ಶಾಲಾ ಪ್ರಾರಂಭೋತ್ಸವ ಹಾಗೂ ಸಮವಸ್ತ್ರ, ಪುಸ್ತಕ – ವಿತರಣಾ ಕಾರ್ಯಕ್ರಮ.
ಪಟ್ರೆಹಳ್ಳಿ ಮೇ.31

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2024-25 ನೇ ಸಾಲಿನ ಶಾಲೆಯ ಪ್ರಾರಂಭೋತ್ಸವದಲ್ಲಿ ಪೋಷಕರೊಂದಿಗೆ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. ಹಾಗೆ ಉಚಿತ ಸಮವಸ್ತ್ರ, ಪುಸ್ತಕ ವಿತರಣೆ ಮಾಡಲಾಯಿತು. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಪೋಷಕರಿಗೆ ತಿಳಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಗಮನಿಸಿದರೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ದಾಖಲೆ ಸೃಷ್ಟಿಸಿದ ಅಂಕಿತಾ ಎಂಬ ವಿದ್ಯಾರ್ಥಿನಿ ಓದಿ ಸಾಧನೆ ಮಾಡಿದ್ದು ಸರ್ಕಾರಿ ಶಾಲೆ ಎಂಬುದನ್ನು ನಾವು ಯಾರು ಕೂಡ ಮರೆಯಬಾರದು, ಇಂತಹ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಸಾಕ್ಷಿ ಬೇಕಾ ಎಂದು ತಿಳಿಸಿದರು.

ಹಾಗಾಗಿ ಎಲ್ಲ ಪೋಷಕರು ನಿಮ್ಮ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕರು ಆದ ಶ್ರೀಮತಿ ಸುಜಾತ ರವರು ಪೋಷಕರಿಗೆ ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಮಹೇಶ್.ವೈ. ಸದಸ್ಯರಾದ ಕೃಷ್ಣನಾಯ್ಕ , ಭಾಗ್ಯಮ್ಮ , ಶಕುಂತಲಾ , ರಹಮತ್ ಉನ್ನಿಸಾ , ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸುಜಾತ, ಸಹ ಶಿಕ್ಷಕರಾದ ಗೀತಾ , ರೇಣುಕಮ್ಮ , ಉಷಾರಾಣಿ , ಹೇಮಲತಾ , ರಾಧ , ಹಾಗೂ ಪೋಷಕರು ಭಾಗವಹಿಸಿದ್ದರು.
ವರದಿ:ಕೋಡಿಹಳ್ಳಿ.ಶಿವಮೂರ್ತಿ.ಟಿ.ಚಿತ್ರದುರ್ಗ.