಿ ಕರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಹಾಗೂ ನಗರ ಹೋಬಳಿ ಗ್ರಾಮ ಶಾಖೆಯ ಸಮುದಾಯಗಳ 30 ವರ್ಷಗಳ ಹೋರಾಟದ ಫಲದ ಹಕ್ಕನ್ನು ಕೇಳಲು ತಮಟೆ ಚಳುವಳಿಯ ಹೋರಾಟದೊಂದಿಗೆ ಮಾನ್ಯ ಜಿಲ್ಲಾಧಿಕಾರಗಳಿಗೆ ಒಳ ಮೀಸಲಾತಿ ಜಾರಿಯಾಗುವಂತೆ ಮನವಿ ಪತ್ರ ಕೊಡಲು ಜಿಲ್ಲೆಯ ಎಲ್ಲಾ ದಲಿತ ಮುಖಂಡರುಗಳು ಭಾಗವಹಿಸಿ ಹೋರಾಟ ಯಶಸ್ವಿ ಗೊಳಿಸ ಬೇಕೆಂದು ಎಸ್ ದುರ್ಗೇಶ್ ಜಿಲ್ಲಾ ಸಂಚಾರಕರು ನಮ್ಮ ಮಾಧ್ಯಮದ ಮೂಲಕ ಕೇಳಿ ಕೊಂಡಿರುತ್ತಾರೆ ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಸಂಘಟನಾ ಸಂಚಾಲಕರಾದ ಎಳೆನೀರು ಗಂಗಣ್ಣ ಜಿಲ್ಲಾ ಸಂಘಟನಾ ಸಂಚಾಲಕರಾದ ಬಿಟಿ ಗುದ್ದಿ ದುರ್ಗೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಕಂದಗಲ್ ಪರಶುರಾಮ್, ಹಿರಿಯ ಪತ್ರಕರ್ತರಾದ ಸಿದ್ದಾಪುರ ಈಶ್ವರಪ್ಪ, ಬಣವಿಕಲ್ ಚೌಡೇಶ್ ಕಾನಾಮಡಗು ಫಕೀರಪ್ಪ, ಬಿ ಮಹೇಶ್, ಕೆ ಮೂಗಪ್ಪ, ಬಾಬು ಜಗಜೀವನ್ ರಾಮ್ ತಾಲೂಕ ಅಧ್ಯಕ್ಷರಾದ ಸಾಸಲವಾಡ ಶಿವು ಸಿಎಸ್ ಪುರ ಮಹೇಶ್, ಚೌಡಪುರ ಬಸವರಾಜ್, ಅಜ್ಜೆಯ ಟಿ.ನಾಗರಾಜ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ.