ಸಂತೆ ಮಾರ್ಕೆಟ್ ಗೋಸ್ಕರ್ ಸ್ಥಳ ಪರಿಶೀಲನೆ ಮಾಡಿದ ಶಾಸಕರು.
ಮೊಳಕಾಲ್ಮೂರು ಜೂನ್.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮೂರು ಪಟ್ಟಣದಲ್ಲಿ ಸಂತೆ ಮಾರ್ಕೆಟ್ ಹೊಸದಾಗಿ ಊರು ಬಾಗಿಲ ಪಕ್ಕದಲ್ಲಿ ಕೊಳಚೆ ನೀರು ಹೋಗುವ ಒಂದು ಹೊಂಡ ಇದ್ದು ಆ ಕೊಳಚೆ ನೀರೆಲ್ಲಾ ಗಬ್ಬು. ದುರ್ವಾಸನೆ ಎದ್ದು ಕಂಡು ಬರುತ್ತದೆ ಅಲ್ಲಿನ ಜನಗಳಿಗೆ ಮತ್ತು ಶಾಲೆಯ ಮಕ್ಕಳಿಗೆ ಅಲ್ಲಿಯ ಪರಿಸರದ ಸುತ್ತಮುತ್ತಲೂ ಸಾರ್ವಜನಿಕರಿಗೆ ಅಲ್ಲಿಯ ಪರಿಸ್ಥಿತಿ ನೋಡಿದರೆ ಇಲ್ಲಿ ಜನಗಳು ಹ್ಯಾಂಗ್ ವಾಸ ಮಾಡುತ್ತಾರಪ್ಪೋ ದಿನಾಲು ಈ ಜನಗಳ ಪರಿಸ್ಥಿತಿಯನ್ನು ನೋಡಿ ನೊಡದಾಗೆ ಇವತ್ತಿನವರೆಗೂ ಯಾವ ಪಟ್ಟಣ ಪಂಚಾಯಿತಿ ಅಧಿಕಾರಿ ಗಮನ ಹರಿಸಿಲ್ಲ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿ ಸಹ ಮತ್ತು ತಾಲೂಕು ದಂಡಾಧಿಕಾರಿಯದ ರೂಪ ಮೇಡಂ ಸಹ ಈ ಜಾಗದ ಬಗ್ಗೆ ಗಮನ ಹರಿಸಿಲ್ಲ ಎಂದು ಕಾಣುತ್ತದೆ ಆದರೆ ಈಗ ಜನಪರ ಯೋಜನೆ ಮಾಡಿಸುವ ಒಬ್ಬ ನಿಜವಾದಂತಹ ನ್ಯಾಯ. ನೀತಿ. ಧರ್ಮದ ಪರ ಆಡಳಿತ ನಡೆಸುವಂತ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಈ ಸ್ಥಳಕ್ಕೆ ಭೇಟಿ ಕೊಟ್ಟು ಇಲ್ಲಿನ ಜನಗಳ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಇದರ ಯೋಜನಾ ವೆಚ್ಚದ ಬಗ್ಗೆ ಅಧಿಕಾರಿಗಳ ಕುರಿತು ಗಮನ ಹರಿಸಿದರು. ಇಲ್ಲಿ ಹೊಸ ಸಂತೆ ಮಾರ್ಕೆಟ್ ಮಾಡಿದರೆ ಸಾರ್ವಜನಿಕರಿಗೆ ಅನುಕೂಲತೆ ಜೊತೆಗೆ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರ ಕಾಪಾಡಿದಂತಾಗುತ್ತದೆ.

ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಪಟ್ಟಣದ ಪ್ರಮುಖರಿಗೆ ತಿಳಿಸಿದರು ಹಿಂದೆ ನಾನು ಶಾಸಕನಾಗಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ಸ ಡಿಪೋವನ್ನು ಮಾಡಿಸಬೇಕೆಂದು ಅಂದುಕೊಂಡಿದ್ದರು ಆದರೆ ಇಲ್ಲಿಯ ಅಜ್ಞಾನಿಗಳು ವಿರೋಧ ವ್ಯಕ್ತಪಡಿಸಿದರು ಅದಕ್ಕೆ ನೋಡೋಣ ಅಂತ ಹೇಳಿದ್ದೆ. ಆ ಸಮಯದಲ್ಲಿ ಯೋಜನೆ ರೂಪಿಸಲಿಲ್ಲ ಈಗ ಮತ್ತೆ ಅದೇ ಜಾಗ ನನ್ನ ಗಮನಕ್ಕೆ ಬಂದಿರುತ್ತದೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿ ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಖಾದರ್ ಪಂಚಾಯತಿ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಧ್ಯಮದವರು ಪತ್ರಕರ್ತರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು