ಸೀತಾರಾಮ ಯೆಚೂರಿ ಅವರಿಗೆ – ಶ್ರದ್ಧಾಂಜಲಿ ಸಭೆ ಮತ್ತು ಶೋಕಾಚರಣೆ.
ಹೊಸಪೇಟೆ ಸ.13
ಹೊಸಪೇಟೆ ಶ್ರಮಿಕ ಭವನದಲ್ಲಿ SFI ತಾಲೂಕ ಸಮಿತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.SFI ಅಖಿಲ ಭಾರತ ಮಾಜಿ ಅಧ್ಯಕ್ಷರಾಗಿದ್ದ ಕಾಂ ಸೀತಾರಾಮ್ ಯೊಚೂರಿ ಅವರು ಇಂದು ನಮನ್ನ ಅಗಲಿದರು ಅವರು 1975 ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿ.ವಿ ಯಲ್ಲಿ ಅಧ್ಯಯನ ಮಾಡುವ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಅವರು ಜಾರಿಗೆ ತಂದಿದ್ದ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿ ಜೈಲು ಸೇರಿದ್ದರು, ಅವರು 1975 ರಿಂದ 1977, 78, 79 ರ ಸಮಯದಲ್ಲಿ JNU ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಹಾಗೂ SFI ನ ಅಖಿಲ ಭಾರತ ಅಧ್ಯಕ್ಷರಾಗಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಶ್ರಮಿಸಿದರು.ಅವರು 1952 ಅಗಷ್ಟ 12 ರಂದು ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಜನಿಸಿದರು ಅವರು ಎರಡು ವಿದ್ಯಾರ್ಥಿ ಯುವ ಜನರು ರೈತರು ಕಾರ್ಮಿಕರ ಪರ ಯಶಸ್ವಿ ಹೋರಾಟಗಳನ್ನು ಕಟ್ಟಿ ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮತ್ತು ಅವರಿಗೆ ಸಂಸತ್ತಿನಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಮ್ಮ ಜೀವನದ ಕೊನೆಯವರೆಗೂ ದುಡಿಯುವ ಜನರ ಪರವಾಗಿ, ಕೋಮುವಾದಿ, ಫ್ಯಾಸಿಸ್ಟ್‌ನ ಹಿಮ್ಮೆಟ್ಟಿಸಲು ಶ್ರಮಿಸಿದ ಕಾಂ. ಸೀತಾರಾಮ್ ಯೆಚೂರಿ ಅವರ ಅಗಲಿಕೆ ನಮ್ಮ ಚಳುವಳಿಗೆ ತುಂಬಾಲಾಗದಷ್ಟು ನಷ್ಟವಾಗಿದೆ ಎಂದು SFI ರಾಜ್ಯ ಅಧ್ಯಕ್ಷರಾದ ಅಮರೇಶ್ ಕಡಗದ ಹೇಳಿದರು.ಭಾಸ್ಕರ್ ರೆಡ್ಡಿ ಅವರು ಮತ್ತು ಮಂಜುನಾಥ ಸಿ.ಐ.ಟಿ.ಯು ಅವರು ಮಾತನಾಡಿ ದೇಶದ ಎಲ್ಲಾ ವರ್ಗಗಳನ್ನು ಸ್ಪರ್ಶಿಸಿ ಹೋರಾಟಗಳನ್ನು ರೂಪಿಸಿದರು. ಅಂತರವನ್ನು ನಾವು ಕಳೆದು ಕೊಂದಿದ್ದೇವೆ. ಇದು ನಮಗೆ ಬಾರಿ ನಷ್ಟ ತಂದಿದೆ ಎಂದರು. ಈ ಸಂದರ್ಭದಲ್ಲಿ ವಿ.ಸ್ವಾಮಿ, ಈಡಿಗರ ಮಂಜುನಾಥ, ಜಂಬಯ್ಯನಾಯಕ, ರೈತ ಸಂಘದ ಕೊಟಗಿ ಮಲ್ಲಿಕಾರ್ಜುನ, ತಿರುಕಪ್ಪ, ತಾಯಪ್ಪ ನಾಯಕ, ಬಸವರಾಜ, ಶಿವುರಡ್ಡಿ, ಅನಿಲ್ ಎಚ್, ಲಕ್ಷ್ಮಿ, ಶಾರದ, ರುದ್ರಮ್ಮ, ಗಿರಿಜ, ಸುಧಾಕರ, ಸುದೀಪ್, ಲೋಕೇಶ್, ಪವನ ಇತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ