ಮೊಳಕಾಲ್ಮುರು ಪಟ್ಟಣದ ಬೀದಿ ಬದಿ ವ್ಯಾಪಾರಿಗಳಿಗೆ ಜಾಗ ಕಲ್ಪಿಸಿ ಕೊಟ್ಟ ಶಾಸಕರು.
ಮೊಳಕಾಲ್ಮುರು ಡಿಸೆಂಬರ್.29

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ಸ್ಥಳೀಯ ರಾಂಪುರ ಗ್ರಾಮದ ಮನೆಯ ಹತ್ತಿರ ಹೋಗಿ ಮೊಳಕಾಲ್ಮುರು ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಸರ್ ನಮಗೆ ವ್ಯವಹಾರಗಳು ಚೆನ್ನಾಗಿ ನಡೆಯುತ್ತಿದ್ದವು ಈಗ ನಮಗೆ ಜಾಗದ ವ್ಯವಸ್ಥೆ ಇಲ್ಲದಿರುವುದರಿಂದ ನಮಗೆ ಜೀವನ ವ್ಯವಹಾರ ಮಾಡಲು ಸರಿಯಾದ ಜಾಗದ ವ್ಯವಸ್ಥೆ ಮಾಡಿ ಕೊಡಿ ಎಂದು ಶಾಸಕರ ಹತ್ತಿರ ಕೇಳಿದಾಗ ಆಯ್ತು ನಿಮಗೆ ಯೋಗ್ಯವಾದ ಸ್ಥಳವನ್ನು ನಾನು ರೂಪಿಸಿದ್ದೇನೆ ಹಳೆಯ ಸಂತೆ ಮೈದಾನ ಬಜಾರವನ್ನು ನಿಮ್ಮ ಬೀದಿ ಬದಿ ವ್ಯಾಪಾರಿಗಳಿಗೂ ಹೂವಿನ ವ್ಯಾಪಾರಿಗಳಿಗೂ ಹಣ್ಣಿನ ವ್ಯಾಪಾರಿಗಳಿಗೂ ಸೂಕ್ತವಾದ ಜಾಗವನ್ನು ನಿರೂಪಿಸಿದ್ದೇನೆ.

ಆ ಜಾಗದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ನಿಮ್ಮ ವ್ಯವಹಾರಗಳು ಮಾಡಿ ಕೊಂಡು ಹೋಗಿ ಎಲ್ಲ ಸರಿ ಹೋಗುತ್ತೆ ಆದರೆ ಏಕದಮ್ಮ ವ್ಯವಹಾರಗಳು ಆಗದು ಸುಲಭ ಸ್ವಲ್ಪ ದಿನ ಟೈಮ್ ತಗೊಳ್ಳುತ್ತೆ ಆವಾಗ ತನ್ನಷ್ಟಕ್ಕೆ ತಾನೇ ವ್ಯಾಪಾರ ಹೆಚ್ಚಿನ ಮಟ್ಟದಲ್ಲಿ ಆಗುತ್ತವೆ ಎಲ್ಲ ಸುದರ್ಸ್ಕೊಂಡು ಹೋಗಿ ನೀವು ಆ ಜಾಗ ಸಹ ಎಚ್ಆರ್ ರಸ್ತೆ ಪಕ್ಕಕ್ಕೆ ಇರುವುದರಿಂದ ಸೂಕ್ತವಾದ ಜಾಗ ಎಂದು ನಿರ್ಮಿಸಿದ್ದೇನೆ ಎಂದು ಶಾಸಕರು ತಿಳುವಳಿಕೆ ಮೊಳಕಾಲ್ಮೂರು ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಹೇಳಿದರು ಮತ್ತು ಮೊಳಕಾಲ್ಮೂರು ಕ್ಷೇತ್ರಕ್ಕೆ ಹಂತ ಹಂತವಾಗಿ ಯೋಜನೆಗಳನ್ನು ರೂಪಿಸುತ್ತೇನೆ ರಸ್ತೆಗಳಾಗಲಿ ಕುಡಿಯುವ ನೀರಿನ ವ್ಯವಸ್ಥೆ ಆಗಲಿ ಚರಂಡಿ ವ್ಯವಸ್ಥೆಯಾಗಲಿ ಆರೋಗ್ಯದ ವ್ಯವಸ್ಥೆಯಾಗಲಿ ನಮ್ಮ ಸ್ಥಳೀಯ ಕ್ಷೇತ್ರ ವಾಗಿರುವುದರಿಂದ ಜನ ಸಾಮಾನ್ಯರಿಗೆಲ್ಲ ಒಳ್ಳೆಯದನ್ನೇ ಮಾಡುತ್ತೇನೆಂದು ಶಾಸಕರು ಹೇಳುವಂತ ಮಾತುಗಳು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು