ಯಲಗೋಡ ಶಾಲೆಯಲ್ಲಿ ಗಣಿತ ಸ್ಪರ್ಧಾ ಕಾರ್ಯಕ್ರಮ.
ಯಲಗೋಡ ಸ.24

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡ ಹಾಗೂ ಗ್ರಾಮ ಪಂಚಾಯತ್ ಯಲಗೋಡ ಇವರ ವತಿಯಿಂದ ಅಕ್ಷರ ಪ್ರತಿಷ್ಠಾನ ಇವರ ಸಹಯೋಗ ದೊಂದಿಗೆ. ಯಲಗೊಡ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಹಾಂತೇಶ ಕೂಟನೂರು ಉದ್ಘಾಟಿಸಿದರು. ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಜೀವಿಸಲು ಗಣಿತದ ಪರಿಕಲ್ಪನೆ ಅತಿ ಅವಶ್ಯಕವಾಗಿದೆ. ಗಣಿತವು ವ್ಯಕ್ತಿಯ ಜೀವನದ ಅವಿಭಾಜ್ಯ ಸರಕಾರವು ನೀಡಿರುವ ಗಣಿತ ಕಲಿಕಾ ಕಿಟ ಬಳಸಿ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಲ್ಲಿ ಗಣಿತದ ಪರಿಕಲ್ಪನೆ ಮೂಡಿಸ ಬೇಕೆಂದು ಹೇಳುವುದರ ಮೂಲಕ ಮತ್ತು ಶಾಲಾ ಮಕ್ಕಳ ಗಣಿತ ಸ್ಪರ್ಧಾ ಕಾರ್ಯಕ್ರಮದ ರೂಪರೇಷ ಕುರಿತು ಈ ಕಾರ್ಯಕ್ರಮದ ಉಸ್ತುವಾರಿ ಶಿಕ್ಷಕರಾದ ಎ ಎ ಕುರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿ.ಮ.ಚೌಧರಿ ಸಮೂಹ ಸಂಪನ್ಮೂಲ ವ್ಯಕ್ತಿ. ಯಲಗೋಡ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡ ಪ್ರಭಾರಿ ಮುಖ್ಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಅಂಕಲಗಿ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಫಿಕ್ ಕನಮೇಶ್ವರ.ಪತ್ರಕರ್ತರಾದ ಭೀಮಣ್ಣ ಹಚ್ಯಾಳ್. ಸೀತಾರಾಮ್ ಚೌಹಾಣ್. ಎಂ ಐ ನಾಟಿಕರ ಎಲ್ ಪಿ ಎಸ್ ಯಲಗೋಡ ತಾಂಡೆ. ಎಂ ಪಿ ಕನಸೆ ಎಲ್‌ಪಿಎಸ್ ಬಸರಿವಸ್ತಿ ಯಲಗೋಡ ಹಾಗೂ ಯಲಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನೋಟ್ ಬುಕ್ಕ ಮತ್ತು ಪೆನ್ನು ನೀಡುವುದರ ಮೂಲಕ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿತರಿಸಿದರು.ಈ ಕಾರ್ಯಕ್ರಮವನ್ನು ಶ್ರೀ ಸುರೇಶ್ ಬಡಿಗೇರ ನಿರೂಪಿಸಿದರು. ಶ್ರೀ ರಾಘವೇಂದ್ರ ಉಂಡಿಗೇರ ಸ್ವಾಗತಿಸಿದರು. ಶ್ರೀಮತಿ ಮಂಗಲಾಬಾಯಿ ಅಲ್ಮದ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ