ಗೃಹ ಜ್ಯೋತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಬಿರಾದಾರ ಕರೆ.
ನಾದ ಜೂನ್.20

ಘನ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ನಾದ ಶಾಖೆಯಲ್ಲಿ ಇಂಡಿ ವಿಭಾಗದ ಮಾನ್ಯ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀ S A ಬಿರಾದಾರ ಸರ್ ಉದ್ಘಾಟಿಸಿ.ನಂತರ ನಾದ ಗ್ರಾಮದ ಗ್ರಾಮ ವನ್ ಕಛೇರಿಗೆ ತೆರಳಿ ಕೆಲವು ಅರ್ಜಿಗಳನ್ನು ನೊಂದಾಯಿಸಿರುವದನ್ನು ಪರಿಶೀಲಿಸಿದರು ಈ ಯೋಜನೆಯನ್ನು ವಿದ್ಯುತ್ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಗ್ರಾಹಕರು ಬಾಕಿ ಉಳದಿರುವ ಮೊತ್ತವನ್ನು ಕಟ್ಟಿ ಇಲಾಖೆಯೊಂದಿಗೆ ಸಹಕರಿಸಿರಿ ಎಂದು ಗ್ರಾಹಕರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಶ್ರೀಯುತ ವಿಜಯಕುಮಾರ್ ಹವಾಲ್ದಾರ ಸರ್, ನಾದ ಶಾಖೆಯ ಶಾಖಾಧಿಕಾರಿಗಾದ ಶ್ರೀ ಸಂತೋಷ್ ಬನಗೊಂಡೆ ಸರ್ ಮೇಲ್ವಿಚಾರಕರಾದ ಪವನ ಮಾನೆ, ಪವರ್ ಮ್ಯಾನ್ ಗಳಾದ ಮಹಾಂತೇಶ ಇಂಡಿ, ಮಲ್ಲು ಮನಗೂಳಿ, ಅರ್ಜುನ ಗಂಗಾಧರ, ಅವಿನಾಶ್ ಗೊಂದಳಿ, ಗ್ರಾಮ ವಿದ್ಯುತ್ ಪ್ರತಿನಿದಿಗಳಾದ.. ಶ್ರೀ ಅಶೋಕ ಪಾಟೀಲ. ನಕೂಲ ಕರಕಿ, ಮಾಣಿಕ ಬಿರಾದಾರ, ಶರಣು ಹೊಸೂರ ಹಾಗೂ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ. ಬಿ.ಹರಿಜನ.ಇಂಡಿ