ಭ್ರೂಣ ಲಿಂಗ ಪತ್ತೆ, ಬಾಲ್ಯವಿವಾಹ ತಡೆ ಗ್ರಾಮ ಪಂಚಾಯಿತಿ ಮಟ್ಟದ ಜಾಗೃತ ತಂಡದವರಿಗೆ – ತರಬೇತಿ ಕಾರ್ಯಾಗಾರ.
ಬೆನಕಟ್ಟಿ ಸ.24
ಗ್ರಾಮ ಪಂಚಾಯತ ಬೆನಕಟ್ಟಿಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜ್ಯೋತಿ ಪಾಟೀಲ ನೇತೃತ್ವದಲ್ಲಿ ಗ್ರಾಮ ಪಂಚಾಯತ ಆರೋಗ್ಯ ಸಿಂಚನಾ ಜಾಗೃತಿ ಕಾರ್ಯಪಡೆ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ಯೋಗದಲ್ಲಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಜಾಗೃತ ತಂಡದವರಿಗೆ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು ಭ್ರೂಣ ಹತ್ಯೆ ತಡೆ, ಬಾಲ್ಯ ವಿವಾಹ ನಿಷೇಧ ಕಾನೂನು, ಅಪೌಷ್ಟಿಕತೆ ನಿವಾರಣೆ, ಸಾಂಕ್ರಾಮಿಕ ರೋಗಗಳ ಸಮಗ್ರ ಮಾಹಿತಿ ಆರೋಗ್ಯ ಶಿಕ್ಷಣ ತರಬೇತಿ ನೀಡಿದರು.
ಪ್ರಾಸ್ತಾವಿಕವಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜ್ಯೋತಿ ಪಾಟೀಲ ಗ್ರಾಮ ಮಟ್ಟದಲ್ಲಿ ಸಮೂದಾಯದಲ್ಲಿ ಆರೋಗ್ಯ ಶಿಕ್ಷಣ ಜಾಗೃತಿ ಭ್ರೂಣ ಲಿಂಗ ಪತ್ತೆ ಅಪರಾಧ ಹಾಗೂ ಬಾಲ್ಯ ವಿವಾಹ ನಿಷೇಧ ಕಾನೂನು, ಆರೋಗ್ಯವಂತ ತಾಯಿ ಆರೋಗ್ಯವಂತ ಮಗು ಪೌಷ್ಟಿಕ ಆಹಾರ ಸೇವನೆ ಮಹತ್ವ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗೃತಿ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಗುರಿ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಪತ್ತಾರ ಪೋಲೀಯೋ ನಾರು ಹುಣ್ಣು, ಕುಟುಂಬ ಕಲ್ಯಾಣ ದಂತ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸಿದ್ದೇವೆ.
ಈಗ ನಾವು ಭ್ರೂಣ ಲಿಂಗ ಪತ್ತೆ ತಡೆಯುವುದು, ಬಾಲ್ಯ ವಿವಾಹ ನಿಷೇಧ ಕಾನೂನು ಯಶಸ್ವಿ ಗೊಳಿಸೋಣ ಎಂದರು. ಗ್ರಾಮ ಪಂಚಾಯತ ಆರೋಗ್ಯ ಸಿಂಚನಾ ಜಾಗೃತಿ ಕಾರ್ಯಪಡೆ ತರಬೇತಿ ಕಾರ್ಯಾಗಾರದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಚಲವಾದಿ, ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಮನ್ನಿಕಟ್ಟಿಯ ಮುಖ್ಯ ಶಿಕ್ಷಕ ಎನ್ ಎಮ್ ಕಮ್ಮಾರ, ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಕಟಗೇರಿ, ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಾ ಹಡಪದ, ಶೀಲಾ ನಾಯಕರ, ಶಕುಂತಲಾ ಬಡಿಗೇರ, ಸಂಗಮ್ಮ ಹೂಗಾರ, ಗಂಗಮ ಹವಾಲ್ದಾರ,ಎಸ್ ಎಸ್ ಮಾವಿನಮರದ, ಸಂಗಮ ಹುಗ್ಗಿ, ಆಶಾ ಕಾರ್ಯ ಕರ್ತೆಯರಾದ ತಾಯವ್ವ ಮಾದರ, ಅವ್ವಕ್ಕ ಗೋರವರ, ಸುನಂದಾ ನಿಂಗಾಪೂರ, ಸುವರ್ಣ ಗೌಡರ,ಗ್ರಾಮ ಪಂಚಾಯತ ಕಾರ್ಯದರ್ಶಿ ಎಸ್ ವಿ ಗಡೇದಗೌಡರ, ಮಹಾಂತೇಶ ರಾಮದುರ್ಗ, ಬಾಲಪ್ಪ ಆಲೂರು, ಹನಮಂತ ಸೂಳಿಕೇರಿ, ಭಾಗವಹಿಸಿದ್ದರು.