ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ರಚಿಸುವಂತೆ ಕ್ರಮಕ್ಕೆ ಒತ್ತಾಯಿಸಿ – ಬಿ.ಇ.ಓ ರವರಿಗೆ ಮನವಿ.
ಸಂಡೂರು ಜೂನ್.27

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ – ರಾಜ್ಯ ಎಸ್.ಡಿ.ಎಂ.ಸಿ ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ, ಸಂಡೂರು ತಾಲೂಕು ಘಟಕದಿಂದ. ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ರಚಿಸುವಂತೆ, ಸೂಕ್ತ ಕ್ರಮ ಜರುಗಿಸಬೇಕೆಂದು ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರರವರ ನೇತೃತ್ವದಲ್ಲಿ. ಜೂ26ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣಾಧಿಕಾರಿಗಳಿಗೆ ಘೋಷಣೆಗಳ ಕೂಗುವುದರೊಂದಿಗೆ ತಮ್ಮ ಹಕ್ಕೋತ್ತಾಯ ಪತ್ರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಡೂರು ತಾಲೂಕು ಅಧ್ಯಕ್ಷ ಸೋವೇನಹಳ್ಳಿ ಈಶ್ವರಪ್ಪ, ರಾಜ್ಯ ಘಟಕ ಸದಸ್ಯೆ ಲಕ್ಷ್ಮೀದೇವಿ ಸೇರಿದಂತೆ. ತಾಲೂಕು ಘಟಕದ ರಾಜೇಶ್ವರಿ, ಹುಡೇಂ ಮಂಜುನಾಥ, ಬಣಕಾರ ಮೂಗಪ್ಪ ಸೇರಿದಂತೆ ಮತ್ತಿತರರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ