ಎರಡನೇ ಹಾಜರಾತಿಗೆ ವಿರೋಧ ವ್ಯಕ್ತಪಡಿಸಿದ ನರೇಗಾ ಕಾರ್ಮಿಕರು.
ಬಂಡೆ ಬಸಾಪುರ ಮೇ.24

ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಬಂಡೆ ಬಸಾಪುರ ತಾಂಡದ ಗ್ರಾಮದ ನರೇಗಾ ಕಾರ್ಮಿಕರು ಎರಡನೇ ಅವಧಿಯ ಹಾಜರಾತಿಯನ್ನು ನಮ್ಮ ವಿರೋಧ ಇದೆ ಎಂದು ಕಾರ್ಮಿಕರು ದೂರಿದ್ದಾರೆ.ಕಾರಣ ಮೊದಲು ನರೇಗಾ ಕೆಲಸ ಕಾರ್ಮಿಕರಿಗೆ 10 ಗಂಟೆ ಒಳಗೆ ಒಂದೇ ಬಾರಿಗೆ ಹಾಜರಾತಿ ಇತ್ತು ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಲಸದ ಸಮಯದಲ್ಲಿ ಎರಡೆರಡು ಸಲ ಜಿಪಿಎಸ್ ತಂತ್ರಜ್ಞಾನದಲ್ಲಿ ಹಾಜರಾತಿ ಹಾಕುವುದು ನಮಗೆ ತೊಂದರೆ ಉಂಟಾಗುತ್ತಿದೆ. ನಾವು ಬೆಳಗ್ಗೆ 5:30 ಕ್ಕೆ ಕೆಲಸಕ್ಕೆ ಹಾಜರಿದ್ದು ಬೆಳಗಿನ ಸಮಯ ದಿಂದ 10 ರವರೆಗೆ ಯಾವುದೇ ಉಪಹಾರ ವಿಲ್ಲದೆ ಕೆಲಸ ಮಾಡುತ್ತಿದ್ದೇವೆ ಆದರೆ 11 ಗಂಟೆಯವರೆಗೆ ಉಪವಾಸವಿದ್ದು, ಕೆಲಸ ಮಾಡುವುದು ಕಷ್ಟವಾಗುತ್ತಿದೆ.

ಇದರ ಜೊತೆಗೆ ನಮ್ಮ ಕುಟುಂಬದವರು ಉಪವಾಸ ಇರ ಬೇಕಾಗುತ್ತದೆ. ಈಗ ಮಳೆಗಾಲ ಬಂದಿದ್ದು ನಮಗಿರುವ ಅಲ್ಪ ಸ್ವಲ್ಪ ಭೂಮಿಗೆ ಬಿತ್ತನೆಗೆ ಕೆಲಸಕ್ಕೆ ಮತ್ತು ಮಕ್ಕಳ ಶಾಲೆಗೆ ಕಳುಹಿಸಲು ಹಾಗೂ ಇನ್ನಿತರ ಕೆಲಸಗಳಿಗೆ ತೊಂದರೆ ಆಗುತ್ತಿದ್ದು ಈ ಕೂಲಿ ಕೆಲಸವನ್ನು ನಂಬಿಕೊಂಡು ನಾವು ಈ ಇದ್ದ ಹಳೆಯ ಹಾಜರಾತಿ ವ್ಯವಸ್ಥೆಯು ಚೆನ್ನಾಗಿದ್ದು ಎರಡೆರಡು ಸಲ ಜಿಪಿಎಸ್ ಹಾಜರಾತಿಗೆ ಕೈ ಬಿಡಲು ನರೇಗಾ ಕಾರ್ಮಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಕಾರ್ಮಿಕರು ನರೇಗಾ ಕೆಲಸ ಮಾಡುವಾಗ ಕಳಳಿಯ ಮನವಿಯನ್ನು ನಮ್ಮ ಸುದ್ದಿ ವಾಹಿನಿಯ ಮೂಲಕ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಕೈ ಮುಗಿತು ಮನವಿ ಮಾಡಿ ಕೊಂಡಿದ್ದಾರೆ.ರೇಕ್ಯಾ ನಾಯ್ಕ್ ,ಪೀ.ಲಷ್ಮಿಪತಿ ಪ್ರಕಾಶ್ ನಾಯ್ಕ್, ವಾಲ್ಯ ನಾಯ್ಕ್ ಸರಸ್ವತಿ ಬಾಯಿ ,ಕಮಲ ಬಾಯಿ ,ಭಾರತಿ ಬಾಯಿ ,ಮಲ್ಲೇಶ್ , ಚಂದ್ರ ನಾಯ್ಕ್ ,ಕೊಟ್ರೇಶ್ ನಾಯ್ಕ್ ,ಸಂತೋಷ ಪೀ,ರಾಮ ನಾಯ್ಕ್ ಇತರರು ನರೇಗಾ ಕಾರ್ಮಿಕರು ಹಾಜರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.