ಅಭಿವೃದ್ಧಿ ಕಾಣದ ತರೀಕೆರೆ : ತರೀಕೆರೆ ಜನತೆಗೆ ಲೋಕೇಶ ತಾಳಿಕಟ್ಟೆ ಮನವಿ…..!

ತರೀಕೆರೆ ವಿಧಾಸಭೆಯ ಪ್ರಬಲ ಆಕಾಂಕ್ಷಿ ಶ್ರೀ ಲೋಕೇಶ ತಾಳಿಕಟ್ಟೆ , ತರಿಕೆರೆ ಜನತೆಯಲ್ಲಿ ತರಿಕೆರೆ ವಿಧಾನಸಭೆಯ ಆಡಳಿತದ ಅತಂತ್ರ ರಾಜಕೀಯ, ಅಭಿವೃಧ್ಧಿ ಕಾರ್ಯಗಳ ಬಗ್ಗೆ ಜನತೆಯ ಮುಂದಿಟ್ಟಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಜನ ಬುದ್ದಿವಂತಿಕೆಯಿಂದ, ಯಾವುದೇ ಆಮಿಷಕ್ಕೆ ಕೈ ಚಾಚದೆ ಅಭಿವೃದ್ಧಿಯೇ ಧ್ಯೆಯವನ್ನಾಗಿಸಿದ ಕಾಂಗ್ರೇಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತ ನೀಡಿ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿ ಕೊಡಬೇಕಾಗಿ ವಿನಂತಿಯನ್ನು ಮಾಡಿದರು

ತರೀಕೆರೆ( ಫೆ.9) :

ಕರ್ನಾಟಕದ ಮಲೆನಾಡಿನ ಹೆಬ್ಬಾಗಿಲು ಹಾಗೂ ಬಯಲು ಸೀಮೆ ಮತ್ತು ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಆಗಿರುವ ತರೀಕೆರೆಯನ್ನು ಅಧಿಕಾರದಲ್ಲಿದ್ದ ಎಲ್ಲಾ ಶಾಸಕರು ತರಿಕೆರೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಸರಿಸುಮಾರು 40,000 ಮತದಾರನ್ನು ಹೊಂದಿರುವ ಈ ಪಟ್ಟಣ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸಹ ಪಡೆಯಲಾಗಿಲ್ಲ.ಬಿ ಹೆಚ್ ರಸ್ತೆಯಲ್ಲಿ ಹೋಗುವ ಪ್ರತಿ ಪ್ರಯಾಣಿಕನು ಇಡೀ ಶಾಪ ಹಾಕುವಂತೆ ಈ ರಸ್ತೆ ಇದೆ.

ಬಿ ಹೆಚ್ ರಸ್ತೆ ಅಗಲೀಕರಣ ಇರಲಿ ಡಾಂಬರ್ ಕಾಣದೆ ಎಷ್ಟೋ ವರ್ಷವಾಯಿತು.

 ಕೇವಲ ನಾಲ್ಕು ಕಿಲೋಮೀಟರ್ ಇರುವ ನಗರ ವ್ಯಾಪ್ತಿಯ ಈ ರಸ್ತೆಯನ್ನು ದ್ವಿಮುಖ ರಸ್ತೆ ಮಾಡದೆ ಶಾಸಕರು ತನ್ನ ಸ್ವಂತ ಊರಿನ ರಸ್ತೆಯನ್ನು ಮಾತ್ರ ದ್ವಿಮುಖ ರಸ್ತೆ ಮಾಡಿದ್ದಾರೆ.

ಬಿ ಎಚ್ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಭಾರಿ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ.

 

ಸಾಕಷ್ಟು ಬಾರಿ ಅಪಘಾತಗಳಾಗಿ ಕೆಲ ಅಮಾಯಕರ ಜೀವ ಹಾನಿಯಾಗಿದೆ. ಆದರೂ ಇರುವಂತಹ ಶಾಸಕರಿಗೆ ಇದರ ಅರಿವೇ ಇಲ್ಲದಂತೆ ಅಭಿವೃದ್ಧಿಯ ಹರಿಕಾರ ಎಂಬ ಅಮಲಿನಲ್ಲಿ ತೇಲುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಎಂ ಜಿ ರಸ್ತೆಯು ಸಹ ಯಾವುದೇ ಅಭಿವೃದ್ಧಿ ಕಾಣದೆ ಸಂಚಾರ ದಟ್ಟಣೆ ಯಿಂದ ಸಮಸ್ಯೆಗಳ ಕೂಪವಾಗಿದೆ. ಇನ್ನೂ ತರೀಕೆರೆ ನಗರಕ್ಕೆ ಆಟದ ಮೈದಾನ, ಒಳಚರಂಡಿ ವ್ಯವಸ್ಥೆ,ಇತ್ಯಾದಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಆದ್ದರಿಂದ ಸ್ಥಳೀಯ ಜನರು ಹೀಗಿರುವ ಶಾಸಕರಾಗಲಿ ಅಥವಾ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಲು ಸಾರಸಗಟ್ಟಾಗಿ ನಿರ್ಧರಿಸಿದ್ದಾರೆ. ಇಂತಹ ಶಾಸಕರನ್ನು ತಿರಸ್ಕರಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ತರಿಕೆರೆ ಅಭಿವೃದ್ಧಿ ಪಡಿಸುವ ಸಂದೇಶವನ್ನು ನೀಡಲು ಈ ಮೂಲಕ ಕೋರಲಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button