ವಿಜಯನಗರ ಜಿಲ್ಲಾ ವ್ಯಾಪ್ತಿಯ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮ ಜರುಗಿತು.
ಹೊಸಪೇಟೆ ಸ.16
38 ಕಿಲೋ ಮೀಟರ್- ಶಾಲಾ ವಿದ್ಯಾರ್ಥಿಗಳು ಸೇರಿದಂತೆ 40 ಸಾವಿರ ಜನರು ಭಾಗಿ ದಿನಾಂಕ:- 15-09-2024 ರಂದು ಬೆಳಿಗ್ಗೆ ಮಾರ್ಗ: ಟಿ.ಬಿ. ಡ್ಯಾಮ್ ಮೊದಲನೇ ಸೇತುವೆಯಿಂದ-ಗಣೇಶ ದೇವಸ್ಥಾನ (ಕಾಲುವೆ ಪಕ್ಕ) -ಸಾಯಿಬಾಬಾ ಸರ್ಕಲ್-ಬಸವೇಶ್ವರ ಸರ್ಕಲ್-ಡಾ, ಬಿ.ಆರ್.ಅಂಬೇಡ್ಕರ್ ವೃತ್ತ-ಅಪ್ಪು ಸರ್ಕಲ್-ಬಳ್ಳಾರಿ ರೋಡ್ ಸರ್ಕಲ್-ಕಾರಿಗನೂರು-ವಡ್ಡರಹಳ್ಳಿ-ಪಿ.ಕೆ. ಹಳ್ಳಿ-ಬಯಲು ವದ್ದಿಗೇರಿ- ಧರ್ಮಸಾಗರ- ಗಾದಿಗನೂರು- ಭುವನಳ್ಳಿ ಗ್ರಾಮ ದವರೆಗೆ ಮಾನವ ಸರಪಳಿಯಲ್ಲಿ. “ಕರ್ನಾಟಕ ಸರ್ಕಾರ ಮತ್ತು ವಿಜಯನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿಯನ್ನು ನಿರ್ಮಿಸುವ ಅತ್ಯುನ್ನತ ಕಾರ್ಯಕ್ರಮವು, ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆ ನಗರದಲ್ಲಿ ಜರಗಿತು.
ಈ ಕಾರ್ಯಕ್ರಮವನ್ನು ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್ಚ್.ಆರ್. ಗವಿಯಪ್ಪರವರು ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಯವರಿಂದ ಉದ್ಘಾಟನೆ ಸಮಾರಂಭ ನಡೆಯಿತು. ನಂತರ ಜಿಲ್ಲಾಧಿಕಾರಿಗಳು ಸಂವಿಧಾನ ಪೀಠಕ್ಕೆಯನ್ನು ಈ ಕಾರ್ಯಕ್ರಮದಲ್ಲಿ ಸೇರಿದ ಜಿಲ್ಲೆಯ ನಾಗರಿಕ ರೇಲ್ಲಾರಿಗೂ ಓದಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಸರ್, ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಪದ್ಮಶ್ರೀ ಮಾತ ಮಂಜಮ್ಮ ಜೋಗತಿವರು, ಅಲೆಮಾರಿ ಸಮುದಾಯಗಳ ಕಲಾವಿದರು, ಕರ್ನಾಟಕ ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಣ್ಣಮಾರೆಪ್ಪ, ಅಲೆಮಾರಿ ಮುಖಂಡರುಗಳಾದ ವಿರುಪಾಕ್ಷಪ್ಪ, H.B ಹಳ್ಳಿಯ ಮಲ್ಲೇಶಪ್ಪ, ಪಕ್ಕೀರಪ್ಪ ಬಾದಿಗಿ, ಕಿನ್ನೂರಿ ಶೇಖಪ್ಪ, ಡಿ.ಜಬಣ್ಣ, ಅನೇಕಲ್ಲು ಮಂಜಪ್ಪ, ಡಿ.ಶೇಖರ್, ಅಂಜಲಿ ಬೆಳಗಲ್, ಲಕ್ಷ್ಮೀಪತಿ, ಚೌಡಪ್ಪ, ಯಲ್ಲಪ್ಪ, ಶಾಲಾ ಮಕ್ಕಳು, ಸಾರ್ವಜನಿಕರು, ಭಾಗವಹಿಸಿ, ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ