ಕೆ.ಎಸ್.ಎಸ್ ಹಾಗೂ ಎಸ್.ಎಸ್.ಬಿ ಮಹಾ ವಿದ್ಯಾಲಯದಲ್ಲಿ ಸಸಿ ನೆಡವುದರ ಮೂಲಕ – ವಿಶ್ವ ಪರಿಸರ ದಿನಾಚರಣೆಯ ಆಚರಣೆ.
ರೋಣ ಜೂ.06

ನಾವು ಪರಿಸರವನ್ನು ಕಾಪಾಡಿ ಕೊಂಡರೆ ಅದು ನಮಗೆ ಒಳ್ಳೆಯ ಬದುಕು ಮತ್ತು ಆರೋಗ್ಯ ನೀಡುತ್ತದೆ ಎಂದು ಅಸೆಂಟ್ ಕಾಲೇಜಿನ ಪ್ರಾಂಶುಪಾಲ ಸಿ.ಬಿ ಪೊಲೀಸ ಪಾಟೀಲ್ ತಿಳಿಸಿದರು.ರೋಣ ನಗರದ ಎಸ್.ಎಸ್.ಬಿ ಪಿ.ಯು ಕಾಲೇಜ ಹಾಗೂ ಕೆ.ಎಸ್.ಎಸ್ ಪದವಿ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕದ ಅಡಿಯಲ್ಲಿ ಆಯೋಜಿಸಲಾದ ವಿಶ್ವ ಪರಿಸರದ ದಿನದ ಅಂಗವಾಗಿ ಮಾತನಾಡಿದರು.ಪರಿಸರವನ್ನು ಹಾಳು ಮಾಡದಂತೆ ನಮ್ಮಲ್ಲಿ ಜಾಗೃತಿ ಅವಶ್ಯಕವಾಗಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಿ, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಪರಿಸರ ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಇದೇ ಸಮಯದಲ್ಲಿ ಎಲ್ಲಾ ಮಹಾವಿದ್ಯಾಲಯದ ಉಪನ್ಯಾಸಕ ರಿಂದ ವಿದ್ಯಾರ್ಥಿಗಳು 50 ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು.ಈ ಸಮಯದಲ್ಲಿ ಸ್ಥಾನಿಕ ಮುಖ್ಯಸ್ಥರಾದ ಐ.ಬಿ ದಂಡಿನ್ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಎ.ಎಚ್ ನಾಯ್ಕರ್ ಹಾಗೂ ಕೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ, ಎಸ್.ಆರ್ ನದಾಫ ಹಾಗೂ ಎ.ಎಚ್ ನಾಯ್ಕರ, ಹಾಗೂ ಉಪನ್ಯಾಸಕರಾದ ಎಸ್.ವಿ ಸಂಕನಗೌಡ್ರ, ಎಂ.ವೈ ಕಿತ್ಲಿ, ಬಸು ಜಂಗಣ್ಣವರ್, ಎಸ್.ಎಸ್ ಮಠದ ಜ್ಯೋತಿ ಮೇಡಂ, ತುರಾಯಿದಸರ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

