ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ – ಜಾತ್ರಾ ಮಹೋತ್ಸವ.
ಕೋಡಿಹಳ್ಳಿ ಏ.08

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದಿನಿಂದ ಗ್ರಾಮೀಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಚೌಡೇಶ್ವರಿ ದೇವಿಯನ್ನು ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಂಗೆ ಪೂಜೆಗೆ ಕರೆ ದೊಯ್ಯಲಾಯಿತು.ನಂತರ ಹೂವಿನ ಹಾರಗಳಿಂದ, ದೇವಿಯನ್ನು ಶೃಂಗಾರ ಮಾಡಲಾಯಿತು, ಆನಂತರ ಸಕಲ ಪೂಜಾ ವಿಧಿ ವಿಧಾನಗಳಿಂದ ಗಂಗಾ ಪೂಜೆ ಮಾಡಿ ಅದ್ದೂರಿಯಾಗಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.ಇನ್ನೂ ಗ್ರಾಮದ ಪಾದಗಟ್ಟೆ ಇಂದ ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಕೀಲು ಕುದುರೆ, ಹೂವು, ಹಣ್ಣು ಕಾಯಿ ತಾಯಿಗೆ ಭಕ್ತರು ಸಮರ್ಪಿಸಿವರು, ಮಂಗಳ ವಾದ್ಯಗಳೊಂದಿಗೆ ತಾಯಿಯ ದರ್ಶನ ಪಡೆದು ಸಾವಿರಾರು ಭಕ್ತರು ಶ್ರೀ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾದರು.ನಂತರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖಂಡರಾದ ದೊಡ್ಡ ಓಬಯ್ಯ ಮಾತನಾಡಿ 50 ವರ್ಷಗಳ ನಂತರ ನಮ್ಮ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದಿರುವುದು ಅತ್ಯಂತ ಸಂತಸದ ವಿಷಯ ಇಂದು ಗ್ರಾಮದಲ್ಲಿ ಮೂರು ದಿನಗಳ ಕಾಲ ತಾಯಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಹಮ್ಮಿಕೊಂಡಿರುವುದು ಅತ್ಯಂತ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು..ನಂತರ ಗ್ರಾಮದ ಮುಖಂಡರಾದ ಜಿ.ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲ ಸಮುದಾಯದವರು ಪಾಲ್ಗೊಂಡು ಮೂರು ದಿನಗಳ ಕಾಲ ನಡೆಯುವ ಈ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಯಶಸ್ವಿ ಗೊಳಿಸಬೇಕು, ಈ ತಾಯಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿ ಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಏಪ್ರಿಲ್ 08,09,10 ದಿನಗಳ ಕಾಲ ನಡೆಯುವ ಕೋಡಿಹಳ್ಳಿಯ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ವಾಲ್ಮೀಕಿ ಯುವಕ ನಾಟ್ಯ ಕಲಾ ಸಂಘದ ವತಿಯಿಂದ ‘ಜೋಡಿ ಹಕ್ಕಿಗಳ ಸಂಗಮ” ಅರ್ಥಾತ್ “ಪ್ರೀತಿಗೆ ಶರಣಾದ ಗರುಡ” ಮತ್ತು ಮೆಗಾಸ್ಟಾರ್ ಚಿರಂಜೀವಿ ಯುವ ನಾಟ್ಯ ಕಲಾ ಸಂಘದ ವತಿಯಿಂದ “ಒಲವಿನ ಪ್ರೇಮ ಮಂದಿರ” ಅರ್ಥಾತ್ “ಸೇಡಿನ ವಿಷ ಸರ್ಪ” ಹಾಗೂ ಶ್ರೀ ಜೈ ಭೀಮ್ ಯುವ ನಾಟ್ಯ ಕಲಾ ಸಂಘದ ವತಿಯಿಂದ ಸುಂದರ ಸಾಮಾಜಿಕ ನಾಟಕ “ಕುಡುಕ ಕಟ್ಟಿದ ಪ್ರೇಮ ಕೋಟೆ” ಅರ್ಥಾತ್ “ಹುಚ್ಚ ಮೆಚ್ಚಿದ ಹೂವು” ಎಂಬ ಸುಂದರ ಸಾಮಾಜಿಕ ನಾಟಕವನ್ನು ಕಲಾವಿದರು ಅಭಿನಯಿಸಲಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗ್ರಾಮದ ಬಾಲಯ್ಯ, ಒಬಣ್ಣ, ಬಸಯ್ಯ, ಪಾಲಯ್ಯ, ಗೋಪಣ್ಣ, ತಿಪ್ಪಯ್ಯ ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಓಬಯ್ಯ, ಟಿ. ರಾಜಣ್ಣ, ಪಿ.ಪ್ರಹಲ್ಲದ್, ಗ್ರಾಮ ಪಂಚಾಯಿತಿ ಸದಸ್ಯರು ಆದ ಎಸ್. ಟಿ. ರೇವಣ್ಣ, ಟಿ. ರಾಜಣ್ಣ, ದ್ರಾಕ್ಷಾಯಿಣಿ ನಾಗರಾಜ್, ಡಿ.ಓ ಲಕ್ಷ್ಮಿ , ಶ್ರೀಮತಿ ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಸಣ್ಣ ನಾಗಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಎಂ.ಏಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಮಲ್ಲಯ್ಯ, ಹನುಮಂತಪ್ಪ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್,ಎಂ.ಟಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಶ್ರೀನಿವಾಸ್, ಮಾರಣ್ಣ, ಹನುಮಂತಪ್ಪ,ದುರುಗಣ್ಣ,ಸಣ್ಣ ತಿಪ್ಪೇಸ್ವಾಮಿ, ಮುಂತಾದ ಊರಿನ ಸಮಸ್ತ ಗ್ರಾಮಸ್ಥರು ಯುವಕರು, ನಾಗರೀಕ ಬಂಧುಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಶಿವಮೂರ್ತಿ.ಕೋಡಿಹಳ್ಳಿ.ಚಿತ್ರದುರ್ಗ