ಗ್ಯಾರೆಂಟಿ ಯೋಜನೆ ಜನರಿಗೆ – ಸಹಕಾರವಾಗಿದೆ.
ತರೀಕೆರೆ ಜ. 15

ಸರ್ವ ಜನರಿಗೂ ಪಂಚ ಯೋಜನೆಗಳು ಸಹಕಾರವಾಗಿದೆ, ಫಲಾನುಭವಿಗಳಿಗೂ ಯೋಜನೆಯ ಮಹತ್ವ ತಿಳಿಸ ಬೇಕಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಮ್ ಶಿವಾನಂದ ಸ್ವಾಮಿರವರು ಹೇಳಿದರು. ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಪಂಚ ಯೋಜನೆಗಳಿಗೆ 1200 ಕೋಟಿ ಹಣ ನೀಡಲಾಗಿದೆ ಎಂದು ತಿಳಿಸಿದರು. ತಾಲೂಕು ಸಮಿತಿ ಅಧ್ಯಕ್ಷರಾದ ರಮೇಶ್ ಗೋವಿಂದೇಗೌಡ ಮಾತನಾಡಿ ಗ್ರಹ ಜ್ಯೋತಿ ಯೋಜನೆಯಡಿ 21.9 ಕೋಟಿ ಹಣ ನೀಡಲಾಗಿದೆ ತರೀಕೆರೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿ ಕೊಂಡಿರುವ 34,995 ಜನರಿಗೆ ಶೇಕಡ 92.8 ರಷ್ಟು ಗುರಿ ಸಾಧಿಸಲಾಗಿದೆ. ಇವ ನಿಧಿಯಿಂದ ವಿದ್ಯಾವಂತ ಯುವಕರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗಿದೆ ಅನ್ನಭಾಗ್ಯ ಯೋಜನೆಯಿಂದ ಹಸಿವು ಮುಕ್ತ ಮಾಡಲಾಗಿದೆ,ಶಕ್ತಿ ಯೋಜನೆಯಡಿ ಎಲ್ಲರೂ ಸಹ ಉಚಿತ ಬಸ್ ಪ್ರಯಾಣದ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಸಮಿತಿ ಸದಸ್ಯರು ಸರ್ಕಾರ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸೋಣ ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯಾ ನಿರ್ವಹಣಾಧಿಕಾರಿ ಡಾ. ಆರ್ ದೇವೇಂದ್ರಪ್ಪ, ಶಮಿವುಲ್ಲಾ ಶರೀಫ್, ಸಿ ಡಿ ಪಿ ಓ ಚರಣ್ ರಾಜ್, ಸಮಿತಿ ಸದಸ್ಯರಾದ ದೇವರಾಜ್, ಭಾಗ್ಯಲಕ್ಷ್ಮಿ, ಲಕ್ಷ್ಮೀಬಾಯಿ, ಮೆಹಬೂಬ್ ಖಾನ್, ಶಂಕರ್, ಸಂತೋಷ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು