“ಸಾಹಿತಿ ಕೊರ್ಲ ಕುಂಟೆ ತಿಪ್ಪೇಸ್ವಾಮಿ ರವರ” ಬರಹದ ಒಳನೋಟ” – ಕವನ ಸಂಕಲನ ಲೋಕಾರ್ಪಣೆ.

ಚಳ್ಳಕೆರೆ ಸ.13

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿಗಳಾದ ಕೊರ್ಲ ಕುಂಟೆ ತಿಪ್ಪೇಸ್ವಾಮಿ ರವರ ವಿರಚಿತ ” ಬರಹದ ಒಳನೋಟ ” ಎಂಬ ಪುಸ್ತಕ ಬಿಡುಗಡೆ ಸಮಾರಂಭ ಇಂದು ಹಮ್ಮಿಕೊಳ್ಳಲಾಗಿತ್ತು.ಪ್ರಾಸ್ತಾವಿಕ ನುಡಿಯಲ್ಲಿ ಪತ್ರಕರ್ತರಾದ ಜಡೇಕುಂಟೆ ಮಂಜುನಾಥ್ ಅವರು ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ನಡೆದ ಬಂದ ಹಾದಿ ನಿಜಕ್ಕೂ ಸ್ಪೂರ್ತಿದಾಯಕವಾದದ್ದು.ತಳಸಮುದಾಯದಲ್ಲಿ ಹುಟ್ಟಿ ನೋವುಂಡು ನಲಿವನ್ನ ಹಂಚಿದ ಒಬ್ಬ ಅತ್ಯದ್ಭುತ ಸಂಘಟಕ ಮತ್ತು ಬರಹಗಾರರಾಗಿ ಇಂದು ನಮ್ಮೆದರು ನಿಂತಿದ್ದಾರೆ,ಅಂತಹ ಒಬ್ಬ ಸಹೃದಯರನ್ನ ಕ.ಸಾ.ಪ ಜಿಲ್ಲಾಧ್ಯಕ್ಷ ಸ್ಪರ್ಧೆಯಲ್ಲಿ ಸೋಲಿಸಿದ್ದು ತುಂಬಾ ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ” ಬರಹದ ಒಳನೋಟ” ಎಂಬ ಕವನ ಸಂಕಲನವನ್ನು ಲೋಕಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದ ಚಳ್ಳಕೆರೆ ತಾಲ್ಲೂಕಿನ ಜನ ಮೆಚ್ಚಿದ ಸನ್ಮಾನ್ಯ ಶಾಸಕರು ಆದ ಶ್ರೀಯುತ ಟಿ.ರಘುಮೂರ್ತಿ ರವರು ಮಾತನಾಡಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಒಬ್ಬ ಸಹೃದಯ ಬರಹಗಾರರು, ಪ್ರಾಮಾಣಿಕ ಪತ್ರಕರ್ತರು. ಅವರು ಸಿಟ್ಟಾಗಿದ್ದನ್ನ ನಾನು ಇದುವರೆಗೂ ನೋಡಿಯೇ ಇಲ್ಲ. ಕಡು ಬಡತನದಲ್ಲಿ ಹುಟ್ಟಿದರೂ ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿಗೆ ತನ್ನದೇ ಆದ ಈ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ,

ನಿತ್ಯ ಜೀವನದ ಜೊತೆ ಜೊತೆಗೆ ಸಾಹಿತ್ಯ ಲೋಕದಲ್ಲಿ ಹಾಗೂ ಪತ್ರಿಕಾ ರಂಗದಲ್ಲಿ ಸಾರ್ಥಕ ಬದುಕನ್ನ ಕಟ್ಟಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಪುಸ್ತಕದ ಒಳನೋಟವನ್ನ ಸಾಹಿತಿಗಳಾದ ಡಾ.ಸಿ. ಶಿವಲಿಂಗಪ್ಪ ಸರ್ ರವರು ಪುಸ್ತಕದ ಸಾರಾಂಶವನ್ನು ಎಲ್ಲ ಕವಿ ಮನಸ್ಸುಗಳಿಗೆ ನಾಟುವಂತೆ ತಿಳಿಸಿಕೊಟ್ಟರು. ತಿಪ್ಪೇಸ್ವಾಮಿ ಅವರ ಬರಹ ಅದು ಕಾಲ್ಪನಿಕವಲ್ಲ; ನಿಜ ಬದುಕಿನ ಅನಾವರಣವಾಗಿದೆ. ಅವರ ಬರಹ ಓದಿದವರಿಗೆ ಆ ಅನುಭವವಾಗುತ್ತದೆ. ತಾನುಂಡ ನೋವನ್ನ,ಅನುಭವಿಸಿದ ಅಸ್ಪೃಶ್ಯತೆಯನ್ನ ಆಕ್ರೋಶ ದನಿಗಿಂತ ಮೆಲುದನಿಯಲ್ಲಿಯೇ ಹೇಳಿದ್ದಾರೆ. ಕನ್ನಡ ತಾಯಿಯ ಸೇವೆಯನ್ನು ನಿಷ್ಠೆಯಿಂದ ಮಾಡಿದವರಿಗೆ ಇಂದಲ್ಲ ನಾಳೆ ಒಳ್ಳೆಯ ಫಲ ಸಿಕ್ಕೆ ಸಿಗುತ್ತದೆ ಎಂದು ಹೇಳಿ ಅವರ ಪುಸ್ತಕದ ಅವಲೋಕನ ಮಾಡಿಕೊಟ್ಟರು.ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಆದ ಶ್ರೀಯುತ ಚೌಳೂರು ಪ್ರಕಾಶ್ ರವರು ನೀಡಿದ ” ಸಂವಿಧಾನದ ಪೀಠಿಕೆ ” ಯ ನೆನೆಪಿನ ಸ್ಮರಣಿಕೆಗಳು ಅತ್ಯಂತ ಅರ್ಥ ಪೂರ್ಣವಾಗಿದ್ದವು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಆದ ಶ್ರೀಯುತ ತಿಪ್ಪಣ್ಣ ಮರಿ ಕುಂಟೆ ರವರು ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಎಸ್. ಲಕ್ಷ್ಮಣ್, ಟಿ. ವಿಜಯ್ ಕುಮಾರ್, ಆರ್ ಪ್ರಸನ್ನ ಕುಮಾರ್, ಟಿ. ಜೆ ವೆಂಕಟೇಶ್,ಡಾ.ಏಚ್.ಎಸ್ ಶಫಿ ಉಲ್ಲಾ, ಸೋಮ ಗುದ್ದು ರಂಗಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ಕೆ. ಪಿ ಭೂತಯ್ಯ, ದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗದ ಜಿಲ್ಲಾಧ್ಯಕ್ಷರು ಆದ ಶ್ರೀ ಶಿವಮೂರ್ತಿ. ಟಿ ಕೋಡಿಹಳ್ಳಿ, ಕೆ.ಚಿಕ್ಕಣ್ಣ, ರಾಜು ಕವಿ.ಎಸ್ ಸೋಲೇನ ಹಳ್ಳಿ , ಶ್ರೀನಿವಾಸಾಚಾರಿ, ಟಿ.ರಂಗನಾಥ್, ಭೀಮನ ಕೆರೆ ಶಿವಮೂರ್ತಿ, ನೇತಾಜಿ ಪ್ರಸನ್ನ ಹಾಗೂ ಎಲ್. ಐ ಸಿ ರಂಗಸ್ವಾಮಿ ಗೆಳೆಯರ ಬಳಗ, ಆನಂದ್ ಕುಮಾರ್, ಕನಕ ಪ್ರೀತೇಶ್, ಮೋದೂರು ತೇಜ, ಇನ್ನು ಮುಂತಾದವರು ಭಾಗವಹಿಸಿದ್ದರು.ಪಗಡಲ ಬಂಡೆ ನಾಗೇಂದ್ರಪ್ಪ ಪ್ರಾರ್ಥಿಸಿದರು, ಎಸ್.ಬಿ ತಿಪ್ಪೇಸ್ವಾಮಿ ಸ್ವಾಗತಿಸಿದರು, ಶಿಕ್ಷಕಿ ಹಾಗೂ ಕವಯಿತ್ರಿ ಆದ ಶ್ರೀಮತಿ ಡಿ. ಶಬ್ರೀನಾ ಮಹಮದ್ ಅಲಿ ನಿರೂಪಿಸಿದರು, ಕೆ.ಜಗನ್ನಾಥ ಯಾದಲಗಟ್ಟೆ ವಂದಿಸಿದರು. ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button