ಕಾರ್ತಿಕ್ ಯುವಕರಿಗೆ ಸ್ಪೂರ್ತಿ ಯಾಗಲಿ – ವಸಂತ ಕುಮಾರ್ ಕವಾಲಿ.
ತರೀಕೆರೆ ಜೂ .19





ಬಿ.ಹೆಚ್ ರಸ್ತೆ ಅಭಿವೃದ್ಧಿ ಕಾಮಗಾರಿಯು ಮಂದಗತಿಯಲ್ಲಿ ನಡೆಯುತ್ತಿದ್ದು ಕುಡಿಯುವ ನೀರಿಗೆ ತೊಂದರೆ ಯಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಕವಾಲಿ ಹೇಳಿದರು. ಅವರು ಇಂದು ಪಟ್ಟಣದ ಪುರ ಸಭಾ ಸಭಾಂಗಣದಲ್ಲಿ ನಡೆದ ಪುರ ಸಭಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಭೆ ಪ್ರಾರಂಭದ ಮೊದಲು ಸಾಹಿತಿ ಚಿಂತಕರಾದ ವೆಂಕಟೇಶ್ ಮೂರ್ತಿ ಕಸ್ತೂರಿರಂಗನ್ ಮತ್ತು ವಿಮಾನ ಅಪಘಾತದಲ್ಲಿ ಮೃತರದವರಿಗೆ ಮತ್ತು ಪುಲ್ವಾಮಾ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಯೊಂದಿಗೆ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು, ಪುರ ಸಭಾ ಸದಸ್ಯರಾದ ಲೋಕೇಶ್, ದಾದಾಪೀರ್, ಟಿಎಮ್ ಭೋಜರಾಜ್, ಆದಿಲ್ ಪಾಷಾ,ಟಿ ಜಿ ಮಂಜುನಾಥ್ ಮುಂತಾದವರು ಮಾತನಾಡಿ ಕಾರ್ತಿಕ್ ದೇಶದ ಉನ್ನತ ಹುದ್ದೆಗೆ ಆಯ್ಕೆ ಯಾಗಿದ್ದು ಈ ನೆಲದ ಯುವಕ ಸೇನೆಯ ದೇಶದ ದೊಡ್ಡ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಲಾಯಿತು.
ಕಾರ್ತಿಕ್ ಯುವಕರಿಗೆ ಸ್ಪೂರ್ತಿಯಾಗಲಿ ಎಂದು ಸಭಾಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಹೇಳಿದರು. ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಸದಸ್ಯರಾದ ಟಿ.ಎಂ ಭೋಜರಾಜ, ದಾದಾಪೀರ್ ಹಾಗೂ ಎಲ್ಲರೂ ಆಕ್ಷೇಪಣೆ ವ್ಯಕ್ತಪಡಿಸಿದರು ಯಾವುದೇ ಕಾಮಗಾರಿಯೂ ಪೂರ್ಣ ಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಶು ಅಭಿವೃದ್ಧಿ ಅಧಿಕಾರಿಯಾಗಿ ಚರಣ್ ರಾಜ್ ರವರು ಇನ್ನೂ ಮೂರು ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಪುರ ಸಭೆಯಿಂದ ಒದಗಿಸಿಕೊಡಬೇಕು ಎಂದು ಹೇಳಿದರು. ಈಗಾಗಲೇ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಪುರ ಸಭೆಯಿಂದ ವಿದ್ಯುತ್ ಸಂಪರ್ಕ ಒದಗಿಸಿರುವುದಕ್ಕೆ ಪುರ ಸಭೆ ಸದಸ್ಯರಿಗೆ ಅಧ್ಯಕ್ಷರಿಗೆ ಮುಖ್ಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಸದಸ್ಯರು ಮಾತನಾಡಿ ಬಾಲ ವಿಕಾಸ ಸಮಿತಿ ಸಭೆಗಳು ಆಗುತ್ತಿಲ್ಲ ಎಂದು ತಿಳಿಸಿದರು. ಪುರ ಸಭಾ ಸ್ಥಾಹಿ ಸಮಿತಿ ಅಧ್ಯಕ್ಷರಾದ ಅನಿಲ್ ಅಂಜಯ್ಯ ಸದಸ್ಯರಾದ ರಿಹಾನ ಪರ್ವೀನ್, ಶಶಾಂಕ್, ಕಮಲ, ಚಂದ್ರಶೇಖರ್,ಬಸವರಾಜ್, ಚೇತನ್,ಆರ್ ವಸಂತ, ದಿವ್ಯರವಿ, ಗಿರಿಜಾ ಪ್ರಕಾಶ್ವರ್ಮ, ಅಶೋಕ್ ಕುಮಾರ್, ಪರಮೇಶ್, ಯಶೋದಮ್ಮ, ಆಶಾ, ವೇಣುಪ್ರಿಯ ಉಪಸ್ಥಿತರಿದ್ದು ಪುರ ಸಭಾ ಮುಖ್ಯ ಅಧಿಕಾರಿ ಹೆಚ್.ಪ್ರಶಾಂತ ರವರು ಸಭೆಯನ್ನು ನಡೆಸಿ ಕೊಟ್ಟರು. ಸಿಡಿಎಸ್ ಪರೀಕ್ಷೆಯಲ್ಲಿ 44 ನೇ. ರಾಂಕ್ ಪಡೆದು ದೇಶದ ಸೈನ್ಯಕ್ಕೆ ಲೆಫ್ಟಿನೆಂಟ್ ಆಗಿ ಆಯ್ಕೆ ಯಾಗಿರುವ ತರೀಕೆರೆಯ ಯುವಕ ಕಾರ್ತಿಕನನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು