ಕಲೆ ಹಾಗೂ ಸಮಾಜ ಕ್ಷೇತ್ರದ ಎರಡು ಧ್ರುವ ನಕ್ಷತ್ರಗಳು ಮರೆಯಾಗಿದ್ದು ದುಃಖಕರ ಸಂಗತಿಯಾಗಿದೆ ಎಂದು ವೀರೇಶ್ ಅಂಗಡಿ ವಿಷಾದಿಸಿದರು.
ಕೂಡ್ಲಿಗಿ ಆಗಷ್ಟ.20
ಕಲೆ ಹಾಗೂ ಸಮಾಜ ಕ್ಷೇತ್ರದ ಎರಡು ಧ್ರುವ ನಕ್ಷತ್ರಗಳು ಮರೆಯಾಗಿದ್ದು ದುಃಖಕರ ವಾಗಿದೆ ಎಂದು ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ ವಿಷಾದಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಶನಿವಾರ ಸಂಜೆ ಇತ್ತೀಚೆಗೆ ಅಗಲಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ರಂಗಕಲಾವಿದೆ ಬಾಣದ ಶಿವಕುಮಾರಿ ಹಾಗೂ ಉದ್ಯಮಿ ಹಾಗೂ ಸಮಾಜ ಸೇವಕ ಆರ್.ಕೆ.ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ರಂಗ ಕಲಾವಿದರ ತವರೂರಾದ ಕೂಡ್ಲಿಗಿ ತಾಲೂಕಿನಲ್ಲಿ ಕಲಾ ಸೇವೆಯನ್ನ ಇಡೀ ನಾಡಿಗೆ ಪ್ರಚುರ ಪಡಿಸಿದ ಶಿವಕುಮಾರಿ ಸುಮಾರು ನಲವತ್ತು ವರ್ಷಗಳವರೆಗೂ ಅಭಿನಯಿಸುವ ಮೂಲಕ ರಂಗಭೂಮಿಯನ್ನ ಶ್ರೀಮಂತಗೊಳಿಸಿದ್ದಾರೆ ಎಂದರು. ಗ್ರಾಮಿಣ ಪ್ರತಿಭೆ ನಾಡಿನುದ್ದಕ್ಕೂ ಸಾವಿರಾರು ನಾಟಕಗಳನ್ನು ಅಭಿನಯಿಸಿ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಸದಸ್ಯೆಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ.ಇವರ ಕಲೆ ಮೆಚ್ಚಿ ಪಕ್ಕದ ಆಂದ್ರ ಸರ್ಕಾರ ಕೊಡಮಾಡುವ ನಂದಿ ಪ್ರಶಸ್ತಿಗೂ ಭಾಜನರಾಗಿದ್ದಾರೆ ಎಂದು ತಿಳಿಸಿದರು. ಓದಿದ್ದು ಮೂರನೇ ತರಗತಿ ಯಾಗಿದ್ದರೂ, ಕಷ್ಟಪಟ್ಟು ಹೋಟೆಲ್ ಉದ್ಯಮ ಮಾಡುವ ಮೂಲಕ ಪಟ್ಟಣದ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಅನೇಕ ಬಡ ವಿಧ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣ ಪ್ರೇಮಿಯಾಗಿದ್ದರು ದಿವಂಗತ ಆರ್.ಕೆ.ಶೆಟ್ಟಿ, ಪಟ್ಟಣದಲ್ಲಿ ನಡೆಯುವ ಪ್ರತಿ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಹಿತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು.

ಚಿಂತನಾ ಸಾಹಿತ್ಯ ಬಳಗ ಹಾಗೂ ಕನ್ನಡ ಮಿತ್ರ ಸಂಘಗಳ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಅನೇಕ ಸಾಹಿತ್ಯ ಚಟುವಟಿಕೆಗಳನ್ನು ಮಾಡಿದರು. ಪಟ್ಟಣದ ಸಾಹಿತ್ಯಾಸಕ್ತರಿಗೆ ಕನ್ನಡ ಭವನ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ನಿವೇಶನ ದಾನ ಮಾಡುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಕಾರಣರಾದರು ಎಂದರು. ಹಿರಿಯ ನಾಟಕಕಾರ ಎನ್.ಎಂ.ರವಿಕುಮಾರ್, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದಾರಾಧ್ಯ, ಕನ್ನಡ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಗುಡೇಕೋಟೆ ಹೋಬಳಿ ಕಸಾಪ ಅಧ್ಯಕ್ಷ ಟಿ.ಎಚ್.ಎಂ.ಶೇಖರಯ್ಯ, ಕೆ.ಎಸ್.ವೀರೇಶ್, ಟಿ.ಜಿ.ಮಲ್ಲಿಕಾರ್ಜುನ ಗೌಡ, ನಂದಿ ಬಸವರಾಜ, ಸೋಮಶೇಖರ ಆರಾಧ್ಯ,ಕೆ.ನಾಗನಗೌಡ, ವಿರುಪಾಕ್ಷ ಮೂರ್ತಿ,ಪ್ರಶಾಂತ ಗೌಡ,ರೇವಣ್ಣ, ಉಡುಚಪ್ಪ, ಆರ್.ಬಿ.ಬಸವರಾಜ, ಬಿ.ನಾಗರಾಜ, ಎಚ್.ವೀರಣ್ಣ, ಎಲೆ ನಾಗರಾಜ, ಎ.ತಿಂದಪ್ಪ, ಶಂಕ್ರಣ್ಣ, ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ