ಅತೀ ವಿಜೃಂಭಣೆಯಿಂದ ಜರುಗಿದ ಹಡಗಲಿ ಶ್ರೀ ರುದ್ರಮುನೇಶ್ವರ ರಥೋತ್ಸವ.
ಹುನಗುಂದ ಏಪ್ರಿಲ್.24

ತಾಲೂಕಿನ ಹಡಗಲಿ ಗ್ರಾಮದ ಶ್ರೀ ರುದ್ರಮುನೇಶ್ವರ ಜಾತ್ರೆಯ ನಿಮಿತ್ಯ ಮಂಗಳವಾರ ಸಾಯಂಕಾಲ ೬ ಗಂಟೆಗೆ ಸಕಲ ಸಂತ, ಶರಣ,ಮಠಾಧೀಶರ ಸಮ್ಮುಖದಲ್ಲಿ ಶ್ರೀ ರುದ್ರಮುನೇಶ್ವರ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.ಗಂಗೂರ ಗ್ರಾಮದಿಂದ ಕಳಸ, ಹಿರೇಮಳಗಾವಿ ಯಿಂದ ರಥಕ್ಕೆ ಹಗ್ಗ,ಕಿರಸೂರ ದಿಂದ ನಂದಿಕೋಲ, ಹೂವನೂರ ಗ್ರಾಮದಿಂದ ತಳಿರು ತೋರಣ ಹಾಗೂ ಬಾಳೆಕಂಬ ದಿಂದ ಹಡಗಲಿ ಗ್ರಾಮದ ಪ್ರಮುಖ ಬಿದಿಯಲ್ಲಿ ಮೆರವಣೆಗೆ ಮೂಲಕ ಮಠಕ್ಕೆ ಆಗಮಿಸಿತು.ನಂತರ ವಿವಿಧ ಹೂವು, ರುದ್ರಾಕ್ಷಿ ಮಾಲೆ ಹಾಗೂ ಧ್ವಜಗಳಿಂದ ರಥಕ್ಕೆ ಶೃಂಗಾರ ಮಾಡಲಾಯಿತು.ಸಾಯಂಕಾಲ ೬ ಗಂಟೆಗೆ ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ನೇತೃತ್ವದಲ್ಲಿ ಮತ್ತು ನಾಡಿನ ಹರಗುರು ಚರಮೂರ್ತಿಗಳ ಹಾಗೂ ಹಡಗಲಿ ಗ್ರಾಮ ಸೇರಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭನೆಯಿಂದ ರಥೋತ್ಸವ ಜರುಗಿತು. ಇದಕ್ಕಿಂತ ಪೂರ್ವದಲ್ಲಿ ಹುಚ್ಚಯ್ಯನ ರಥವನ್ನು ಗ್ರಾಮದ ಸಮಸ್ತ ಮಹಿಳೆಯರು ಯಶಸ್ವಿಯಾಗಿ ಎಳೆಯುವ ಮೂಲಕ ವಿಶೇಷತೆಯನ್ನು ಮೆರೆದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ