ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೆರೂಟಗಿ ಎಂ.ಪಿ.ಎಸ್ ಶಾಲೆಯಲ್ಲಿ ವಿಜಯೋತ್ಸವ.
ಕೆರೂಟಗಿ ಸ.07

ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಬೇಕು ಮನುಷ್ಯ ಆರೋಗ್ಯ ವಾಗಿರಬೇಕಾದರೆ ಯೋಗ ಕ್ರೀಡೆ ಮುಖ್ಯ ಎಂದು ಕೆರೂಟಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎಸ್ ಸಾತಿಹಾಳ ಮಾತನಾಡಿದರು ದೇವರ ಹಿಪ್ಪರಗಿ ತಾಲೂಕಿನ ಕೆರೂಟಗಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಇಡೀ ತಾಲೂಕಿಗೆ ಹೆಮ್ಮೆ ಪಡುವಂತ ಕೀರ್ತಿ ಗಳಿಸಿದ್ದಾರೆ ಸ್ಥಳೀಯ ಕ್ರೀಡಾಕೂಟವನ್ನು ತಾಲೂಕಾ ಮಟ್ಟದಲ್ಲಿ ಹಮ್ಮಿಕೊಂಡಿದ್ದು ಈ ಕ್ರೀಡಾಕೂಟದಲ್ಲಿ ಕೆರೂಟಗಿ ಪ್ರಾಥಮಿಕ ಶಾಲೆಯ ಮಕ್ಕಳ ವಿಜಯೋತ್ಸವ ಗಗನಕ್ಕೆ ಮುಟ್ಟಿದೆ.

ಶುಕ್ರವಾರದಂದು ನಡೆದ ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೆರೂಟಗಿ ಎಂ.ಪಿ.ಎಸ್ ಶಾಲೆಯ ಮಕ್ಕಳು ಬಾಲಕರ ಖೋ ಖೋ ಆಟದಲ್ಲಿ ಪ್ರಥಮ ಬಾಲಕೀಯರ ಖೋ ಖೋ ಆಟದಲ್ಲಿ ಪ್ರಥಮ ಅದರಂತೆ ವೈಯಕ್ತಿಕ ಕ್ರೀಡೆಗಳಾದ ಬಾಲಕರ ಎತ್ತರ ಜಿಗಿತದಲ್ಲಿ ಕು. ವಿನೋದ ಹುಡೇದ ಪ್ರಥಮ ಬಾಲಕೀಯರ ಎತ್ತರ ಜಿಗಿತದಲ್ಲಿ ಕು. ಅಶ್ವೀನಿ ಹೀರೆಮಠ ಪ್ರಥಮ ಬಾಲಕೀಯರ 200 ಮೀ ಓಟದಲ್ಲಿ ಕು. ಅಶ್ವೀನಿ ಹೀರೆಮಠ ಪ್ರಥಮ ಬಾಲಕರ 200 ಮೀ ಓಟದಲ್ಲಿ ಕು. ಅಜಯ ಚೌಹಾಣ್ ದ್ವಿತೀಯ ಸ್ಥಾನ ಪಡೆದು ಇಡೀ ಶಾಲೆಗೆ ಹಾಗೂ ಊರಿಗೆ ಕೀರ್ತಿ ಪತಾಕೆ ಹಾರಿಸಿದ್ದಾರೆ ಈ ಒಂದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಲು ಮೂಲ ಕಾರಣಕರ್ತರು ಈ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಯುತ ಜಿ.ಎಸ್ ಬಿರಾದಾರ ಹಾಗೂ ಅವರಿಗೆ ಅಣಿಯಾಗಿನಿಂತ ಮುಖ್ಯ ಗುರುಗಳು ಸಿಬ್ಬಂದಿ ವರ್ಗದವರಾದ ಶ್ರೀ ಈರಣ್ಣ ಬಾಡಗಿ ಶ್ರೀ ಎಚ್.ಎ ಯಂಕಂಚಿ ಶ್ರೀ ಆರ್.ಎಮ್ ಕಾಸರ ಶ್ರೀಮತಿ ರಾಧಾ ಕಟ್ಟಿ ಶ್ರೀಮತಿ ಮಲ್ಲಕ್ಕ ನ್ಯಾಮಗೌಡರ ಶ್ರೀಮತಿ ಶಾಂತಮ್ಮ ಬಿರಾದಾರ ಕುಮಾರಿ ರೋಜಾ ಮಧಾಳೆ ಶ್ರೀ ದಾನೇಶ ಕಲಕೇರಿ ಕುಮಾರಿ ಬಸವರಾಜೇಶ್ವರೀ ಹೀರೆಮಠ ಶ್ರೀಮತಿ ನಿವೇದಿತಾ ವಡ್ಡರ ಶ್ರೀಮತಿ ಸುಮಿತ್ರಾ ಲಾಯದಗುಂದಿ ಕುಮಾರಿ ಅಶ್ವಿನಿ ಕುರ್ತಳ್ಳಿ ಊರಿನ ಶಿಕ್ಷಣ ಪ್ರೇಮಿಗಳು ಗಣ್ಯ ಮಾನ್ಯರೆಲ್ಲರೂ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ