ಆಯುರ್ವೇದವು ತನ್ನದೆ ಆದ – ಮಹತ್ವ ಹೊಂದಿದೆ.
ರೋಣ ಜೂ.10

ಆಯುರ್ವೇದವಾಗಲಿ, ಅಲೋಪತಿ ಚಿಕಿತ್ಸೆಯಾಗಲಿ ತಜ್ಞ ವೈದ್ಯರ ಕೊರತೆ ತೀವ್ರವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರದ ನಿರ್ದೇಶಕ ಡಾ, ರಾಮಚಂದ್ರ.ಶೆಟ್ಟಿ ಹೇಳಿದರು.ಪಟ್ಟಣದ ರಾಜೀವ್ ಗಾಂಧಿ ಆಯುರ್ವೇದಿಕ್ ಕಾಲೇಜಿನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಪಂಚದ ಜನ ಸಂಖ್ಯೆಯಲ್ಲಿ ಎಂದರು. ಭೂಭಾಗ ಹೊಂದಿರುವ ಭಾರತ ಹತ್ತಿನ ಶೇ. 17 ಹೊಂದಿರುವ, ವಿಶ್ವದ ಶೇ. 2 ರಲ್ಲಿರುವ ಶೇ. 21 ರೋಗ ತನ್ನೊಡಲಲ್ಲಿ ಇರಿಸಿ ಕೊಂಡಿರುವುದು ಆತಂಕಕಾರಿ ಸಂಗತಿ. ವೈದ್ಯರು ಆಯುರ್ವೇದದ ಪ್ರಾಮುಖ್ಯತೆ ಸಮಾಜಕ್ಕೆ ತಿಳಿಸಬೇಕು ಎಂದು ಮಾತನಾಡಿದರು.ಇದೇ ಸಮಯದಲ್ಲಿ ಡಾಕ್ಟರ್, ಶ್ರೀನಿವಾಸ.ಬನ್ನಿಗೊಳ ಚಿಕಿತ್ಸಾ ಪದ್ದತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನವಿದೆ. ಆಧುನಿಕ ವೈದ್ಯಕೀಯ ಶಾಸ್ತ್ರದ ಜೊತೆಗೆ ಆಯುರ್ವೇದ ತನ್ನದೆ ಆದ ಮಹತ್ವ ಉಳಿಸಿ ಕೊಂಡಿದ್ದು ಸಾಕಷ್ಟು ಜನ ಇಂದಿಗೂ ಇದೇ ಚಿಕಿತ್ಸಾ ವಿಧಾನದ ಮೊರೆ ಹೋಗುತ್ತಿದ್ದಾರೆ ಎಂದರು. ಶಾಸಕ ಜಿ.ಎಸ್ ಪಾಟೀಲ, ಡಾ, ಕೆ.ಬಿ. ದನ್ನೂರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಐ.ಎಸ್ ಪಾಟೀಲ, ಪ್ರಾಚಾರ್ಯ ಡಾ, ಐ.ಬಿ ಕೊಟ್ಟೂರ ಶೆಟ್ಟರ, ನಿರ್ದೇಶಕ ಅಕ್ಷಯ ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ. ರೋಣ.ಗದಗ

