“ಆರೋಗ್ಯದ ಸಿರಿ ಕೊಳ್ಳೆ ಹೊಡೆವ ಸೊಳ್ಳೆ ಉತ್ಪತ್ತಿ ತಡೆಯಿರಿ” – ಎಸ್.ಎಸ್.ಅಂಗಡಿ.
ಗುಂಡನಪಲ್ಲೆ ಆ.20

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಗುಂಡನಪಲ್ಲೆ ಗ್ರಾಮದಲ್ಲಿ ಸೊಳ್ಳೆ ದಿನ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು “ಸೊಳ್ಳೆಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಸೊಳ್ಳೆ ಕಡಿತ ಸಣ್ಣದು ಆದರೆ ಅಪಾಯ ಹೆಚ್ಚು ಆರೋಗ್ಯದ ಸಿರಿ ಕೊಳ್ಳೆ ಹೊಡೆವ ಸೊಳ್ಳೆಗಳ ಉತ್ಪತ್ತಿ ತಾಣಗಳು ನಿರ್ಮೂಲನೆ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ಮಳೆಗಾಲ ಪ್ರಾರಂಭವಾದ್ದರಿಂದ ನಮ್ಮ ನೀರಿನ ಸಂಗ್ರಹಗಳಲ್ಲಿ ಮನೆ ಸುತ್ತ ಮುತ್ತ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗಳ ತಾಣಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ತತ್ತಿ ಇಟ್ಟು ಲಾರ್ವಾ ಉತ್ಪತ್ತಿ ಮಾಡುವವು ವಿವಿಧ ಬಗೆಯ ಸೊಳ್ಳೆಗಳ ಕಡಿತ ದಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳಾದ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ, ಟೆಂಗಿನ ಚಿಪ್ಪು ಒಡೆದ ಬಾಟಲ್ ಟೈರ್ ಟ್ಯೂಬ್ ಹೂವು ಕುಂಡಲಿಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುತ್ತವೆ.

ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ನಮ್ಮೆಲ್ಲರ ಗುರಿಯಾಗ ಬೇಕು ಮುಂಜಾಗ್ರತೆಯಾಗಿ ಕಸ ವಿಲೇವಾರಿ ಮಾಡಬೇಕು ನೀರು ಸಂಗಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ಮೈತುಂಬ ಬಟ್ಟೆ ಧರಿಸಬೇಕು. ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ. ಗ್ರಾಮದಲ್ಲಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಸೊಳ್ಳೆ ದಿನ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.